ETV Bharat / bharat

ಬಂಗಾಳದಲ್ಲಿ ದೀದಿಗೆ ಮತ್ತೆ ಶಾಕ್​​... ಟಿಎಂಸಿ  ಶಾಸಕ ಸೇರಿ 12 ಕೌನ್ಸಿಲರ್​ ಬಿಜೆಪಿ ಸೇರ್ಪಡೆ! - ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ ಸದ್ಯ ವೈದ್ಯರ ಪ್ರತಿಭಟನೆ ನಡೆಯುತ್ತಿದ್ದು, ಈ ನಡುವೆ ಮಮತಾ ಬ್ಯಾನರ್ಜಿಗೆ ಪಕ್ಷದ ಶಾಸಕ ಹಾಗೂ ಕೆಲ ಕೌನ್ಸಿಲರ್​​ ಟಾಂಗ್​ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಜಪಿ ಸೇರಿದ ಟಿಎಂಸಿ ಮುಖಂಡರು
author img

By

Published : Jun 17, 2019, 7:25 PM IST

ಕೋಲ್ಕತ್ತಾ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಆಘಾತ ಎದುರಾಗಿತ್ತು. 42 ಕ್ಷೇತ್ರಗಳಲ್ಲಿ ಕಳೆದ ಬಾರಿ 34 ಸ್ಥಾನ ಗೆದ್ದಿದ್ದ ಟಿಎಂಸಿ ಈ ಬಾರಿ ಬಿಜೆಪಿಗೆ 18 ಸ್ಥಾನ ಬಿಟ್ಟುಕೊಡುವ ಮೂಲಕ ಮುಖಭಂಗ ಅನುಭವಿಸಿತ್ತು.

ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಕಮಾಲ್​ ಮಾಡಿದ್ದ ಬಿಜೆಪಿ 42 ರಲ್ಲಿ 18 ಲೋಕಸಭಾ ಕ್ಷೇತ್ರಗಳನ್ನ ವಶಪಡಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತ್ತು.

ಈ ನಡುವೆ ಟಿಎಂಸಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ತೃಣಮೂಲ ಕಾಂಗ್ರೆಸ್​ನ ಓರ್ವ ಶಾಸಕ ಸುನೀಲ್​ ಸಿಂಗ್​ ಸೇರಿ 12 ಕೌನ್ಸಿಲರ್​ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಮುಖಂಡ ಕೈಲಾಸ್​ ವಿಜಯವರ್ಗಿಯಾ ಹಾಗೂ ಮುಕುಲ್​ ರಾಯ್​ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಶಾಸಕ ಸುನೀಲ್​ ಸಿಂಗ್​​, ಪಶ್ಚಿಮ ಬಂಗಾಳದ ಜನರಿಗೆ 'ಸಬ್​ ಕಾ ಸಾಥ್​ ಸಬ್​​ ವಿಕಾಸ್​' ಬೇಕಾಗಿದೆ. ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಕೊನೆಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

Intro:Body:

ಬಂಗಾಳದಲ್ಲಿ ದೀದಿಗೆ ಮತ್ತಷ್ಟು ಹಿನ್ನಡೆ... ಟಿಎಂಸಿ ಓರ್ವ ಶಾಸಕ ಸೇರಿ 12 ಕೌನ್ಸಿಲರ್​ ಬಿಜೆಪಿ ಸೇರ್ಪಡೆ! 

ಕೋಲ್ಕತ್ತಾ: ಕಳೆದ ಕೆಲ ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಸಖತ್​ ಟಾಂಗ್​ ನೀಡಿ, 42 ಕ್ಷೇತ್ರಗಳ ಪೈಕಿ 18 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ನೂತನ ಇತಿಹಾಸ ರಚನೆ ಮಾಡಿತ್ತು. 

ಇದೀಗ ತೃಣಮೂಲ ಕಾಂಗ್ರೆಸ್​ನ ಓರ್ವ ಶಾಸಕ ಸುನೀಲ್​ ಸಿಂಗ್​ ಸೇರಿ 12 ಕೌನ್ಸಿಲರ್​ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಮುಖಂಡ ಕೈಲಾಸ್​ ವಿಜಯವರ್ಗಿಯಾ ಹಾಗೂ ಮುಕುಲ್​ ರಾಯ್​ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 

ಇದೇ ವೇಳೆ ಮಾತನಾಡಿದ ಶಾಸಕ ಸುನೀಲ್​ ಸಿಂಗ್​​, ಪಶ್ಚಿಮ ಬಂಗಾಳದ ಜನರಿಗೆ 'ಸಬ್​ ಕಾ ಸಾಥ್​ ಸಬ್​​ ವಿಕಾಸ್​' ಬೇಕಾಗಿದ್ದು, ಸದ್ಯ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.