ಹೈದರಾಬಾದ್ : ಕೋವಿಡ್ ಹರಡುವಿಕೆಯ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ಮಧ್ಯೆ, ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಮ್ ಪ್ರಕಟಿಸಿದ ಹೊಸ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಚಿಕಿತ್ಸೆಯು ಕೋವಿಡ್-19 ಸೋಂಕಿತರ ಸಾವಿನ ಪ್ರಮಾಣವನ್ನು ಗಮನಾರ್ಹವಾಗಿ ಕಡಿತಗೊಳಿಸಿದೆ ಮತ್ತು ಹೃದಯ ಸಂಬಂಧಿತ ಅಡ್ಡಪರಿಣಾಮಗಳಿಲ್ಲ, ಸಾವಿನ ಸಂಖ್ಯೆಯನ್ನು ಇಳಿಮುಖಗೊಳಿಸಿದೆ ಎಂದು ಹೇಳಿದೆ.
ಆರು ಆಸ್ಪತ್ರೆಗಳಲ್ಲಿ ಮಾರ್ಚ್ 10 ಮತ್ತು ಮೇ 2, 2020ರ ನಡುವೆ ದಾಖಲಾದ 2,541 ರೋಗಿಗಳ ವಿಶ್ಲೇಷಣೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದ ಚಿಕಿತ್ಸೆ ಪಡೆದವರಲ್ಲಿ ಕೇವಲ 13 ಪ್ರತಿಶತದಷ್ಟು ಜನರು ಮಾತ್ರ ಸಾವನ್ನಪ್ಪಿದ್ದಾರೆ. ಯಾವುದೇ ರೋಗಿಗಳು ಹೃದಯದ ಗಂಭೀರ ವೈಪರೀತ್ಯಗಳನ್ನು ದಾಖಲಿಸಿಲ್ಲ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಅಧ್ಯಯನದ ಎಲ್ಲಾ ರೋಗಿಗಳು ಸರಾಸರಿ 64 ವರ್ಷ ವಯಸ್ಸಿನವರು, 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರು. ಸಂಶೋಧನೆಗಳನ್ನು ಹೆಚ್ಚು ವಿಶ್ಲೇಷಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಹೆನ್ರಿ ಫೋರ್ಡ್ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಸಮಿಯಾ ಅರ್ಷಾದ್ ಅವರೊಂದಿಗೆ ಸಹ-ಲೇಖಕರಾಗಿರುವ ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಂನ ಸಾಂಕ್ರಾಮಿಕ ಕಾಯಿಲೆಯ ವಿಭಾಗದ ಮುಖ್ಯಸ್ಥ ಡಾ. ಮಾರ್ಕಸ್ ಜೆರ್ವೋಸ್ ಹೇಳಿದ್ದಾರೆ.
ವಿಶ್ಲೇಷಣೆಯಲ್ಲಿ ಅಜಿಥ್ರೊಮೈಸಿನ್ನಿಂದ ಮಾತ್ರ ಚಿಕಿತ್ಸೆ ಪಡೆದವರಲ್ಲಿ ಶೇ.22.4ರಷ್ಟು ಜನರು ಸಾವನ್ನಪ್ಪಿದ್ದಾರೆ. ಅಜಿಥ್ರೊಮೈಸಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಸಂಯೋಜನೆಯೊಂದಿಗೆ ಚಿಕಿತ್ಸೆ ಪಡೆದವರಲ್ಲಿ 20.1 ಪ್ರತಿಶತದಷ್ಟು ಜನರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಸಾವನ್ನಪ್ಪಿದ ರೋಗಿಗಳು ದೀರ್ಘಕಾಲದ ಮೂತ್ರಪಿಂಡ ಮತ್ತು ಶ್ವಾಸಕೋಶದ ಕಾಯಿಲೆ ಸೇರಿ ಗಂಭೀರವಾದ ಕಾಯಿಲೆಗಳನ್ನು ಹೊಂದಿದ್ದರು. 88%ರಷ್ಟು ಉಸಿರಾಟದ ವೈಫಲ್ಯದಿಂದ ಸಾಯುತ್ತಿದ್ದಾರೆ.