ETV Bharat / bharat

ಹುಡುಗಿಗಾಗಿ ಇಬ್ಬರು ಯುವಕರ ಫೈಟ್​​​... ಅದರಲ್ಲೊಬ್ಬನಿಗೆ ಕೊರೊನಾ! - ಮಹಾಮಾರಿ ಕೊರೊನಾ

ಓರ್ವ ಹುಡುಗಿಗೋಸ್ಕರ ಇಬ್ಬರು ಪರಸ್ಪರ ಜಗಳವಾಡಿದ್ದು, ಅದರಲ್ಲಿ ಒಬ್ಬ ಚಾಕುವಿನಿಂದ ಹಲ್ಲೆ ನಡೆಸಿರುವ ಪರಿಣಾಮ ಗಾಯಗೊಂಡ ಯುವಕ ಆಸ್ಪತ್ರೆಗೆ ತೆರಳಿದ್ದ ವೇಳೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

two boys flight for one girl
two boys flight for one girl
author img

By

Published : May 1, 2020, 4:38 PM IST

Updated : May 2, 2020, 1:31 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಚಿತ್ರ ಘಟನೆವೊಂದು ನಡೆದಿದ್ದು, ಓರ್ವ ಹುಡುಗಿಗೋಸ್ಕರ ಇಬ್ಬರು ಯುವಕರು ಫೈಟ್​ ನಡೆಸಿದ್ದು, ಅದರಲ್ಲಿ ಓರ್ವನಿಗೆ ಡೆಡ್ಲಿ ವೈರಸ್​ ಇರುವ ಆಘಾತಕಾರಿ ವಿಷಯ ಹೊರ ಬಿದ್ದಿದೆ.

ಪೂರ್ವ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯೊಬ್ಬಳನ್ನ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ನಡುವೆ ಮಾರಾಮಾರಿಯಾಗಿದ್ದು, ಈ ವೇಳೆ ಯುವಕನೋರ್ವ ಮತ್ತೋರ್ವನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಈ ವೇಳೆ, ಆತನಿಗೆ ಕೊರೊನಾ ವೈರಸ್​ ಇರುವುದು ಪತ್ತೆಯಾಗಿದೆ. ಇದೀಗ ಎರಡೂ ಕುಟುಂಬದ ಸದಸ್ಯರನ್ನ ಹೋಂ ಕ್ವಾರಂಟೈನ್​ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಯುವತಿ ಮನೆಗೆ ತೆರಳಿರುವ ಪೊಲೀಸರು ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ತಿಳಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಜತೆಗೆ ತಮ್ಮ ಮಗಳು ಈ ರೀತಿಯಾಗಿ ಮಾಡುತ್ತಿದ್ದಾಳೆ ಎಂಬುದರ ಮಾಹಿತಿ ತಮಗೆ ಗೊತ್ತಿಲ್ಲ ಎಂದಿದ್ದಾರೆ.

ಇವರೆಲ್ಲರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿನಿ ವಾಸವಾಗಿದ್ದ ಮನೆಯ ಪಕ್ಕದಲ್ಲಿ ಇವರ ಮನೆಗಳಿವೆ. ಈ ವೇಳೆ ಆಕೆಯನ್ನ ಪ್ರೀತಿ ಮಾಡ್ತಿರುವುದಾಗಿ ಇಬ್ಬರು ಹೇಳಿಕೊಂಡಿದ್ದಾರೆ. ಸದ್ಯ ಓರ್ವ ವಿದ್ಯಾರ್ಥಿಯನ್ನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಗೆ ಹೋಂ ಕ್ವಾರಂಟೈನ್​​ನಲ್ಲಿಡಲಾಗಿದೆ. ಅಗತ್ಯ ಬಿದ್ದರೆ ಅವರಿಗೂ ಚಿಕಿತ್ಸೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Last Updated : May 2, 2020, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.