ಮಲಪ್ಪುರಂ: ಕರಿಪುರ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮತ್ತೆ ಭಾರಿ ಪ್ರಮಾಣದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಇಬ್ಬರು ಪ್ರಯಾಣಿಕರಿಂದ ಸುಮಾರು 2333.7 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕೋಜಿಕೋಡ್ ನಿವಾಸಿ ಮೊಹ್ಮದ್ ಆಸೀಬ್ ಮತ್ತು ಕಣ್ಣೂರು ನಿವಾಸಿ ಜಝೀಲ ವಾಲಿಯಪರಂಬತ್ ಎಂಬ ಆರೋಪಿಗಳು ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದು, ಚೆಕ್ಕಿಂಗ್ ವೇಳೆ ಸಿಕ್ಕಿಬಿದ್ದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ಆರೋಪಿ ಆಸೀಬ್ನಿಂದ 1673.6 ಗ್ರಾಂ ಚಿನ್ನ ಹಾಗೂ ಜಝೀಲನಿಂದ ಸುಮಾರು 660.1 ಗ್ರಾಮ್ ಚಿನ್ನ ಸೇರಿ ಸುಮಾರು 90 ಲಕ್ಷ ಮೌಲ್ಯದ ಚಿನ್ನವನ್ನು ಸೀಜ್ ಮಾಡಿದ್ದಾರೆ.
ಆಸಬ್ ಎಂಬಾತ ಚಿನ್ನವನ್ನು ಮಾತ್ರೆ ರೂಪದಲ್ಲಿ ಹಾಗೂ ಜಝೀಲ್ ತನ್ನ ಒಳ ಉಡುಪಿನ ಒಳಗೆ ಚಿನ್ನವನ್ನು ಇಟ್ಟುಕೊಂಡು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಮಲಪ್ಪುರಂನಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದರು.