ETV Bharat / bharat

ತಿಹಾರ್​ ಜೈಲಿಗೂ ಕಾಲಿಟ್ಟ ಮಹಾಮಾರಿ: ಸಹಾಯಕ ಅಧೀಕ್ಷಕನಿಗೆ ಕೊರೊನಾ! - ತಿಹಾರ್​ ಜೈಲಿನ ಸಹಾಯಕ ಅಧೀಕ್ಷಕನಿಗೆ ಕೊರೊನಾ ಸೋಂಕು

ಕೊರೊನಾ ಸೋಂಕಿಗೆ ಒಳಗಾಗಿರುವ ಅಧಿಕಾರಿಯ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾದ ಮತ್ತೊಬ್ಬ ಜೈಲು ಸಿಬ್ಬಂದಿಯನ್ನು ಕೂಡ ಕೊರೊನಾ ಟೆಸ್ಟ್​​ಗೆ ಒಳಪಡಿಸಲಾಗಿದೆ. ಫಲಿತಾಂಶ ಇನ್ನೂ ಬಂದಿಲ್ಲವಾದರೂ ಆತನನ್ನು ಹೋಮ್​ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

ತಿಹಾರ್​ ಜೈಲಿನ ಸಹಾಯಕ ಅಧೀಕ್ಷಕನಿಗೂ ತಟ್ಟಿದ ಕೊರೊನಾ ಸೋಂಕು

author img

By

Published : May 25, 2020, 11:43 AM IST

ನವದೆಹಲಿ: ತಿಹಾರ್​ ಜೈಲಿನ 45 ವರ್ಷದ ಸಹಾಯಕ ಅಧೀಕ್ಷಕರೊಬ್ಬರಿಗೆ ಕೊರೊನಾ​ ಸೋಂಕು ತಗುಲಿದ್ದು, ಜೈಲಿನಲ್ಲಿ ಮೊದಲ ಪ್ರಕರಣ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್​ ಜೈಲ್​ 7ರಲ್ಲಿ ನೇಮಕಗೊಂಡಿರುವ ಸಹಾಯಕ ಅಧೀಕ್ಷಕರು ಜೈಲಿನ ರೆಸಿಡೆನ್ಷಿಯಲ್​ ಕಾಂಪ್ಲೆಕ್ಸ್​ನ ನಿವಾಸಿಯಾಗಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಹಾಯಕ ಅಧೀಕ್ಷಕರು ರಜೆ ಮೇಲೆ ತಮ್ಮ ಕುಟುಂಬದವರನ್ನು ಕಾಣಲು ಮನೆಗೆ ತೆರಳುವವರಿದ್ದರು. ಆದರೆ ಮನೆಗೆ ತೆರಳುವ ಮುನ್ನ ಅವರಾಗಿಯೇ ಮೇ 22ರಂದು ಆಮ್ರಪಾಲಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಅದರಲ್ಲಿ ಪಾಸಿಟಿವ್​ ವರದಿ ಬಂದಿದೆ ಎಂದು ಜೈಲಿನ ಡೈರೆಕ್ಟರ್ ಜನರಲ್ ಸಂದೀಪ್​ ಗೋಯೆಲ್ ತಿಳಿಸಿದ್ದಾರೆ.

ಇನ್ನು ಕೊರೊನಾ ಸೋಂಕಿಗೆ ಒಳಗಾಗಿರುವ ಅಧಿಕಾರಿಯ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾದ ಮತ್ತೊಬ್ಬ ಜೈಲು ಸಿಬ್ಬಂದಿಗೂ ಕೊರೊನಾ ಟೆಸ್ಟ್​ ಮಾಡಿಸಲಾಗಿದೆ. ಫಲಿತಾಂಶ ಇನ್ನೂ ಬಂದಿಲ್ಲವಾದರೂ ಆತನನ್ನು ಹೋಮ್​ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

ಇನ್ನು ಸೋಂಕಿತ​ ಅಧಿಕಾರಿಯನ್ನು ಸಂಪರ್ಕಿಸಿದ್ದ ಇತೆರೆ 5 ಅಧಿಕಾರಿಗಳನ್ನೂ ಕೂಡ ಹೋಮ್​ ಕ್ವಾರಂಟೈನ್​​ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.