ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದು, ನಿಯಮ ಉಲ್ಲಂಘಿಸಿದ ಸವಾರರು ಸಾವಿರ ಸಾವಿರ ದಂಡ ಕಟ್ಟುತ್ತಿದ್ದಾರೆ. ಇದೀಗ ರಾಷ್ಟ್ರ ರಾಜಧಾನಿಯ ಟ್ರಕ್ ಡ್ರೈವರ್ ಕಟ್ಟಿದ ದಂಡ ಮೊತ್ತ ಈ ಹಿಂದಿನ ಎಲ್ಲ ದಾಖಲೆಯನ್ನೂ ಮುರಿದಿದೆ.
ಹರಿಯಾಣ ನೋಂದಣಿಯ ಟ್ರಕ್ ಚಾಲಕನ ಸಮರ್ಪಕ ದಾಖಲೆಯ ಕೊರತೆ ಹಾಗೂ ಓವರ್ಲೋಡ್ ಪರಿಣಾಮ ಜಿಟಿ ಕರ್ನಲ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 2 ಲಕ್ಷದ 500 ರೂ. ದಂಡ ವಿಧಿಸಿದ್ದಾರೆ.
ರಸ್ತೆ ನಿಯಮ ಉಲ್ಲಂಘನೆ... ಬರೋಬ್ಬರಿ ರೂ 1,41,700 ದಂಡ ಕಟ್ಟಿದ ಲಾರಿ ಚಾಲಕ!
ಮೂರು ದಿನದ ಹಿಂದೆ ರಾಜಸ್ಥಾನದಲ್ಲಿ ಓವರ್ಲೋಡ್ ಪರಿಣಾಮ ಟ್ರಕ್ ಚಾಲಕನಿಗೆ 1 ಲಕ್ಷದ 41 ಸಾವಿರ ದಂಡ ವಿಧಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಆದರೆ ಈ ದಾಖಲೆ ಗುರುವಾರ ಮುರಿದು ಬಿದ್ದಿದೆ.