ETV Bharat / bharat

ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ.. ಆದರೆ, ಕಂಡೀಷನ್ಸ್‌..

author img

By

Published : May 31, 2020, 9:34 PM IST

ದೇವಾಲಯದ ಸಮೀಪವಿರುವ ಪುಷ್ಕರಿಣಿ, ಸರೋವರಗಳು ಮತ್ತು ಕೊಳಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುವುದಿಲ್ಲ. ಗಿರಿಗೆ ಬರವ ಭಕ್ತರು ಒಂದಿಷ್ಟು ಮಾನದಂಡಗಳನ್ನ ಪಾಲಿಸಲೇಬೇಕಿದೆ.

Tirumala Temple will be opened from June 8
ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ..!

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಜೂನ್ 8ರಿಂದ ತಿರುಪತಿಯ ತಿರುಮಲ ದೇವಸ್ಥಾನ ತೆರೆಯಲಿದೆ. ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗುತ್ತೆ. ಗಂಟೆಗೆ 300 ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ. ಈ ಕುರಿತು ಧರ್ಮದತ್ತಿ ಇಲಾಖೆಯು ಹಲವಾರು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.

ಅವುಗಳನ್ನು ವೈದ್ಯಕೀಯ ವಿಭಾಗದ ಅನುಮೋದನೆಗೆ ಕಳುಹಿಸಿಸಲಾಗಿದೆ. ವೈದ್ಯಕೀಯ ಇಲಾಖೆ ಇವುಗಳನ್ನು ಅನುಮೋದಿಸಿ ಅಧಿಕೃತ ಆದೇಶಗಳನ್ನು ನೀಡಬೇಕಾಗಿದೆ.

ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ..

ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ ಅಂಶಗಳು..!

  • ದೇವಾಲಯಗಳ ಭೇಟಿಯ ಸಮಯವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ಧರಿಸಬೇಕು.
  • ಭಕ್ತರು ಮುಂಚಿತವಾಗಿ ಕಾಯ್ದಿರಿಸಿದರೆ ಅವರಿಗೆ ಸಮಯ ಸ್ಲಾಟ್ ದರ್ಶನ ನೀಡಲಾಗುತ್ತದೆ.
  • ದರ್ಶನಕ್ಕೆ ಹೋಗುವ ಪ್ರತಿಯೊಬ್ಬ ಭಕ್ತನು ಆಧಾರ್ ಅಥವಾ ಇನ್ನಾವುದೇ ಗುರುತಿನ ಚೀಟಿ ಕೊಂಡೊಯ್ಯಬೇಕು.
  • ರಾಹು, ಕೇತು ಪೂಜೆಗಳು, ವ್ರತಗಳು ಮತ್ತು ಹೋಮಗಳನ್ನು ಮಾಡಲು ಕೇವಲ ಶೇ.30ರಷ್ಟು ಭಕ್ತರಿಗೆ ಮಾತ್ರ ಅವಕಾಶ ನೀಡಬೇಕು.
  • ಕೇವಲ ಶೇ.50ರಷ್ಟು ಕೊಠಡಿಗಳನ್ನು ಮಾತ್ರ ಭಕ್ತರಿಗೆ ಮೀಸಲಿಡಬೇಕು.
  • ಕೂದಲು ಕತ್ತರಿಸುವ ಸ್ಥಳದಲ್ಲಿ ಕ್ಷೌರಿಕರು ಪ್ರತಿ ಬಾರಿಯೂ ಎಚ್ಚರಿಕೆ ವಹಿಸಬೇಕು.
  • ದೇವಾಲಯದ ಆವರಣದಲ್ಲಿರುವ ಅಂಗಡಿಗಳನ್ನು ಒಂದರ ನಂತರ ಒಂದರಂತೆ ತೆರೆಯಲು ಅವಕಾಶ ನೀಡಬೇಕು.
  • ಭಕ್ತರಿಗೆ ಯಾವುದೇ ಪ್ರಸಾದ ವಿತರಣೆ ಇರುವುದಿಲ್ಲ.
  • ದೇವಾಲಯದ ಸಮೀಪವಿರುವ ಪುಷ್ಕರಿಣಿ, ಸರೋವರಗಳು ಮತ್ತು ಕೊಳಗಳಲ್ಲಿ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.