ETV Bharat / bharat

ಜಾಗತಿಕಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ.. ಭಾರತದ ದುಡ್ಡಿಗೆ ಕೈಹಾಕಿ ಪೆಚ್ಚಾದ ಪಾಕ್..! - ಹೈದರಾಬಾದ್​ ನಿಜಾಮರ ಹಣ

ಹೈದರಾಬಾದ್‌ ನಿಜಾಮರ ಸುಮಾರು ₹308.20 ಕೋಟಿ (35 ದಶಲಕ್ಷ ಪೌಂಡ್‌) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್​ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿತ್ತು. ಸದ್ಯ ಈ ವಿಚಾರಣೆ ಮುಕ್ತಾಯವಾಗಿದ್ದು, ಲಂಡನ್​ನ ಹೈಕೋರ್ಟ್​ ತನ್ನ ತೀರ್ಪು ಪ್ರಕಟಿಸಿದೆ.

ಜಾಗತಿಕಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ
author img

By

Published : Oct 2, 2019, 6:30 PM IST

Updated : Oct 2, 2019, 7:10 PM IST

ಲಂಡನ್​: ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಳು ದಶಕಗಳ ವಿವಾದಿತ ಹಣಕಾಸು ವ್ಯಾಜ್ಯದಲ್ಲಿ ಭಾರತಕ್ಕೆ ಬಹುದೊಡ್ಡ ಗೆಲುವು ದೊರೆತಿದೆ.

ಹೈದರಾಬಾದ್‌ ನಿಜಾಮರ ಸುಮಾರು ₹308.20 ಕೋಟಿ (35 ದಶಲಕ್ಷ ಪೌಂಡ್‌) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್​ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿತ್ತು. ಸದ್ಯ ಈ ವಿಚಾರಣೆ ಮುಕ್ತಾಯವಾಗಿದ್ದು, ಲಂಡನ್​ನ ಹೈಕೋರ್ಟ್​ ತನ್ನ ತೀರ್ಪು ಪ್ರಕಟಿಸಿದೆ. ಎಲ್ಲ ವಾದ- ಪ್ರತಿವಾದ ಆಲಿಸಿ ಪಾಕಿಸ್ತಾನದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಮೂರ್ತಿ ಜಸ್ಟೀಸ್​ ಮಾರ್ಕಸ್ ಸ್ಮಿತ್​​ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಭಾರತ ಮಂಡಿಸಿದ್ದ ವಾದಕ್ಕೆ ಮನ್ನಣೆ ದೊರೆತಿದೆ.

ಏನಿದು ಪ್ರಕರಣ..?

ಲಂಡನ್​​ ಬ್ಯಾಂಕ್​​​​ನಲ್ಲಿರುವ ಹತ್ತು ಮಿಲಿಯನ್ ಹಾಗೂ ಒಂಬತ್ತು ಶಿಲ್ಲಿಂಗ್​​ಗಾಗಿ​​ ಹೈದರಾಬಾದ್ ನಿಜಾಮರ ಎಂಟನೇ ವಂಶಸ್ಥ ಪ್ರಿನ್ಸ್ ಮುಕಾರಮ್​​​ ಝಾ ಹಾಗೂ ಈತನ ಕಿರಿಯ ಸಹೋದರ ಮುಫಾಕಮ್ ಝಾ 35 ಮಿಲಿಯನ್ ಪೌಂಡ್​ಗಾಗಿ ಕೋರ್ಟ್​ ಮೊರೆ ಹೋಗಿದ್ದರು. 1947ರ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ವೇಳೆ ಹೈದರಾಬಾದ್​ ನಿಜಾಮರು ತಮಗೆ ಸೇರಿದ್ದ ಒಂದು ಮಿಲಿಯನ್ ಪೌಂಡ್ ಹಣವನ್ನು ಲಂಡನ್​ ಬ್ಯಾಂಕ್​ನಲ್ಲಿ ಠೇವಣಿ ಇರಿಸಿದ್ದರು.

