ಹಥ್ರಾಸ್ (ಉತ್ತರ ಪ್ರದೇಶ): ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗವನ್ನು ಉತ್ತರ ಪ್ರದೇಶ ಪ್ರದೇಶ ಪೊಲೀಸರು ತಡೆದಿದ್ದಾರೆ.
ದೆಹಲಿಯಿಂದ 200 ಕಿ.ಮೀ. ದೂರದಿಂದ ಕ್ರಮಿಸಿ ಬಂದ ಸಂಸದರ ನಿಯೋಗವನ್ನು ಹಥ್ರಾಸ್ಗೆ ಒಂದೂವರೆ ಕಿ.ಮೀ. ದೂರದಲ್ಲೇ ಪೊಲೀಸರು ತಡೆದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೆ ನೀಡಿದೆ.
ಸಂಸದರಾದ ಡೆರೆಕ್ ಒಬ್ರಿಯೆನ್, ಡಾ. ಕಾಕೋಲಿ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಲ್ ಮತ್ತು ಮಾಜಿ ಸಂಸದೆ ಮಮತಾ ಠಾಕೂರ್ ನೋವಿನಲ್ಲಿರುವ ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಸಮಾಧಾನ ಮಾಡಲು ಬರುತ್ತಿದ್ದರು. ಇದೀಗ ಉತ್ತರ ಪ್ರದೇಶ ಪ್ರದೇಶ ಪೊಲೀಸರ ನಡೆಯನ್ನು ಟಿಎಂಸಿ ಖಂಡಿಸಿದೆ.
ನಿನ್ನೆ ಕೂಡ ಹಥ್ರಾಸ್ಗೆ ಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯನ್ನು ಯುಪಿ ಪೊಲೀಸರು ತಡೆದಿದ್ದರು.