ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಮಂಡನೆ ವೇಳೆ ಗದ್ದಲ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತಾಗಿದ್ದ ಎಂಟು ಮಂದಿ ಸಂಸದರು ಸಂಸತ್ ಆವರಣದಲ್ಲಿನ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಸೋಮವಾರ ಬೆಳಗ್ಗೆ ಆರಂಭವಾದ ಧರಣಿ ರಾತ್ರಿಯೂ ಮುಂದುವರೆದಿದ್ದು, ಗಾಂಧಿ ಪ್ರತಿಮೆಯ ಬಳಿಯ ಹುಲ್ಲು ಹಾಸಿನ ಮೇಲೆ ಕುಳಿತು ಕೃಷಿ ಮಸೂದೆಗಳು ಹಾಗೂ ತಮ್ಮನ್ನು ಅಮಾನತುಗೊಳಿಸಿದ ನಿರ್ಧಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಹಲವು ವಿಪಕ್ಷಗಳ ನಾಯಕರು, ಸಂಸದರು ಅಮಾನತಾದ ಸಂಸದರನ್ನು ಭೇಟಿಯಾಗಿ ಪ್ರತಿಭಟನಾಕಾರರಿಗೆ ನೈತಿಕ ಬೆಂಬಲ ನೀಡಿದರು. ಗುಲಾಂ ನಬೀ ಆಜಾದ್, ಅಧೀರ್ ರಂಜನ್ ಚೌಧರಿ, ದಿಗ್ವಿಜಯ್ ಸಿಂಗ್ ಮುಂತಾದವರು ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
-
वीरों की ये बाट है भाई कायर का नही काम रे भैया कायर का नही काम सर पर बाँध कफ़न जो निकले बिन सोचें परिणाम रे कायर का नही काम रे भैया कायर का नही काम। pic.twitter.com/U0yyxfqE9h
— Sanjay Singh AAP (@SanjayAzadSln) September 21, 2020 " class="align-text-top noRightClick twitterSection" data="
">वीरों की ये बाट है भाई कायर का नही काम रे भैया कायर का नही काम सर पर बाँध कफ़न जो निकले बिन सोचें परिणाम रे कायर का नही काम रे भैया कायर का नही काम। pic.twitter.com/U0yyxfqE9h
— Sanjay Singh AAP (@SanjayAzadSln) September 21, 2020वीरों की ये बाट है भाई कायर का नही काम रे भैया कायर का नही काम सर पर बाँध कफ़न जो निकले बिन सोचें परिणाम रे कायर का नही काम रे भैया कायर का नही काम। pic.twitter.com/U0yyxfqE9h
— Sanjay Singh AAP (@SanjayAzadSln) September 21, 2020
ಎನ್ಸಿಪಿಯ ಸುಪ್ರಿಯಾ ಸುಳೆ ಹಾಗೂ ಕಾಂಗ್ರೆಸ್ನ ಹಿಬಿ ಎಡೆನ್ ಧರಣಿ ನಿರತರಿಗೆ ಸಾಥ್ ನೀಡಿದರು. ಈ ವೇಳೆ ಸುಪ್ರಿಯಾ ಸುಳೆ ಅಮಾನತಾದ ಕಾಂಗ್ರೆಸ್ ಸಂಸದ ರಾಜೀವ್ ಸತವ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹಾಡುಗಳನ್ನು ಸಹ ಹಾಡಲಾಯಿತು. ಇದನ್ನು ಸಂಸದ ಸಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಧರಣಿ ನಿರತ ಸಂಸದರು ಎರಡು ಫ್ಯಾನ್ಗಳನ್ನು ಸ್ಥಳದಲ್ಲಿ ಅಳವಡಿಸಿಕೊಂಡಿದ್ದರು. ಡಿಎಂಕೆ ನಾಯಕ ತಿರುಚಿ ಶಿವ ಅವರು ಮನೆಯಿಂದ ಕಳಿಸಿದ ಇಡ್ಲಿಗಳನ್ನು ಸಂಸದರು ಸವಿದಿದ್ದಾರೆ.
ತಮ್ಮ ಧರಣಿ ಮುಂದುವರೆಸಿರುವ ಅಮಾನತಾದ ಸಂಸದರು, ಸರ್ಕಾರದ ಕ್ರಮದ ವಿರುದ್ಧ ಹಾಗೂ ಕೃಷಿ ಮಸೂದೆಗಳ ವಿರುದ್ಧ ಇಂದೂ ಪ್ರತಿಭಟನೆ ಮುಂದುವರೆಸಲಿದ್ದಾರೆ.