ನವದೆಹಲಿ: ಆಧಾರ್ ಬಳಕೆ ಐಚ್ಛಿಕ ಎನ್ನುವ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆಧಾರ್ ಕುರಿತಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕಠಿಣ ಪದ ಬಳಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಧಾರ್ ಕುರಿತಾಗಿ ಸುಪ್ರೀಂ ನೀಡಿದ ತೀರ್ಪು ಗಮನಾರ್ಹ. ಆದರೆ ಆಧಾರ್ ಅನ್ನು ಸಾಂವಿಧಾನಿಕ ಮೋಸ (constitutional fraud) ಎಂದು ಕರೆದಿದ್ದು ಸರಿಯಲ್ಲವ. ಹಾಗೇ ಇಂತಹ ಕಠಿಣ ಪದಗಳನ್ನು ಬಳಸದಂತೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸುಪ್ರೀಂ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.
ಅಧಾರ್ ಸಂಬಂಧಿತ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು 500 ಪುಟಗಳ ಭಿನ್ನಾಭಿಪ್ರಾಯದ ತೀರ್ಪನ್ನು ಪ್ರಸ್ತಾಪಿಸಿದ ಬಳಿಕ ರವಿಶಂಕರ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಈ ಮನವಿ ಮಾಡಿದ್ದಾರೆ.
ಆದರೆ ಯಾವುದೇ ನ್ಯಾಯಮೂರ್ತಿಗಳ ಹೆಸರನ್ನು ಕಾನೂನು ಸಚಿವರು ಈ ವೇಳೆ ಪ್ರಸ್ತಾಪಿಸಿಲ್ಲ.