ಹೈದರಾಬಾದ್ ನಿಜಾಮರ ಹಣಕ್ಕೆ ಪಾಕ್ ತಕರಾರು; ತೀರ್ಪಿನ ಹಂತ ತಲುಪಿದ ದಶಕಗಳ ಹೋರಾಟ

ನಿಜಾಮ್​ ವಂಶಸ್ಥರ ಕಾನೂನು ಹೋರಾಟಕ್ಕೆ ಭಾರತ ಸರ್ಕಾರವೂ ಬೆಂಬಲ ಸೂಚಿಸಿತ್ತು. ಆದರೆ, ಅತ್ತ ಪಾಕಿಸ್ತಾನ ಈ ಮೊತ್ತ ತಮಗೆ ಸೇರಬೇಕು ಎಂದು ಕೋರ್ಟ್​ನಲ್ಲಿ ತನ್ನ ವಾದ ಮಂಡಿಸಿತ್ತು. ಈ ಮೂಲಕ ಈ ವ್ಯಾಜ್ಯ ಎರಡು ದೇಶಗಳ ನಡುವಿನ ಹೋರಾಟವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. "ನಿಜಾಮರ ಎಂಟನೇ ವಂಶಸ್ಥರ ದಶಕಗಳ ದೀರ್ಘ ಕಾನೂನು ಹೋರಾಟ ಸದ್ಯ ಅಂತಿಮ ಹಂತ ತಲುಪಿದೆ. ಹಣ ನಿಜಾಮರಿಗೆ ಸೇರದಂತೆ ಕಳೆದ 70 ವರ್ಷದಿಂದ ಪಾಕಿಸ್ತಾನ ತಕರಾರು ಎತ್ತಿತ್ತು. ಇತ್ತೀಚೆಗೆ ಮುಕ್ತಾಯವಾದ ವಿಚಾರಣೆಯಲ್ಲಿ ಮೊತ್ತ ನಿಜಾಮರಿಗೆ ಸೇರುವ ಆಶಾವಾದ ಮೂಡಿದೆ" ಎಂದು ನಿಜಾಮ್ ಪರ ವಕೀಲ ಪೌಲ್ ಹೆವಿಟ್ ಭರವಸೆ ವ್ಯಕ್ತಪಡಿಸಿದ್ದಾರೆ.

Intro:Body:

ಲಂಡನ್​: ಭಾರತ ಹಾಗೂ ಪಾಕಿಸ್ತಾನದ ನಡುವಿನ ಏಳು ದಶಕಗಳ ವಿವಾದಿತ ಹಣಕಾಸು ಸಂಬಂಧಿತ ವ್ಯಾಜ್ಯಯಲ್ಲಿ ಭಾರತ ಬಹುದೊಡ್ಡ ಗೆಲುವು ದೊರೆತಿದೆ.

ಹೈದರಾಬಾದ್‌ ನಿಜಾಮರ ಸುಮಾರು ₹ 308.20 ಕೋಟಿ (35 ದಶಲಕ್ಷ ಪೌಂಡ್‌) ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂಗ್ಲೆಂಡ್​ನಲ್ಲಿ ಕಾನೂನು ಸಮರ ಹಲವು ದಶಕಗಳಿಂದ ನಡೆಯುತ್ತಿತ್ತು. ಸದ್ಯ ಈ ವಿಚಾರಣೆ ಮುಕ್ತಾಯವಾಗಿದ್ದು, ಲಂಡನ್​ನ ಹೈಕೋರ್ಟ್​ ತನ್ನ ತೀರ್ಪು ಪ್ರಕಟಿಸಿದೆ.

ಎಲ್ಲ ವಾದ- ಪ್ರತಿವಾದ ಆಲಿಸಿ ಪಾಕಿಸ್ತಾನದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು  ಮುಖ್ಯ ನ್ಯಾಯಮೂರ್ತಿ ಜಸ್ಟೀಸ್​ ಮಾರ್ಕಸ್ ಸ್ಮಿತ್​​ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಭಾರತ ಮಂಡಿಸಿದ್ದ ವಾದಕ್ಕೆ ಮನ್ನಣೆ ದೊರೆತಿದ್ದು, ನಿಜಾಮರಿಗೆ ಸೇರಿದ ಒಂದು ಮಿಲಿಯನ್ ಪೌಂಡ್ ಸದ್ಯದ ಮೌಲ್ಯ ₹3,06,08,04,231 ಎಂದು ಅಂದಾಜಿಲಾಗಿದೆ.

