ETV Bharat / bharat

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾವ ಮಾಧವ್ ಪಾಟಣಕರ್ ನಿಧನ - ಮಾಧವ್ ಪಟಂಕರ್ ನಿಧನ

ಶಿವಸೇನೆಯ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಮಾವ ಮಾಧವ್ ಪಾಟಣಕರ್, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ನಿನ್ನೆ ವಿಧಿವಶರಾಗಿದ್ದಾರೆ.

Uddhav Thackeray's father-in-law dead
ಮಾಧವ್ ಪಟಂಕರ್ ನಿಧನ
author img

By

Published : Jun 15, 2020, 2:42 PM IST

Updated : Jun 15, 2020, 3:01 PM IST

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಾವ ಮಾಧವ್ ಪಾಟಣಕರ್ ನಿನ್ನೆಯ ದಿವಸ ನಿಧನರಾಗಿದ್ದಾರೆ ಎಂದು ಶಿವಸೇನೆ ತಿಳಿಸಿದೆ.

ಮಾಧವ್ ಪಾಟಣಕರ್ ಅವರಿಗೆ 76 ವರ್ಷ ವಯಸ್ಸಾಗಿದ್ದು, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ನಿನ್ನೆ ಅಂಧೆರಿಯದ ಕ್ರಿಟಿಕೇರ್​​ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.

ಮಾಧವ್ ಪಾಟಣಕರ್ ಅವರ ಮಗಳು ರಶ್ಮಿ ಠಾಕ್ರೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ನಿ ಮತ್ತು ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕರಾಗಿದ್ದಾರೆ.

ಇಂದು ಬೆಳಗ್ಗೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಾಗಿದ್ದು, ಪಾಟಣಕರ್ ಸಾವಿಗೆ ಶಿವಸೇನೆ ಸೇರಿದಂತೆ ಹಲವು ರಾಜಕೀಯ ಮುಖಂಡರುಗಳು ಸಂತಾಪ ಸೂಚಿಸಿದ್ದಾರೆ.

Last Updated : Jun 15, 2020, 3:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.