ನವದೆಹಲಿ : ಹುಲಿಗಳ ಸಂತತಿ ವರ್ಷದಿಂದ ವರ್ಷಕ್ಕೆ ಶೇ.6ರಷ್ಟು ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಇಲಾಖೆಯ ಅಡಿ ಬರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಇದನ್ನು ಸ್ಪಷ್ಟಪಡಿಸಿದೆ. 2006, 2010, 2014 ಹಾಗೂ 2018ರಲ್ಲಿ ಹುಲಿ ಗಣತಿ ಕೈಗೊಳ್ಳಲಾಗಿತ್ತು. ಇಲ್ಲಿ ದೊರಕಿದ ಅಂಕಿ-ಅಂಶಗಳ ಮೂಲಕ ಹುಲಿ ಸಂತತಿ ಏರಿಕೆ ಕಂಡು ಬಂದಿದೆ ಎಂದು ಪ್ರಾಧಿಕಾರ ತಿಳಿಸಿದೆ.
2012ರಿಂದ 2019ರವರೆಗೆ ಸುಮಾರು ವಾರ್ಷಿಕ ಸರಾಸರಿ 94 ಹುಲಿ ಸಾವನ್ನಪ್ಪಿದ್ದವು. ಹುಲಿಗಳ ಸಂತತಿಯಲ್ಲಿನ ಹೆಚ್ಚಳ ಇದನ್ನು ಸಮತೋಲನದಲ್ಲಿ ಇರಿಸಿದೆ ಎಂದು ಪ್ರಾಧಿಕಾರ ಉಲ್ಲೇಖಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿಗಳ ರಕ್ಷಣೆಗಾಗಿ ಪ್ರಾಜೆಕ್ಟ್ ಟೈಗರ್ ರೂಪಿಸಿರೋದು ಕೂಡಾ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.