ETV Bharat / bharat

ಮಹಾರಾಷ್ಟ್ರದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರು ಪೊಲೀಸ್​ ಸಿಬ್ಬಂದಿ ಹುತಾತ್ಮ

author img

By

Published : May 17, 2020, 3:57 PM IST

Updated : May 17, 2020, 8:32 PM IST

Two police personnel killed in encounter with Naxals in Maharashtra
ಪೊಲೀಸ್​ ಸಿಬ್ಬಂದಿ ಹುತಾತ್ಮ

15:50 May 17

ಗಡ್‌ಚಿರೋಲಿ (ಮಹಾರಾಷ್ಟ್ರ): ನಕ್ಸಲರು ಹಾಗೂ ಪೊಲೀಸರ​ ನಡುವಿನ ಎನ್​ಕೌಂಟರ್​ನಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ ಹುತಾತ್ಮರಾಗಿದ್ದು, ಮೂವರಿಗೆ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರ-ಛತ್ತೀಸ್​ಗಢದ ಗಡಿ ಜಿಲ್ಲೆಯಾದ ಗಡ್‌ಚಿರೋಲಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಆ್ಯಕ್ಷನ್​ ಫೋರ್ಸ್​ನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಧನಾಜಿ ಹೋಮ್ನೆ ಹಾಗೂ ಸಿ -60 ಸ್ಕ್ವಾಡ್‌ನ ಪೇದೆ ಕಿಶೋರ್ ಆತ್ರಮ್ ಹುತಾತ್ಮರಾಗಿದ್ದಾರೆ. ಗಾಯಗೊಂಡವರ ರಕ್ಷಣೆಗೆ ಹೆಲಿಕಾಪ್ಟರ್​ ಅನ್ನು ಕಳುಹಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಹೆಚ್ಚುವರಿಯಾಗಿ ಸಿ -60 ಸ್ಕ್ವಾಡ್‌ನ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.

Last Updated : May 17, 2020, 8:32 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.