ETV Bharat / bharat

ವಿಶ್ವದ ದೊಡ್ಡಣ್ಣ ಓಡಾಡೋ ವಿಮಾನ - ಕಾರಿನಲ್ಲಿರೋ ವಿಶೇಷತೆ ಏನು?

ವಿಶೇಷ ವಿಮಾನದ ಮೂಲಕ ದೊಡ್ಡಣ್ಣ ಎಂದು ಖ್ಯಾತಿ ಪಡೆದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಮಡದಿಯೊಂದಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ತಮ್ಮ ‘ದಿ ಬೀಸ್ಟ್​’ ಕಾರಿನಲ್ಲೇ ಭಾರತವನ್ನು ಸುತ್ತಾಡಲಿದ್ದಾರೆ. ಅವರ ಕಾರು ಮತ್ತು ವಿಮಾನದ ವಿಶೇಷತೆ ಕುರಿತು ಸಣ್ಣದೊಂದು ವರದಿ ಇಲ್ಲಿದೆ ನೋಡಿ...

Air Force One and The Beast car, Air Force One and The Beast car news, Air Force One and The Beast car information, Air Force One and The Beast car information news, ಏರ್​ಫೋರ್ಸ್​ ಒನ್ ವಿಮಾನ​ ಮತ್ತು ದಿ ಬೀಸ್ಟ್​ ಕಾರ್​, ಏರ್​ಫೋರ್ಸ್​ ಒನ್ ವಿಮಾನ ಮತ್ತು ದಿ ಬೀಸ್ಟ್​ ಮಾಹಿತಿ, ಏರ್​ಫೋರ್ಸ್​ ಒನ್ ವಿಮಾನ ಮತ್ತು ದಿ ಬೀಸ್ಟ್​ ಮಾಹಿತಿ ಸುದ್ದಿ,
ಮಡದಿಯೊಂದಿಗೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್
author img

By

Published : Feb 23, 2020, 9:43 AM IST

ವಿಶೇಷ ವಿಮಾನ ಏರ್‍ಫೋರ್ಸ್-1ರ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್‍ಗೆ ಇದೇ 24ರಂದು ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಅವರು, ತಮ್ಮ ‘ದಿ ಬೀಸ್ಟ್’ ಕಾರಿನಲ್ಲಿ ಅಹಮದಾಬಾದ್‍ನ ಸರ್ದಾರ್ ಪಟೇಲ್ ಸ್ಟೇಡಿಯಂಗೆ ತೆರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಟ್ರಂಪ್ ಆಗಮನಕ್ಕೂ ಮುನ್ನವೇ ದಿ ಬೀಸ್ಟ್ ಕಾರು ಗುಜರಾತ್ ತಲುಪಿದೆ. ಇದರಲ್ಲಿ ಏನು ವಿಶೇಷ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಖಂಡಿತಾ ಅದಕ್ಕೆ ಉತ್ತರ ಇದೆ. ದೊಡ್ಡಣ್ಣ ಸುತ್ತಾಡುವ ಈ ಕಾರು ಮತ್ತು ವಿಮಾನ ಅನೇಕ ವಿಶೇಷತೆಗಳನ್ನು ಹೊಂದಿವೆ ಎಂದರೆ ನೀವು ನಂಬಲೇಬೇಕು.

ಮಡದಿಯೊಂದಿಗೆ ಭಾರತಕ್ಕೆ ಬರಲಿದ್ದಾರೆ ಟ್ರಂಪ್

ಏನಿದು ಏರ್​​ಫೋರ್ಸ್​​ ಒನ್​?

ಫೆ.24ರಂದು ಟ್ರಂಪ್‌ ಏರ್‌ಫೋರ್ಸ್‌ ಒನ್‌ ಮೂಲಕ ಅಹಮದಾಬಾದಿಗೆ ಟ್ರಂಪ್​ ಬಂದಿಳಿಯಲಿದ್ದಾರೆ. ಅಮೆರಿಕ ಅಧ್ಯಕ್ಷರಿಗಾಗಿಯೇ ಬೋಯಿಂಗ್‌ ಕಂಪನಿಯ 747-200ಬಿ ವಿಮಾನವನ್ನು ವಿಶಿಷ್ಟವಾಗಿ ಮರುವಿನ್ಯಾಸ ಮಾಡಲಾಗಿದೆ. ಈ ವಿಮಾನದಲ್ಲಿರುವ ಎಲೆಕ್ಟ್ರಾನಿಕ್‌ ವ್ಯವಸ್ಥೆಯನ್ನು ಯಾವುದೇ ಎಲೆಕ್ಟ್ರೋಮ್ಯಾಗ್ನೆಟಿಕ್‌ ಅಸ್ತ್ರಗಳಿಂದಲೂ ಏನೂ ಮಾಡಲಾಗದು.. ಅಂತಹ ವ್ಯವಸ್ಥೆ ಈ ವಿಮಾನದಲ್ಲಿದೆ.

