ETV Bharat / bharat

ಅಮಾನವೀಯ! ಬಾಕಿ ಸಂಬಳ ಕೇಳಿದ್ದಕ್ಕೆ ಮಹಿಳೆ ಮೇಲೆ ಮೂರು ದಿನ ಅತ್ಯಾಚಾರ, ಗಂಡನಿಗೆ ಹಲ್ಲೆ! - ಕೋಳಿ ಫಾರ್ಮ್

ಕೆಲಸ ಮಾಡಿ ಸಂಬಳ ಕೇಳಿದ್ದಕ್ಕಾಗಿ ಕೋಳಿ ಫಾರ್ಮ್​ ಮಾಲೀಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Oct 2, 2019, 7:13 PM IST

ಹೈದರಾಬಾದ್​: ಕೋಳಿ ಫಾರ್ಮ್​​ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಸರಿಯಾಗಿ ಸಂಬಳ ನೀಡದ್ದಕ್ಕಾಗಿ ಮಾಲೀಕನ ಬಳಿ ತಮ್ಮ ದುಡಿಮೆ ಹಣ ನೀಡುವಂತೆ ಕೇಳಿದ್ದಕ್ಕಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ತೆಲಂಗಾಣದ ರಾಚಕೊಡದಲ್ಲಿ ನಡೆದಿದೆ.

ನಾಗರಕರ್ನೂಲ್​ ಮೂಲದ ಬುಡಕಟ್ಟು ದಂಪತಿ ಪ್ರಸಾದ್​ ರೆಡ್ಡಿ ಕೋಳಿ ಫಾರ್ಮ್​​ನಲ್ಲಿ ತಿಂಗಳ ಸಂಬಳ 15 ಸಾವಿರದಂತೆ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಮಾಲೀಕ ಇವರಿಗೆ ಸಂಬಳ ನೀಡಿರಲಿಲ್ಲ. ಬಾಕಿ ಸಂಬಳ ಕೇಳಿದ್ದಕ್ಕಾಗಿ ಇಬ್ಬರನ್ನೂ ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಆಕೆಯ ಪತ್ನಿಯ ಮೇಲೆ ಮೂವರೂ ಅತ್ಯಾಚಾರವೆಸಗಿದ್ದಾರೆ. ಸೆಪ್ಟೆಂಬರ್​ 18ರಿಂದ ಸೆಪ್ಟೆಂಬರ್​ 21ರವರೆಗೆ ನಿರಂತರವಾಗಿ ಈ ಕೃತ್ಯವೆಸಗಿದ್ದು, ಈ ಘಟನೆ ಬಗ್ಗೆ ಬಾಯಿ ಬಿಟ್ಟರೆ ಮಾಹಿತಿ ಜೀವಂತವಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆರೋಪಿಗಳಿಂದ ತಪ್ಪಿಸಿಕೊಂಡ ಇವರು ಸೆಪ್ಟೆಂಬರ್​ 26ರಂದು ರಾಚಕೊಡ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮರೆಸಿಕೊಂಡ ಕಾಮುಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:Body:

ಬಾಕಿ ಸಂಬಳ ಕೇಳಿದ್ದಕ್ಕೆ ಮಹಿಳೆ ಮೇಲೆ ಮೂರು ದಿನ ಅತ್ಯಾಚಾರ... ಗಂಡನ ಮೇಲೆ ಹಲ್ಲೆ! 

ಹೈದರಾಬಾದ್​: ಕೋಳಿ ಫಾರ್ಮ್​​ನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗಳಿಗೆ ಸರಿಯಾಗಿ ಸಂಬಳ ನೀಡದಕ್ಕಾಗಿ ಮಾಲೀಕನ ಬಳಿ ತಮ್ಮ ದುಡಿಮೆ ಹಣ ನೀಡುವಂತೆ ಕೇಳಿದ್ದಕ್ಕಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ತೆಲಂಗಾಣದ ರಾಚಕೊಡದಲ್ಲಿ ನಡೆದಿದೆ. 

ನಾಗರಕರ್ನೂಲ್​ ಮೂಲದ ಬುಡಕಟ್ಟು ದಂಪತಿ ಪ್ರಸಾದ್​ ರೆಡ್ಡಿ ಕೋಳಿ ಫಾರ್ಮ್​​ನಲ್ಲಿ ತಿಂಗಳ ಸಂಬಳ 15 ಸಾವಿರದಂತೆ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಮಾಲೀಕ ಇವರಿಗೆ ಸಂಬಳ ನೀಡಿದ್ದಿಲ್ಲ. ಅದನ್ನು ಕೇಳಿದ್ದಕ್ಕಾಗಿ ಕಾರ್​ನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ನಿರ್ಜನ್ಯ ಪ್ರದೇಶದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಆಕೆಯ ಪತ್ನಿಯ ಮೇಲೆ ಮೂವರು ಅತ್ಯಾಚಾರವೆಸಗಿದ್ದಾರೆ. ಸೆಪ್ಟೆಂಬರ್​ 18ರಿಂದ ಸೆಪ್ಟೆಂಬರ್​ 21ರವರೆಗೆ ನಿರಂತರವಾಗಿ ಈ ಕೃತ್ಯವೆಸಗಿದ್ದು, ಈ ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದ್ರೆ ಜೀವಂತವಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 

ಅವರಿಂದ ತಪ್ಪಿಸಿಕೊಂಡ ಇವರು ಸೆಪ್ಟೆಂಬರ್​ 26ರಂದು ರಾಚಕೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದೀಗ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮರೆಸಿಕೊಂಡ ಕಾಮುಕರಿಗಾಗಿ ಬಲೆ ಬೀಸಲಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.