ಮೇಷ : ನೀವು ಇಂದು ನಿಮ್ಮ ನೋಟ ಹಾಗೂ ನಿಮ್ಮ ಸಾಮರ್ಥ್ಯಗಳಿಗೆ ಪ್ರತಿಯೊಬ್ಬರ ಗಮನ ಸೆಳೆಯುತ್ತೀರಿ. ನಿಮ್ಮನ್ನು ನೀವು ರೀಚಾರ್ಜ್ ಮಾಡಲು ನೀವು ಅತ್ಯುತ್ತಮ ಪ್ರಯತ್ನ ನಡೆಸಬೇಕು. ನೀವು ಪಡೆದ ಶಕ್ತಿಯಿಂದ ನೀವು ಸಾಕಷ್ಟು ಕೆಲಸ ಪೂರೈಸುತ್ತೀರಿ.
ವೃಷಭ: ಇದು ಅತ್ಯಂತ ದೃಢವಾಗಿರಲು ಅಥವಾ ಬೇಡಿಕೆಯಿಂದಿರಲು ಒಳ್ಳೆಯ ದಿನವಲ್ಲ. ನೀವು ಸಂಘರ್ಷಗಳು, ವಾದವಿವಾದಗಳು ಮತ್ತು ಬಿಕ್ಕಟ್ಟುಗಳಿಂದ ದೂರ ಇರುವುದು ಸೂಕ್ತ. ನೀವು ತಿಕ್ಕಾಟ ತಪ್ಪಿಸದೇ ಇದ್ದಲ್ಲಿ ನೀವು ಇಟ್ಟ ಹೆಜ್ಜೆ ಹಿಂದೆ ಇರಿಸಬೇಕಾಗುತ್ತದೆ. ಮುಖಭಂಗ ಮತ್ತು ಆತ್ಮಗೌರವಕ್ಕೆ ಧಕ್ಕೆಯನ್ನು ತಪ್ಪಿಸಲಾಗದು. ಇದು ನಿಮ್ಮ ದಿನವಲ್ಲ ಎನ್ನುವುದನ್ನು ನೀವು ಎದುರಿಸಬೇಕಾಗುತ್ತದೆ.
ಮಿಥುನ: ನೀವು ಇಂದು ಸಂಪರ್ಕಕ್ಕೆ ಬರುವ ಜನರಿಗೆ ನಿಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಇದು ಅನುಮೋದನೆ ಮತ್ತು ಸಂತೃಪ್ತಿ ನೀಡುತ್ತದೆ. ಈ ದಿನ ಒಟ್ಟಾರೆ ವಿನೋದ ಮತ್ತು ಮನರಂಜನೆಯಿಂದ ಕೂಡಿರುತ್ತದೆ.
ಕರ್ಕಾಟಕ : ನಿಮ್ಮ ಉದ್ಯೋಗದ ಜೀವನ ಪ್ರಮುಖ ಕ್ಷಣ ತಲುಪಲಿದೆ. ನೀವು ವರ್ಗಾವಣೆ, ಬಡ್ತಿ ಅಥವಾ ವೇತನ ಹೆಚ್ಚಳ ನಿರೀಕ್ಷಿಸಬಹುದು. ಇದರೊಂದಿಗೆ ನಿಮ್ಮ ಜವಾಬ್ದಾರಿಗಳೂ ಹೆಚ್ಚಲಿವೆ. ಹೊಸ ಉದ್ಯೋಗದ ಸಾಧ್ಯತೆ ಇದೆ. ನೀವು ಆಕರ್ಷಕ ಉದ್ಯೋಗದ ಆಫರ್ ನಿರಾಕರಿಸುತ್ತೀರಿ.
ಸಿಂಹ : ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಹೊಸ ಬಾಂಧವ್ಯಗಳನ್ನು ಮಾಡಿಕೊಳ್ಳಲು ಇದು ಒಳ್ಳೆಯ ದಿನವಾಗಿದೆ. ನಿಮ್ಮ ಮಿತ್ರರು ಹಾಗೂ ಬಂಧುಗಳು ಬಹುಶಃ ಇಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮ್ಮ ಮನೆಯನ್ನು ಆನಂದದ ಭಾವನೆ ತುಂಬಿರುತ್ತದೆ. ನಿಮ್ಮ ಅತಿಥಿಗಳಿಗೆ ನೀವು ಅದ್ಧೂರಿ ಕಾರ್ಯಕ್ರಮ ನೀಡುತ್ತೀರಿ.
ಕನ್ಯಾ : ತರ್ಕ ಹಾಗೂ ಭಾವನೆಗಳು, ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಅನುಮಾನದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ದೃಷ್ಟಿಕೋನಗಳ ಮೇಲೆ ಆಧಾರಪಡುವುದಕ್ಕಿಂತ ನಿಮ್ಮ ಆಂತರಿಕ ಧ್ವನಿಯ ಮೇಲೆ ಆಧಾರಪಡುತ್ತೀರಿ.
