ETV Bharat / bharat

ಕೊರೊನಾ ನಿರ್ನಾಮದ ದೇಶಿ ಲಸಿಕೆಯ ಕ್ಲಿನಿಕಲ್​ ಪ್ರಯೋಗಕ್ಕೆ ದೊಡ್ಡ ವಿಘ್ನ ಎದುರು..!

ವರದಿಗಳ ಪ್ರಕಾರ, ಇನ್ನೂ ಏಳು ಕ್ಲಿನಿಕಲ್ ಸೈಟ್‌ಗಳಿಗೆ ಅನುಮೋದನೆಯನ್ನು ಸಂಬಂಧಪಟ್ಟ ನೈತಿಕ ಸಮಿತಿಗಳು ನೀಡಿಲ್ಲ. ಏಮ್ಸ್ ಮತ್ತು ವಿಶಾಖಪಟ್ಟಣಂ ಮೂಲದ ಕಿಂಗ್ ಜಾರ್ಜ್ ಆಸ್ಪತ್ರೆಯ ನೈತಿಕ ಸಮಿತಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಅನುಮೋದನೆ ನೀಡಲು ಹಿಂಜರಿಯುತ್ತವೆ. ಪ್ರಯೋಗಗಳಿಗೆ ಸಲ್ಲಿಸಿದ ಪ್ರೋಟೋಕಾಲ್‌ನಲ್ಲಿ ವ್ಯತ್ಯಾಸಗಳು ಕಂಡುಬಂದ ಬಳಿಕ ಈ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗುತ್ತಿದೆ.

ಲಸಿಕೆಯ
COVID-19 vaccine
author img

By

Published : Jul 7, 2020, 7:35 PM IST

ನವದೆಹಲಿ: ಸ್ಥಳೀಯ ಕೋವಿಡ್ -19 ಲಸಿಕೆಯನ್ನು ಆಗಸ್ಟ್ 15ರ ಒಳಗೆ ತರುವ ಭಾರತೀಯ ವೈದ್ಯ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭದಲ್ಲೇ ಅಡ್ಡಿಯೊಂದು ಎದುರಾಗಿದೆ. ಒಟ್ಟಾರೆ 12 ಕ್ಲಿನಿಕಲ್ ಸೈಟ್‌ಗಳ ಪೈಕಿ ಕೇವಲ ಐದಕ್ಕೆ ಮಾತ್ರವೇ ನೈತಿಕ ಸಮಿತಿಗಳಿಂದ ಅನುಮೋದನೆ ದೊರೆತಿದೆ.

ವರದಿಗಳ ಪ್ರಕಾರ, ಇನ್ನೂ ಏಳು ಕ್ಲಿನಿಕಲ್ ಸೈಟ್‌ಗಳಿಗೆ ಅನುಮೋದನೆಯನ್ನು ಸಂಬಂಧಪಟ್ಟ ನೈತಿಕ ಸಮಿತಿಗಳು ನೀಡಿಲ್ಲ. ಏಮ್ಸ್ ಮತ್ತು ವಿಶಾಖಪಟ್ಟಣಂ ಮೂಲದ ಕಿಂಗ್ ಜಾರ್ಜ್ ಆಸ್ಪತ್ರೆಯ ನೈತಿಕ ಸಮಿತಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಅನುಮೋದನೆ ನೀಡಲು ಹಿಂಜರಿಯುತ್ತವೆ. ಪ್ರಯೋಗಗಳಿಗೆ ಸಲ್ಲಿಸಿದ ಪ್ರೋಟೋಕಾಲ್‌ನಲ್ಲಿ ವ್ಯತ್ಯಾಸಗಳು ಕಂಡುಬಂದ ಬಳಿಕ ಈ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗುತ್ತಿದೆ.

