ETV Bharat / bharat

ಫುಟ್ಬಾಲ್​ ಚಾಂಪಿಯನ್ಸ್ ಲೀಗ್‌: ಎರಡು ಸೀಸನ್​ಗಳಿಂದ ಮ್ಯಾಂಚೆಸ್ಟರ್ ಸಿಟಿ ಬ್ಯಾನ್​! - ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ

ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿಯನ್ನು ಚಾಂಪಿಯನ್ಸ್ ಲೀಗ್‌ನ ಮುಂಬರುವ ಎರಡು ಸೀಸನ್​ಗಳಲ್ಲಿ ಭಾಗವಹಿಸುವುದನ್ನು ಯುಇಎಫ್‌ಎ ನಿಷೇಧಿಸಿದೆ.

UEFA bans Man City  from Champions League for 2 seasons over 'serious breaches' of financial regulations
ಚಾಂಪಿಯನ್ಸ್ ಲೀಗ್‌ನ ಮುಂಬರುವ ಎರಡು ಸೀಸನ್​ಗಳಿಂದ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ಬ್ಯಾನ್​!
author img

By

Published : Feb 15, 2020, 11:36 AM IST

Updated : Feb 15, 2020, 12:21 PM IST

ನ್ಯಾನ್: ಇಂಗ್ಲಿಷ್​ ಪ್ರೀಮಿಯರ್​ ಲೀಗ್​ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್​ ಕ್ಲಬ್ ಚಾಂಪಿಯನ್ಸ್ ಲೀಗ್‌ನ ಮುಂಬರುವ ಎರಡು ಸೀಸನ್​ಗಳಲ್ಲಿ ಭಾಗವಹಿಸುವುದಂತೆ ಯುಇಎಫ್‌ಎ(UEFA) ನಿಷೇಧಿಸಿದೆ.

ಪ್ರಾಯೋಜಕತ್ವದ ಆದಾಯ ವಿಷಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್​​ ಅಸೋಸಿಯೇಷನ್ಸ್(UEFA) ಈ ಕ್ರಮ ಕೈಗೊಂಡಿದ್ದು, MCFCಗೆ 30 ಮಿಲಿಯನ್ ಯುರೋಗಳಷ್ಟು (33 ಮಿಲಿಯನ್ ಅಮೆರಿಕನ್​ ಡಾಲರ್​​) ದಂಡ ವಿಧಿಸಿದೆ. ಭಾರತೀಯ ಲೆಕ್ಕದಲ್ಲಿ ಇದು ಸುಮಾರು 232.4 ಕೋಟಿ ರೂ. ಆಗುತ್ತದೆ.

ಈ ಎಲ್ಲಾ ಸಾಕ್ಷ್ಯಾದಾರಗಳನ್ನು ಗಮನಿಸಿದ ತೀರ್ಪುಗಾರರು ​ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಯುಇಎಫ್ಎ ಕ್ಲಬ್ ಪರವಾನಗಿ ಮತ್ತು ಹಣಕಾಸಿನ ನ್ಯಾಯೋಚಿತ ಆಟದ ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರಾಯೋಜಕತ್ವದ ಆದಾಯವನ್ನು ಹೆಚ್ಚಿಸಿಕೊಡಿದೆ. ಅಲ್ಲದೆ 2012 ರಿಂದ 2016ವರೆಗೆ ಯುಇಎಫ್‌ಎಗೆ ಸಲ್ಲಿಸಿದ್ದ ಮಾಹಿತಿಯಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.

ಈ ಕಾರಣದಿಂದಾಗಿ ಜನವರಿ 22, 2020 ರಂದು ನಡೆದ ವಿಚಾರಣೆಯ ನಂತರ, ಜೋಸ್ ಡಾ ಕುನ್ಹಾ ರೊಡ್ರಿಗ್ಸ್​ ಅವರ ಅಧ್ಯಕ್ಷತೆಯ ಯುಇಎಫ್ಎ ಕ್ಲಬ್ ಫೈನಾನ್ಷಿಯಲ್ ಕಂಟ್ರೋಲ್ ಬಾಡಿ (ಸಿಎಫ್‌ಸಿಬಿ) ಯ ಅಡ್ಜಡಿಕೇಟರಿ ಚೇಂಬರ್ ಇಂದು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್​​ ಕ್ಲಬ್‌ಗೆ ಎರಡು ವರ್ಷ ಯುರೋಪ್​ ಲೀಗ್​ ಸೇರಿದಂತೆ ಯುರೋಪಿನಲ್ಲಿ ನಡೆಯುವ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

ಈ ತೀರ್ಪು ದೋಷಪೂರಿತವಾಗಿದೆ ಎಂದು ಮ್ಯಾಂಚೆಸ್ಟರ್​ ಸಿಟಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಅಬುಧಾಬಿ ಯುನೈಟೆಡ್​ ಗ್ರೂಪ್​​ ಮಾಲೀಕತ್ವ ಹೊ0ಂದಿರುವ ಮ್ಯಾಂಚೆಸ್ಟರ್​ ಸಿಟಿ ಕ್ಲಬ್​ 2019-20 ರ ಇಂಗ್ಲಿಷ್​​​​ ಪ್ರೀಮಿಯರ್​ ಲೀಗ್​ ಚಾಂಪಿಯನ್ ಆಗಿತ್ತು.

Last Updated : Feb 15, 2020, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.