ತಿರುಚಿನಾಪಳ್ಳಿ: ತಿರುವರೂರು ಜಿಲ್ಲೆಯಲ್ಲಿ ಅನಿಮಲ್ ಮೆಡಿಕಲ್ ಮೊಬೈಲ್ ಆಂಬ್ಯುಲೆನ್ಸ್ (ಎಎಂಎಂಎ) ಸೇವೆಗೆ ತಮಿಳುನಾಡು ರಾಜ್ಯ ಸರ್ಕಾರದ ಆಹಾರ ಸಚಿವ ಆರ್.ಕಾಮರಾಜ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ಜನರು 1962 ಸಂಖ್ಯೆಗೆ ಕರೆ ಮಾಡುವ ಮೂಲಕ ಆಂಬ್ಯುಲೆನ್ಸ್ ಸೇವೆ ಪಡೆಯಬಹುದು. ಎಲ್ಲಾ ತುರ್ತು ಪಶುವೈದ್ಯಕೀಯ ಔಷಧಿಗಳು ಆಂಬ್ಯುಲೆನ್ಸ್‌ನಲ್ಲಿ ಇರುತ್ತವೆ. ಆಂಬ್ಯುಲೆನ್ಸ್‌ನಲ್ಲಿ ವಿಷಪೂರಿತ ಹಾವುಗಳ ಕಡಿತಕ್ಕೂ ಔಷಧ ಲಭ್ಯವಿದೆ ಹಾಗೂ ಸೂಕ್ಷ್ಮದರ್ಶಕ ಕೂಡ ಇದರಲ್ಲಿರಲಿದೆ ಎಂದು ಹೇಳಿದರು.
ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಆಂಬುಲೆನ್ಸ್ ತಯಾರಿಸಲಾಗಿದೆ. ಪಶು ವೈದ್ಯರು ಮತ್ತು ಸಹಾಯಕರು ರಾಸುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.