ETV Bharat / bharat

ಹೆಣ್ಣು ಮಗುವಿಗೆ ಜನ್ಮನೀಡಿದ ಪತ್ನಿ.. ಅಷ್ಟಕ್ಕೇ ಪತಿಯಿಂದ 'ತ್ರಿವಳಿ ತಲಾಖ್'.. - ತಲಾಖ್​

ಇಲ್ಲೊಬ್ಬ ಪತಿ ಮಹಾಶಯ ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ರೊಚ್ಚಿಗೆದ್ದು ಆಕೆಗೆ ತ್ರಿಪಲ್​ ತಲಾಖ್​ ನೀಡಿದ್ದಾನೆ. ಮದುವೆ ನಡೆದ ದಿನದಿಂದಲೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿಯಿಂದ ನೊಂದ ಪತ್ನಿ ತನಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡಿದ್ದಾಳೆ.

ತ್ರಿವಳಿ ತಲಾಖ್
author img

By

Published : Aug 24, 2019, 10:16 AM IST

ಅಯೋಧ್ಯೆ(ಉತ್ತರ ಪ್ರದೇಶ): ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆಂಬ ಕಾರಣಕ್ಕೆ ಪತಿರಾಯ ಆಕೆಗೆ ತ್ರಿಪಲ್​ ತಲಾಖ್​ ಘೋಷಿಸಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.

ಇಲ್ಲಿನ ಹೈದರ್​ ಗಂಜ್​ ತೆಹ್ಸಿಲ್​ನ ಜನ ಬಝಾರ್​ ನಿವಾಸಿಯಾಗಿರೋ 23 ವರ್ಷದ ಝಾಫ್ರಿನ್​ ಅಂಜುಮ್​ಗೆ​, ಕಳೆದ ಅಗಸ್ಟ್​ 18ರಂದು ಪತಿ ಅಸ್ತಿಖರ್​ ಅಹ್ಮದ್​​ ತಲಾಖ್​ ನೀಡಿದ್ದಾನೆ. ಈ ತ್ರಿವಳಿ ತಲಾಖ್​ಗೆ ಕಾರಣ ಮಾತ್ರ ಬಾಲಿಶವಾಗಿದೆ. ಝಾಫ್ರಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹೆಣ್ಣು ಎಂಬ ಕಾರಣಕ್ಕೆ ರೋಷಗೊಂಡ ಪತಿ ತಲಾಖ್​ ನೀಡಿದ್ದಾನೆ. ಇದಕ್ಕೂ ಮುಂಚೆ ಝಾಫ್ರಿನ್ ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಳಂತೆ. ಅಲ್ಲದೆ ಝಾಫ್ರಿನ್ ಪತಿಯ ವರದಕ್ಷಿಣೆ ಬೇಡಿಕೆಯನ್ನು ಝಾಫ್ರಿನ್ ತಂದೆ ಪೂರೈಸಿಲ್ಲವೆಂದು ತಲಾಖ್​ ನೀಡಲಾಗಿದೆ ಎನ್ನಲಾಗಿದೆ.

ನಮ್ಮ​ ಮದುವೆ ಕಳೆದ ನವೆಂಬರ್​ನಲ್ಲಿ ನಡೆದಿದೆ. ಮದುವೆ ಬಳಿಕ ಸತತವಾಗಿ ವರದಕ್ಷಿಣೆಗಾಗಿ ನನ್ನ ಪತಿ ನನ್ನನ್ನು ಪೀಡಿಸುತ್ತಿದ್ದ. ಕಡೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಲಾಖ್​ ನೀಡಿದ್ದಾರೆ. ನನಗೆ ನ್ಯಾಯ ಬೇಕು ಎಂದು ಝಾಫ್ರಿನ್ ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಯೋಧ್ಯೆ ಗ್ರಾಮಾಂತರ ಎಸ್​ಪಿ ಸೈಲೇಂದ್ರ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

Intro:Body:

triple talaq

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.