ಏನೆಲ್ಲ ಅತ್ಯಾಧುನಿಕ ವ್ಯವಸ್ಥೆ ಈ ವಿಮಾನದಲ್ಲಿದೆ?

ಅಮೆರಿಕದ ಮೇಲೆ ದಾಳಿಯಾದರೆ ಈ ವಿಮಾನದಲ್ಲೇ ಕುಳಿತೇ ಅಧ್ಯಕ್ಷರು ಮೊಬೈಲ್‌ ಕಮಾಂಡ್‌ ಸೆಂಟರ್‌ನಂತೆ ಕೆಲಸ ಮಾಡಬಹುದು. ಅಂತಹ ಸುಧಾರಿತ ಸಂಪರ್ಕ ವ್ಯವಸ್ಥೆ ಇದರಲ್ಲಿದೆ. ದಿ ಬೀಸ್ಟ್​ ಮತ್ತು ಏರ್‌ಫೋರ್ಸ್‌ ಒನ್‌ನಂತೆ ಮರೈನ್‌ ಒನ್‌ ಕೂಡ ಅಮೆರಿಕ ಅಧ್ಯಕ್ಷರು ಬಳಸುವ ಹೆಲಿಕಾಪ್ಟರ್‌. ಅಮೆರಿಕ ಅಧ್ಯಕ್ಷರು ಹೋಗಬೇಕೆಂದ ಸ್ಥಳಕ್ಕೆ ಇದು ತತ್‌ಕ್ಷಣಕ್ಕೆ ಕೊಂಡೊಯ್ಯುತ್ತದೆ. ಈ ಹೆಲಿಕಾಪ್ಟರ್​ ಕೂಡಾ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಏನಿದು ಬೀಸ್ಟ್​.. ವಿಶೇಷತೆ ಆದರೂ ಏನು?

ಅಮೆರಿಕದ ಅಧ್ಯಕ್ಷರು ಪ್ರವಾಸದ ವೇಳೆ ಏರ್ ಫೋರ್ಸ್ ಒನ್ ವಿಮಾನವನ್ನು ಬಳಕೆ ಮಾಡುತ್ತಾರೆ. ರಸ್ತೆಯಲ್ಲಿ ಸಂಚಾರದ ವೇಳೆ ಭಾರೀ ಭದ್ರತೆ ಉದ್ದೇಶದಿಂದ ದಿ ಬೀಸ್ಟ್ ಕಾರನ್ನು ಉಪಯೋಗಿಸುತ್ತಾರೆ. ಅಮೆರಿಕ ಅಧ್ಯಕ್ಷರ ರಸ್ತೆ ಪ್ರಯಾಣಕ್ಕಾಗಿ ಈ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ‘ಕ್ಯಾಡಿಲಾಕ್’, ‘ಲಿಮೋಸಿನ್ ಒನ್’, ‘ಫಸ್ಟ್ ಕಾರು’ ಎಂದೂ ಕರೆಯಲಾಗುತ್ತದೆ.

ಈ ಕಾರಿನ ತಯಾರಕ ಕಂಪನಿ ಯಾವುದು?

‘ಕ್ಯಾಡಿಲಾಕ್’ ಕಂಪನಿ ಈ ವಿಶೇಷ ಕಾರನ್ನು ತಯಾರಿಸಿದೆ. ಕಸ್ಟಮೈಸ್ಡ್ ಕಾರಾಗಿದೆ. ಏನೇನು ವಿಶೇಷ ರಕ್ಷಣೆ ಹಾಗೂ ಯಾವ್ಯಾವ ನೂತನ ಆಫ್ಷನ್​ಗಳು ಬೇಕೋ ಅವೆಲ್ಲವುಗಳನ್ನ ಈ ಕಾರಿನಲ್ಲಿ ಅಳವಡಿಸಲಾಗಿದೆ. ಶಸ್ತ್ರಸಜ್ಜಿತ, ಬಹಳ ಸ್ಥಳಾವಕಾಶವುಳ್ಳ, ಐಷಾರಾಮಿ ಮಾದರಿ ಕಾರು ಇದಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ‘ಕ್ಯಾಡಿಲಾಕ್ ಒನ್’ ಕಾರು ಬಳಸುತ್ತಿದ್ದರು. ಡೊನಾಲ್ಡ್ ಟ್ರಂಪ್ ಸಹ ಕೆಲಕಾಲ ಅದೇ ಕಾರು ಬಳಸುತ್ತಿದ್ದರು. ಆದರೆ 2018ರಿಂದ ಟ್ರಂಪ್ ದಿ ಬೀಸ್ಟ್ ಕಾರನ್ನು ಬಳಸಲು ಆರಂಭಿಸಿದ್ದಾರೆ.

ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿದ್ದು, ಐದು ಇಂಚು ದಪ್ಪದ ಮಿಲಿಟರಿ ಗ್ರೇಡ್‍ನ ಲೋಹವನ್ನು ಕಾರಿನ ದೇಹಕ್ಕೆ ಬಳಸಲಾಗಿದೆ. ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್ ಶೀಟ್‍ಗಳನ್ನು ಹೊಂದಿವೆ. ಆದರೆ ಅವುಗಳನ್ನು ಯಾವ ಕಾರಣಕ್ಕೂ ತೆರೆಯುವುದು ಸಾಧ್ಯವಿಲ್ಲ. ದಿ ಬೀಸ್ಟ್ ಕಾರಿಗೆ ಪಂಕ್ಚರ್ ನಿರೋಧಕ ಬಲಿಷ್ಠ ಟಯರ್ ಗಳನ್ನು ಅಳವಡಿಸಿರುವುದು ವಿಶೇಷ. ಒಂದು ವೇಳೆ ಟಯರ್ ಸ್ಫೋಟಗೊಂಡರೂ ಕಾರು ಚಲಿಸುವಂತಹ ಮಾದರಿಯಲ್ಲಿ ಸ್ಟೀಲ್ ರಿಮ್‍ಗಳನ್ನು ವಿನ್ಯಾಸಗೊಳಿಸಲಾಗಿದೆ.

ಕಾರಿನ ಮುಂಭಾಗದಲ್ಲಿ ರಾಕೆಟ್ ಗ್ರೆನೇಡ್ ಲಾಂಚರ್, ಟಿಯರ್ ಗ್ಯಾಸ್ ಫಿರಂಗಿ, ರಾತ್ರಿ ವೇಳೆಯೂ ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಕ್ಯಾಮೆರಾಗಳು ಇರುತ್ತವೆ. ವಿರೋಧಿಗಳು ದಾಳಿ ನಡೆಸಿದರೆ ಬೆಂಕಿ ಹೊಗೆ ಗ್ರೆನೇಡ್ ಸಹ ಇದರಲ್ಲಿ ಇದೆ. ಅಮೆರಿಕ ಅಧ್ಯಕ್ಷರ ಕಾರು ಚಾಲಕನಿಗೆ ಅಮೆರಿಕ ಸೇನೆಯು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ಚಾಲನೆ ಮಾಡುವ ತರಬೇತಿಯನ್ನು ನೀಡಲಾಗಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳುವ, ಎದುರಾಳಿಗಳ ದಿಕ್ಕುತಪ್ಪಿಸುವ ಮತ್ತು 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನೂ ನೀಡಲಾಗಿರುತ್ತದೆ. ಒಂದು ವೇಳೆ ಅಗ್ನಿ ಅನಾಹುತವಾದರೂ ಅಗ್ನಿ ನಂದಿಸುವ ವ್ಯವಸ್ಥೆ ಸಹ ಕಾರಿನಲ್ಲಿದೆ.

ಟ್ರಂಪ್ ಅವರು ವಿಶೇಷ ವಿಮಾನ ಏರ್‍ಫೋರ್ಸ್-1 ಫೆಬ್ರವರಿ 24ರಂದು ಬೆಳಗ್ಗೆ 11.55 ಕ್ಕೆ ಅಹಮದಾಬಾದ್‍ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಈ ವೇಳೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಅಲ್ಲಿಂದ ಟ್ರಂಪ್ ಮತ್ತು ಮೋದಿ ಸಬರಮತಿ ಆಶ್ರಮಕ್ಕೆ ತೆರಳಲಿದ್ದು, 25 ನಿಮಿಷಗಳ ಕಾಲ ಅಲ್ಲಿಯೇ ಇರಲಿದ್ದಾರೆ.

ಉಭಯ ನಾಯಕರು ‘ಇಂಡಿಯಾ ರೋಡ್ ಶೋ’ ಪ್ರದರ್ಶನ ನೀಡಿ ಮಧ್ಯಾಹ್ನ 1:15 ಕ್ಕೆ ಮೊಟೆರಾ ಕ್ರೀಡಾಂಗಣ ತಲುಪಲಿದ್ದಾರೆ. ಮೊಟೆರಾ ಕ್ರೀಡಾಂಗಣದಲ್ಲಿ ಟ್ರಂಪ್ ಮತ್ತು ಮೋದಿಯವರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕಮ್ರಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ. ಇದರ ನಂತರ ಉಭಯ ನಾಯಕರು ಮಧ್ಯಾಹ್ನ 3:30ಕ್ಕೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕಾಗಿ ಅಮೆರಿಕ ಮತ್ತು ಭಾರತದ ಭದ್ರತಾ ಸಂಸ್ಥೆಗಳು ಸಿದ್ಧತೆಗಳನ್ನು ಪ್ರಾರಂಭಿಸಿವೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.