ಹೈದರಾಬಾದ್: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ದಮನ್ ಪಲ್ಲಿ ಮೂಲದ ಗರ್ಭಿಣಿಯೊಬ್ಬರು ಜೀವನೋಪಾಯಕ್ಕಾಗಿ ಮೂರು ತಿಂಗಳ ಹಿಂದೆ ಹೈದರಾಬಾದ್ಗೆ ತಮ್ಮ ಗಂಡನಜೊತೆ ಬಂದಿದ್ದರು. ಆದರೆ, ಲಾಕ್‌ಡೌನ್ ಆದೇಶವಾಗಿದ್ದರಿಂದ ತಮ್ಮ ತವರಿಗೆ ತೆರಳಲು ವಾಹನ ಸಿಗದೆ, 100 ಕಿ ಮೀ ವರೆಗೆ ನಡೆದುಕೊಂಡೇ ಬಂದಿದ್ದಾರೆ.
ಸುನೀತಾ ಶೀಲ್ ಪತಿ ಶ್ರೀರಾಮ್ ಶೀಲ್ ದಂಪತಿ‘ ಈ ತಿಂಗಳೊಳಗೆ ಊರು ಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ,ಲಾಕ್‌ಡೌನ್ ವಿಸ್ತರಣೆಯು ಅವರ ಕನಸುಗಳನ್ನು ಹಾಳುಮಾಡಿತ್ತು. ಇತ್ತ ಯಾವುದೇ ಕೆಲಸವಿಲ್ಲದೆ ಇದ್ದಿದ್ದರಿಂದ ಜೀವನ ನಿರ್ವಹಣೆ ಕಷ್ಟವಾಯಿತು. ಇದರಿಂದ ತಮ್ಮ ತವರಿಗೆ ಹೋಗಲು ನಿರ್ಧಾರ ಮಾಡಿದರು.
ಇವರು. ಇದೇ ಸೋಮವಾರ ಬೆಳಗ್ಗೆ ಕಾಲ್ನಡಿಗೆಯಲ್ಲಿ ಹೈದರಾಬಾದ್ನಿಂದ ಹೊರಟರು. ಬಹಳ ದೂರ ಪ್ರಯಾಣಿಸಿದ ನಂತರ ಹೆದ್ದಾರಿಯಲ್ಲಿ ಗರ್ಭಿಣಿ ಸುನೀತಾ ದುಸ್ಥಿತಿ ಕಂಡು ಲಾರಿ ಚಾಲಕನೊಬ್ಬ ಅವರನ್ನು ಲಾರಿಗೆ ಹತ್ತಿಸಿಕೊಂಡು ಸೂರ್ಯಪೇಟೆ ತನಕ ಬಿಟ್ಟನು. ಅಲ್ಲಿಂದ ಅವರು ಕಮ್ಮಂ ಜಿಲ್ಲೆಯ ಕುಸುಮಾಂಚಿ ತಲುಪಿದರು.
ಕುಸುಮಾಂಚಿಯಲ್ಲಿ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು, ರಸ್ತೆಯಲ್ಲಿ ಗರ್ಭಿಣಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಖಮ್ಮಂನ "ರೈಸ್ ಸೇವಾ ಫೌಂಡೇಶನ್" ಗೆ ಮಾಹಿತಿ ನೀಡಲಾಗಿ, ಪ್ರತಿಷ್ಠಾನದ ಸ್ಥಾಪಕ ಅನ್ನಂ ಶ್ರೀನಿವಾಸ ರಾವ್ ಅವರ ತಂಡವು ಆಂಬ್ಯುಲೆನ್ಸ್ ಮೂಲಕ ಕುಸುಮಾಂಚಿಗೆ ಆಗಮಿಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಈಕೆಗೆ ಚಿಕಿತ್ಸೆ ನೀಡುತ್ತಿದ್ದು, ಗರ್ಭಿಣಿ ಆರೋಗ್ಯ ಸ್ಥಿತಿ ಈಗ ಉತ್ತಮವಾಗಿದೆ.