ಶ್ರೀನಗರ: ವಿಧಿ 370 ರದ್ದಾದ ಬಳಿಕ ಕಾಶ್ಮೀರ ಪರಿಸ್ಥಿತಿ ಹೇಗಿದೆ ಎಂಬ ಕುತೂಹಲ ಎಲ್ಲರದ್ದು. ಇಲ್ಲಿ ಪತ್ರಕರ್ತರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಈ ಕುರಿತು ಈಟಿವಿ ಭಾರತ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.
ಕಾಶ್ಮೀರದಲ್ಲಿ ಪತ್ರಕರ್ತರ ಪರಿಸ್ಥಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಈಟಿವಿ ಭಾರತವು ಮೂವರು ಸ್ಥಳೀಯ ಪತ್ರಕರ್ತೆಯರನ್ನು ಸಂದರ್ಶನ ಮಾಡಿದೆ.
15 ದಿನಗಳಿಂದ ಏನೂ ಬರೆದಿಲ್ಲ: ಶಹಾನಾ ಭಾನು
ಈ ಹೋಟೆಲ್ನಲ್ಲಿ ಮಾಧ್ಯಮ ಕೇಂದ್ರ ಆರಂಭವಾಗಿದೆ ಎಂಬ ಮಾಹಿತಿಯೂ ಇರಲಿಲ್ಲ. ಇಲ್ಲಿ ಬಂದು ನೋಡಿದ್ರೆ ಪತ್ರಕರ್ತರು ಕ್ಯೂನಲ್ಲಿ ನಿಂತಿದ್ದಾರೆ. ಎಲ್ಲರಿಗೂ ತಮ್ಮ ವರದಿಗಳು ಮುಖ್ಯ ಎನಿಸುತ್ತದೆ. ಇದು ಪತ್ರಕರ್ತರಿಗೆ ಬಹಳ ಕಷ್ಟಕರ ಸ್ಥಿತಿ. ಯಾವುದೋ ಏಲಿಯನ್ಗಳಿರುವ ಪ್ರದೇಶದಲ್ಲಿ ಇರುವಂತೆ ಭಾಸವಾಗುತ್ತಿದೆ. ನಾನು ಮನೆಯಿಂದ ಹೊರಡುವಾಗ ನನ್ನ ಕುಟುಂಬ ನನ್ನ ಜೊತೆ ಮತ್ತೊಂದು ವಾಹನದಲ್ಲಿ ಬಂದರು. ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅವರಿಗೆ ತೋರಿಸಿದೆ. ಅಕಸ್ಮಾತ್ ನಾನು ಮನೆಗೆ ಬರದಿದ್ದ ಪಕ್ಷದಲ್ಲಿ ಇಲ್ಲಿ ಹುಡುಕುವಂತೆ ಅವರಿಗೆ ಹೇಳಿದ್ದೇನೆ. ಒಟ್ಟಾರೆ ಕಾಶ್ಮೀರದಲ್ಲಿ ಸಂವಹನ ಸಂಪೂರ್ಣ ಸ್ಥಬ್ದವಾಗಿದೆ.
ಶಿಲಾಯುಗ ಕಾಲದಲ್ಲಿದ್ದೀವಾ ಅನಿಸುತ್ತಿದೆ: ರಜಿಯಾ ನೂರ್
ನಾನು ಒಂದು ರಾಷ್ಟ್ರೀಯ ಪತ್ರಿಕೆಗೆ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸದ್ಯದ ಪರಿಸ್ಥಿತಿ ನೋಡಿದರೆ ಶಿಲಾಯುಗ ಕಾಲದಲ್ಲಿದ್ದೀವಾ ಎಂಬ ಸಂದೇಹ ಬರುತ್ತಿದೆ. ಮೊಬೈಲ್, ಟೆಲಿಫೋನ್, ಇಂಟರ್ನೆಟ್ ಏನೂ ಇಲ್ಲದ ಪರಿಸ್ಥಿತಿಯಲ್ಲಿ ಪತ್ರಕರ್ತರು ಹೇಗೆ ಕೆಲಸ ಮಾಡಲು ಸಾಧ್ಯ. ಇಲ್ಲೊಂದು ಮಾಧ್ಯಮ ಕೇಂದ್ರ ಆರಂಭವಾಗಿದೆ ಸದ್ಯ ಇಲ್ಲಾದರೂ ಕೆಲಸ ಮಾಡಬಹುದು ಎಂದು ಬಂದರೆ ಒಂದು ವರದಿ ಫೈಲ್ ಮಾಡಲು ಕ್ಯೂನಲ್ಲಿ ನಿಲ್ಲಬೇಕು. ಈ ಹಿಂದೆ ಮೂರು ಸಾರಿ ಇಂಥ ಪರಿಸ್ಥಿತಿ ಇದ್ದರೂ ಇಷ್ಟು ಕಠಿಣವಾಗಿರಲಿಲ್ಲ. ಅದರಲ್ಲೂ ಪತ್ರಕರ್ತೆಯರು ಕೆಲಸ ಮಾಡುವುದು ಇಲ್ಲಿ ಇನ್ನಷ್ಟು ಕಷ್ಟವಾಗುತ್ತಿದೆ. ನಾನು ಕೆಲಸಕ್ಕೆ ಹೋದ ನಂತರ ನಮ್ಮ ಮನೆಯವರು ಗೇಟ್ ಬಳಿ ಕಾದು ನಿಂತಿರುತ್ತಾರೆ.
ಇದೊಂದು ಸವಾಲಿನ ಸಮಯ: ರಿಫತ್