ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷದ ಸಿದ್ಧಾಂತವನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸುತ್ತೇನೆ ಎಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
-
Paid a courtesy visit to Hon Prime Minister @narendramodi Ji and sought his blessings. Under his able leadership, country is achieving newer heights. With his valued guidance, I will aim to take the party and it’s ideology to every household. pic.twitter.com/yDoOWWbbqn
— Jagat Prakash Nadda (@JPNadda) January 23, 2020 " class="align-text-top noRightClick twitterSection" data="
">Paid a courtesy visit to Hon Prime Minister @narendramodi Ji and sought his blessings. Under his able leadership, country is achieving newer heights. With his valued guidance, I will aim to take the party and it’s ideology to every household. pic.twitter.com/yDoOWWbbqn
— Jagat Prakash Nadda (@JPNadda) January 23, 2020Paid a courtesy visit to Hon Prime Minister @narendramodi Ji and sought his blessings. Under his able leadership, country is achieving newer heights. With his valued guidance, I will aim to take the party and it’s ideology to every household. pic.twitter.com/yDoOWWbbqn
— Jagat Prakash Nadda (@JPNadda) January 23, 2020
ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಅವರು, 'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದಿದ್ದೇನೆ. ಅವರ ಸಮರ್ಥ ನಾಯಕತ್ವದಲ್ಲಿ ದೇಶವು ಎತ್ತರಕ್ಕೆ ಬೆಳೆಯುತ್ತಿದೆ. ಅವರ ಮೌಲ್ಯಯುತ ಮಾರ್ಗದರ್ಶನದೊಂದಿಗೆ ಪಕ್ಷ ಮತ್ತು ಸಿದ್ಧಾಂತವನ್ನ ಪ್ರತಿಯೊಬ್ಬರ ಮನೆಗೆ ಕೊಂಡೊಯ್ಯುತ್ತೇನೆ' ಎಂದಿದ್ದಾರೆ.
ಆಗ್ರದಲ್ಲಿ ಸಿಎಎ ಬೆಂಬಲಿಸಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುವಾಗ ನೋಯ್ಡ ಬಳಿ ಬಿಜೆಪಿ ಬೆಂಬಲಿಗರನ್ನ ಭೇಟಿ ಮಾಡಿದರು. ಇದಕ್ಕೂ ಮೊದಲು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಮತ್ತು ಜೆಎಸ್ಪಿ ಪಕ್ಷಗಳು ಆಂಧ್ರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿವೆ.
ಸೋಮವಾರ ನಡೆದ ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯಲ್ಲಿ ಜೆ.ಪಿ.ನಡ್ಡಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.