ETV Bharat / bharat

ನಿರ್ಭಯಾ ಅಪರಾಧಿಗಳ ಗಲ್ಲುಶಿಕ್ಷೆಗೆ ದಿನಗಣನೆ: ಕುಟುಂಬಸ್ಥರ ಕೊನೆಯ ಭೇಟಿಗೆ ಜೈಲಾಧಿಕಾರಿಗಳಿಂದ ಪತ್ರ

2012ರ ಡಿಸೆಂಬರ್​ನಲ್ಲಿ ದೆಹಲಿಯಲ್ಲಿ ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾದ ಅಪರಾಧಿಗಳಿಗೆ ತಿಹಾರ್​ ಜೈಲಾಧಿಕಾರಿಗಳು ಪತ್ರ ಬರೆದಿದ್ದಾರೆ.

Tihar Jail Official Have written Nirbhaya convicts,ನಿರ್ಭಯಾ ಅಪರಾಧಿಗಳಿಗೆ ತಿಹಾರ್​ ಜೈಲಿನಿಂದ ಪತ್ರ
ನಿರ್ಭಯಾ ಅಪರಾಧಿಗಳಿಗೆ ತಿಹಾರ್​ ಜೈಲಿನಿಂದ ಪತ್ರ
author img

By

Published : Feb 22, 2020, 10:35 AM IST

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳಿಗೆ ತಿಹಾರ್​ ಜೈಲು ಅಧಿಕಾರಿಗಳು ಪತ್ರ ಬರೆದಿದ್ದು, ಯಾವಾಗ ಕುಟುಂಬಸ್ಥರನ್ನು ಭೇಟಿಯಾಗುತ್ತೀರಾ? ಎಂದು ಕೇಳಿದ್ದಾರೆ.

  • Tihar Jail Official: Have written to all four Nirbhaya case convicts in connection with their last meeting with families. Mukesh and Pawan were told that they had already met their families before February 1 death warrant. Akshay& Vinay have now been asked when they want to meet

    — ANI (@ANI) February 22, 2020 " class="align-text-top noRightClick twitterSection" data=" ">

ನಾಲ್ವರು ಅಪರಾಧಿಗಳಾದ ಮುಖೇಶ್, ಪವನ್, ಅಕ್ಷಯ್ ಮತ್ತು ವಿನಯ್‌ಗೆ ಮಾರ್ಚ್ 3ರಂದು ಬೆಳಿಗ್ಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್​ ಆದೇಶ ನೀಡಿದೆ. ಹೀಗಾಗಿ ಅಪರಾಧಿಗಳು ಕೊನೆಯದಾಗಿ ತನ್ನ ಕುಟುಂಬಸ್ಥರನ್ನು ಭೇಟಿ ಮಾಡುವ ಕುರಿತು ಈ ಪತ್ರದಲ್ಲಿ ಕೇಳಲಾಗಿದೆ. ಈ ಹಿಂದೆ ಅಂದರೆ ಫೆ.1ಕ್ಕೆ ಮರಣದಂಡನೆ ಶಿಕ್ಷೆ ನಿಗದಿಯಾಗಿತ್ತು. ಆಗ ಮುಖೇಶ್, ಪವನ್ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಹೀಗಾಗಿ ಅಕ್ಷಯ್ ಮತ್ತು ವಿನಯ್​ಗೆ ಮಾತ್ರ ಕುಟುಂಬಸ್ಥರನ್ನು ಯಾವಾಗ ಭೇಟಿಯಾಗುತ್ತೀರೆಂದು ಕೇಳಲಾಗಿದೆ.

2012ರ ಡಿಸೆಂಬರ್​ನಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರಿಗೆ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್‌ ತೀರ್ಪು ಹೊರಡಿಸಿತ್ತು. ನಂತರ ಫೆಬ್ರವರಿ 1ಕ್ಕೆ ಹೊಸ ದಿನಾಂಕ ನಿಗದಿಪಡಿಸಲಾಗಿತ್ತು.

ಇದಾದ ಬಳಿಕ ಫೆ.1ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಫೆ.17ರಂದು ಪಟಿಯಾಲ ಹೌಸ್​ ಕೋರ್ಟ್​, ಮಾರ್ಚ್​ 3ಕ್ಕೆ ಹೊಸದಾಗಿ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.