ETV Bharat / bharat

ಇಂಡೋ, ನೇಪಾಳ ಗಡಿ ವಿವಾದ.. ಉತ್ತರಪ್ರದೇಶದಲ್ಲಿ ವ್ಯವಹಾರಕ್ಕೆ ಭಾರಿ ಹೊಡೆತ..! - ಯುಪಿಯಲ್ಲಿ ವ್ಯವಹಾರಕ್ಕೆ ಭಾರಿ ಹೊಡೆತ

ಇಂಡೋ ನೇಪಾಳ ಗಡಿ ವಿವಾದ ಉತ್ತರಪ್ರದೇಶದ ಆರ್ಥಿಕತೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

businesses in border regions
ಇಂಡೋ, ನೇಪಾಳ ಗಡಿ ವಿವಾದ
author img

By

Published : Oct 3, 2020, 7:30 PM IST

ಲಖಿಂಪುರ್ ಖೇರಿ (ಉತ್ತರ ಪ್ರದೇಶ) : ಭಾರತ ಮತ್ತು ನೇಪಾಳದ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಉತ್ತರ ಪ್ರದೇಶದ ಆರ್ಥಿಕತೆ ಮೇಲೆ ಗಾಢ ಪರಿಣಾಮ ಬೀರಿದೆ. ನೇಪಾಳದೊಂದಿಗೆ ಉತ್ತರಪ್ರದೇಶ ಸುಮಾರು 105 ಕಿ.ಲೋ ಮೀಟರ್ ಗಡಿ ಹಂಚಿಕೊಂಡಿದೆ. ಈ ಮೊದಲು ಜನರು ಇಲ್ಲಿ ಯಾವುದೇ ನಿರ್ಬಂಧವಿಲ್ಲದೇ ಮುಕ್ತವಾಗಿ ವ್ಯಾಪಾರ ಮಾಡುತ್ತಿದ್ದರು. ಆದರೆ, ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದಗಳಿಂದಾಗಿ ಇಲ್ಲಿನ ವ್ಯಾಪಾರ ಕುಂಠಿತಗೊಂಡಿದ್ದು, ಜನತೆ ಕಂಗಾಲಾಗಿದ್ದಾರೆ.

ಕೋವಿಡ್​ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿದ್ದವರಿಗೆ ಈ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿನ ವ್ಯಾಪಾರಿಗಳ ಪ್ರಕಾರ ಶೇಕಡ 80 ರಷ್ಟು ವ್ಯವಹಾರ ಅಪಾಯದಲ್ಲಿದೆ.

ಇತ್ತೀಚೆಗೆ ನೇಪಾಳದ ಪ್ರಧಾನಿ ಕೆ.ಪಿ.ಓಲಿ ಪರಿಷ್ಕೃತ ಭೂ ನಕ್ಷೆ ರಿಲೀಸ್ ಮಾಡಿದ್ದು, ಕೆಲ ಭಾರತೀಯ ಪ್ರಾಂತ್ಯಗಳ ಮೇಲೆ ಹಕ್ಕು ಸಾಧಿಸಲು ಹೊರಟಿದ್ದರು. ಇದರಿಂದಾಗಿ ಭಾರತ ಹಾಗೂ ನೇಪಾಳದ ನಡುವೆ ವೈಮನಸ್ಸು ಮೂಡಿತ್ತು. ಅಲ್ಲದೇ ನಮ್ಮ ದೇಶದಲ್ಲಿ ಕೋವಿಡ್ ಹರಡಲು ಭಾರತವೇ ಕಾರಣ ಎಂದೂ ನೇಪಾಳ ಆರೋಪಿಸಿತ್ತು.

ಈ ಮಧ್ಯೆ ಇಂಡೋ, ನೇಪಾಳ ಗಡಿಯಲ್ಲಿ ಭಾರಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.