ನೈತಿಕ ಸಮಿತಿಗಳ ಅನುಮೋದನೆ ಇಲ್ಲದೆ ಪ್ರಯೋಗಗಳನ್ನು ಆರಂಭಿಸಲು ಸಾಧ್ಯವಿಲ್ಲ. ಗಿಲ್ಲೂರ್ಕರ್ ಆಸ್ಪತ್ರೆ ನೈತಿಕ ಸಮಿತಿ (ನಾಗ್ಪುರ), ಸಾಂಸ್ಥಿಕ ನೈತಿಕ ಸಮಿತಿ, (ಏಮ್ಸ್-ಪಾಟ್ನಾ), ಸಾಂಸ್ಥಿಕ ನೈತಿಕ ಸಮಿತಿ, (ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆ-ಒಡಿಶಾ), ಸಾಂಸ್ಥಿಕ ನೈತಿಕ ಸಮಿತಿ, ಎಸ್‌ಆರ್‌ಎಂ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ತಮಿಳುನಾಡು) ಮತ್ತು ಐದು ನೈತಿಕ ಸಮಿತಿ ನಿಮ್ಸ್ ಇನ್​ಸ್ಟಿಟ್ಯೂಶನಲ್ ಎಥಿಕ್ಸ್ ಕಮಿಟಿ (ಹೈದರಾಬಾದ್) ಈಗಲೂ ಪ್ರೋಟೋಕಾಲ್ ಅನ್ನು ಪರಿಶೀಲಿಸುತ್ತಿವೆ.

ಈ ಐದು ನೈತಿಕ ಸಮಿತಿಗಳು ಒಟ್ಟಾರೆ ಲಸಿಕೆಯ ವಿನ್ಯಾಸವನ್ನು ಮೌಲ್ಯಮಾಪನ ಮಾಡುತ್ತಿವೆ ಎಂದು ಬಲ್ಲ ಮೂಲಗಳು 'ಈಟಿವಿ ಭಾರತ'ಗೆ ತಿಳಿಸಿವೆ. ಪ್ರೋಟೋಕಾಲ್​ನಲ್ಲಿ ಮಕ್ಕಳ ಮೌಲ್ಯಮಾಪನ ದಾಖಲೆಯ ಅನುಪಸ್ಥಿತಿಯ ವಿಚಾರಣೆಯು ಮತ್ತಷ್ಟು ವಿಳಂಬಗೊಳಿಸುತ್ತದೆ. ಸ್ಟೇಜ್​- 1 ಮತ್ತು ಸ್ಟೇಜ್​-2 ಪ್ರಯೋಗವು 12-65 ವಯಸ್ಸಿನ ಸ್ವಯಂಸೇವಕರ ಮೇಲೆ ನಡೆಸಲಾಗುತ್ತದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಡಿಜಿ ಡಾ. ಬಲರಾಮ್ ಭಾರ್ಗವ್​ ಅವರು ಇತ್ತೀಚೆಗೆ, ಐದು ವಿಭಿನ್ನ ಕ್ಲಿನಿಕಲ್ ಟ್ರಯಲ್ ಸೈಟ್‌ಗಳಲ್ಲಿ ಸ್ಟೇಜ್-​ I ಮತ್ತು ಸ್ಟೇಜ್​ II ಪ್ರಯೋಗದ ಬಳಿಕ ಆಗಸ್ಟ್ 15ರೊಳಗೆ ಭಾರತವು ತನ್ನ ಮೊದಲ ದೇಶಿ ಕೋವಿಡ್​-19 ಲಸಿಕೆ ಹೊಂದಲಿದೆ ಎಂದು ಪತ್ರವೊಂದರಲ್ಲಿ ತಿಳಿಸಿದ್ದರು.

ಪ್ರಮುಖ ಲಸಿಕೆ ತಯಾರಕ ಭಾರತ್ ಬಯೋಟೆಕ್ ಇತ್ತೀಚೆಗೆ ಹೈದರಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ (ಎನ್‌ಐವಿ) ಕೋವಿಡ್ -19 ಲಸಿಕೆಯ 'ಕೋವಾಕ್ಸಿನ್' ಕ್ಲಿನಿಕಲ್ ಪ್ರಯೋಗಕ್ಕಾಗಿ ನೋಂದಣಿ ಪ್ರಾರಂಭಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.