ಏನಿದು ಪ್ರಕರಣ..?

ಲಂಡನ್​​ ಬ್ಯಾಂಕ್​​​​ನಲ್ಲಿರುವ ಹತ್ತು ಮಿಲಿಯನ್ ಹಾಗೂ ಒಂಭತ್ತು ಶಿಲ್ಲಿಂಗ್​​ಗಾಗಿ​​ ಹೈದರಾಬಾದ್ ನಿಜಾಮರ ಎಂಟನೇ ವಂಶಸ್ಥ ಪ್ರಿನ್ಸ್ ಮುಕಾರಮ್​​​ ಝಾ ಹಾಗೂ ಈತನ ಕಿರಿಯ ಸಹೋದರ ಮುಫಾಕಮ್ ಝಾ 35 ಮಿಲಿಯನ್ ಪೌಂಡ್​ಗಾಗಿ ಕೋರ್ಟ್​ ಮೊರೆ ಹೋಗಿದ್ದರು.

1947ರ ಭಾರತ ಹಾಗೂ ಪಾಕಿಸ್ತಾನ ವಿಭಜನೆಯ ವೇಳೆ ಹೈದರಾಬಾದ್​ ನಿಜಾಮರು ತಮಗೆ ಸೇರಿದ್ದ ಒಂದು ಮಿಲಿಯನ್ ಪೌಂಡ್ ಹಣವನ್ನು ಲಂಡನ್​ ಬ್ಯಾಂಕ್​ನಲ್ಲಿ ಠೇವಣಿ ಇರಿಸಿದ್ದರು.

ನಿಜಾಮ್​ ವಂಶಸ್ಥರ ಕಾನೂನು ಹೋರಾಟಕ್ಕೆ ಭಾರತ ಸರ್ಕಾರವೂ ಬೆಂಬಲ ಸೂಚಿಸಿತ್ತು. ಆದರೆ ಅತ್ತ ಪಾಕಿಸ್ತಾನ ಈ ಮೊತ್ತ ತಮಗೆ ಸೇರಬೇಕು ಎಂದು ಕೋರ್ಟ್​ನಲ್ಲಿ ತನ್ನ ವಾದ ಮಂಡಿಸಿತ್ತು. ಈ ಮೂಲಕ ಈ ವ್ಯಾಜ್ಯ ಎರಡು ದೇಶಗಳ ನಡುವಿನ ಹೋರಾಟವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.

"ನಿಜಾಮರ ಎಂಟನೇ ವಂಶಸ್ಥರ ದಶಕಗಳ ದೀರ್ಘ ಕಾನೂನು ಹೋರಾಟ ಸದ್ಯ ಅಂತಿಮ ಹಂತ ತಲುಪಿದೆ. ಹಣ ನಿಜಾಮರಿಗೆ ಸೇರದಂತೆ ಕಳೆದ 70 ವರ್ಷದಿಂದ ಪಾಕಿಸ್ತಾನ ತಕರಾರು ಎತ್ತಿತ್ತು. ಇತ್ತೀಚೆಗೆ ಮುಕ್ತಾಯವಾದ ವಿಚಾರಣೆಯಲ್ಲಿ ಮೊತ್ತ ನಿಜಾಮರಿಗೆ ಸೇರುವ ಆಶಾವಾದ ಮೂಡಿದೆ" ಎಂದು ನಿಜಾಮ್ ಪರ ವಕೀಲ ಪೌಲ್ ಹೆವಿಟ್ ಭರವಸೆ ವ್ಯಕ್ತಪಡಿಸಿದ್ದಾರೆ.

Conclusion:
Last Updated : Oct 2, 2019, 7:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.