ತುಲಾ: ನಿಮ್ಮಲ್ಲಿನ ಭಾವಾತಿರೇಕ ಮುಂಬದಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಎಲ್ಲದರಲ್ಲೂ ನೀವು ಕಾಣಪಡಿಸುತ್ತೀರಿ. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದುದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ನೀವು ಮಾಡುವುದರಲ್ಲಿ ಶ್ರೇಷ್ಠರಾಗಿರುತ್ತೀರಿ.
ವೃಶ್ಚಿಕ : ನಿಮ್ಮ ತಾರೆಗಳು ಇಂದು ಹಣದ ಅತಿಯಾದ ಖರ್ಚು ಸೂಚಿಸುತ್ತಿವೆ. ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಪ್ರೀತಿಪಾತ್ರರಿಗಿಂತ ಹೆಚ್ಚೇ? ಹೊರಗಡೆ ಟ್ರಿಪ್ ಮತ್ತು ಸುತ್ತಾಟಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಆಶ್ಚರ್ಯಗೊಳಿಸಲು ವಿಶೇಷ ಪ್ರಯತ್ನ ಮಾಡುತ್ತೀರಿ.
ಧನು: ನಿಮ್ಮ ತಾರೆಗಳು ಇಂದು ಪ್ರಬಲವಾಗಿವೆ ಮತ್ತು ನಿಮಗೆ ಅದ್ಭುತ ದಿನ ಮುಂದಿದೆ. ನೀವು ವೃತ್ತಿಪರರಾಗಿದ್ದೀರಿ ಇದಕ್ಕೆ ಮೆಚ್ಚುಗೆಯನ್ನೂ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲ ಸಮಸ್ಯೆಗಳನ್ನೂ ದಾಟಿ ಹೋಗುವ ಜಾಣ್ಮೆ ಇದೆ. ನಿಮ್ಮ ಈ ವಿಧಾನವು ಖಂಡಿತಾ ನಿಮ್ಮ ಸುತ್ತಲಿನ ಜನರ ಹೃದಯಗಳನ್ನು ಗೆಲ್ಲುತ್ತದೆ.
ಮಕರ :ಕೆಲಸದಲ್ಲಿ ನಿಮಗೆ ಮಾನ್ಯತೆ ಮತ್ತು ಪುರಸ್ಕಾರಗಳು ಕಾಯುತ್ತಿವೆ, ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಆಗುವಂತೆ ಸಹೋದ್ಯೋಗಿಗಳು ನಿಮ್ಮ ಸಂಪತ್ತು ಮತ್ತು ಪುರಸ್ಕಾರಗಳ ಕುರಿತು ಈರ್ಷ್ಯೆ ಪಡುವುದಿಲ್ಲ. ಅವರು ಹೊಸ ಹಾಗೂ ಸವಾಲಿನ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಅಗತ್ಯವಾದ ಉತ್ತೇಜನ ನೀಡುತ್ತಾರೆ. ಉದ್ಯೋಗ ಬದಲಿಸಲು ಬಯಸಿರುವವರು, ಕೊಂಚ ಕಾಯಿರಿ, ಇದು ನಿಮಗೆ ಸರಿಯಾದ ಕಾಲವಲ್ಲ.
ಕುಂಭ : ನಿಮ್ಮ ಮನೆಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸಲು ನೀವು ವಿಫಲರಾಗುತ್ತೀರಿ ಮತ್ತು ಈ ಸಮಸ್ಯೆಗೆ ಪೂರಕವಾಗಿ ನಿಮ್ಮ ಮಕ್ಕಳು ನಿಮಗೆ ನಿರ್ವಹಿಸಲೇ ಕಷ್ಟವಾಗುವಂತೆ ಸಂಗತಿಗಳನ್ನು ತರುತ್ತಾರೆ. ಕೆಲ ಕೌಟುಂಬಿಕ ವಿವಾದಗಳೂ ಉಂಟಾಗಬಹುದು, ಮತ್ತು ಅಸೂಯೆ ಹೊಂದಿರುವ ನೆರೆಹೊರೆಯವರು ಈಗಿನ ಸಮಸ್ಯೆಗಳನ್ನು ಉಲ್ಬಣಿಸಲು ಆಜ್ಯ ಹೊಯ್ಯುತ್ತಾರೆ.
ಮೀನ : ನೀವು ನಿಮ್ಮ ದೈನಂದಿನ ದಿನಚರಿಯನ್ನು ಸಂಘಟಿಸಲು ಕಠಿಣ ಪರಿಶ್ರಮ ಪಡುತ್ತೀರಿ, ನಿಮ್ಮ ಗ್ರಹಗಳ ಕೆಟ್ಟ ಜೋಡಣೆಯಿಂದ ಇಂದು ನೀವು ವಿಷಯಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನೀವು ತಾಳ್ಮೆಯಿಂದ ಇರಲು ಮತ್ತು ವಿಷಯಗಳು ಅವು ಹೇಗಿರುತ್ತವೋ ಹಾಗೆಯೇ ಇರುವಂತೆ ಮಾಡಲು ಅಲ್ಲದೆ ಬದಲಾವಣೆಯ ಭಾವನೆಗಳಿಗೆ ಕೊಂಚ ತಡೆ ಹೇರುವುದು ಸೂಕ್ತ.