ETV Bharat / bharat

ಸೋಷಿಯಲ್​​ ಮೀಡಿಯಾಕ್ಕೆ ಕಡಿವಾಣ: ಆಕ್ಷೇಪಾರ್ಹ ವಿಷಯ ಹಾಕಿದರೆ ಬೀಳುತ್ತೆ ದುಬಾರಿ ದಂಡ! - ಇಂಗ್ಲೆಂಡ್​ ಸರ್ಕಾರ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಹಾನಿಕಾರಕ ವಿಷಯಗಳನ್ನು ನಿಯಂತ್ರಿಸಲು ಇಂಗ್ಲೆಂಡ್​ ಸರ್ಕಾರ ಮುಂದಾಗಿದ್ದು, ಅಂತಹವರ ವಿರುದ್ಧ ದುಬಾರಿ ದಂಡ ವಿಧಿಸಲು ನಿರ್ಧರಿಸಿದೆ.

social media
ಸಾಮಾಜಿಕ ಜಾಲತಾಣ
author img

By

Published : Feb 13, 2020, 1:08 PM IST

ಲಂಡನ್​: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಹಾನಿಕಾರಕ ವಿಷಯಗಳನ್ನು ನಿಯಂತ್ರಿಸಲು ಇಂಗ್ಲೆಂಡ್​ ಸರ್ಕಾರ ಮುಂದಾಗಿದ್ದು, ಅಂತಹವರ ವಿರುದ್ಧ ದುಬಾರಿ ದಂಡ ವಿಧಿಸಲು ನಿರ್ಧರಿಸಿದೆ.

ಈ ಸಂಬಂಧ ಸಂಸ್ಕೃತಿ ಮತ್ತು ಮಾಧ್ಯಮ ರಾಜ್ಯ ಕಾರ್ಯದರ್ಶಿ ನಿಕಿ ಮೋರ್ಗನ್ ಅವರು ಸಂಸತ್ತಿನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈ ಸಂಬಂಧದ ಮೇಲ್ವಿಚಾರಣೆ ಉಸ್ತುವಾರಿ ನೋಡಿಕೊಳ್ಳಲು ಸಂವಹನ ಕಚೇರಿಯನ್ನು (ಆಫ್‌ಕಾಮ್) ಸ್ಥಾಪಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ. 'ವಾಚ್​ಡಾಗ್'​ ಎಂದು ಕರೆಲ್ಪಡುವ ಮಾಧ್ಯಮವೂ ಇಂತಹ ಆಕ್ಷೇಪಾರ್ಹ ಅಂಶಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ ಎಂದು ಬೇಸರ ಕೂಡಾ ವ್ಯಕ್ತಪಡಿಸಿದರು.

ಮೋರ್ಗನ್ ಮತ್ತು ಆಂತರಿಕ ಸಚಿವ ಪ್ರೀತಿ ಪಟೇಲ್ ಅವರು ಆಫೊಕಾಮ್ ನೀಡಿರುವ ವರದಿಯನ್ನು ಮುಂದಿಟ್ಟಿದ್ದು, ಈ ವರದಿಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ಎಚ್ಚರಿಕೆ, ಸೂಚನೆ ಮತ್ತು ದಂಡ ನೀಡುವ ಅಧಿಕಾರ ಮತ್ತು ರಕ್ಷಣೆ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಬಂಧಿತ ಕಂಪನಿಗಳು ವಿಫಲವಾಗಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್​ ಸರ್ಕಾರ ಸಾಮಾಜಿಕ ಜಾಲತಾಣಗಳು ಹಾಗೂ ತಂತ್ರಜ್ಞಾನವನ್ನ ದುರುಪಯೋಗ ಮಾಡಿಕೊಳ್ಳುವವರ ಮೇಲೆ ನಿಯಂತ್ರಣ ಮಾಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.