ETV Bharat / bharat

ಕಟ್ಟಡ ಕುಸಿದು ಹತ್ತು ಮಂದಿ ಸಾವು: ಅವಶೇಷಗಳಡಿ 20ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ!

ಮೂರು ಅಂತಸ್ತಿನ ಕಟ್ಟಡ ಕುಸಿದು ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಥಾಣೆ ಜಿಲ್ಲೆಯ ಭೀವಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ನಡೆದಿದೆ.

Ndrf operation
ಕಟ್ಟಡ ಕುಸಿದ ಸ್ಥಳದಲ್ಲಿ ಎನ್​ಡಿಆರ್​​ಎಫ್ ಕಾರ್ಯಾಚರಣೆ
author img

By

Published : Sep 21, 2020, 7:34 AM IST

Updated : Sep 21, 2020, 8:45 AM IST

ಭಿವಂಡಿ(ಮಹಾರಾಷ್ಟ್ರ): ಥಾಣೆ ಜಿಲ್ಲೆಯ ಭಿವಂಡಿ ಪಟ್ಟಣದ ಪಟೇಲ್​ ಕಾಂಪೌಂಡ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು, ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ.

ಕಟ್ಟಡ ಕುಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲಿನ ಜನರು 25 ಜನರನ್ನು ರಕ್ಷಿಸಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ 20ರಿಂದ 25 ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಎನ್​ಡಿಆರ್​ಎಫ್​​ ರಕ್ಷಣಾ ಕಾರ್ಯ ನಡೆಸುತ್ತಿದೆ.

ಕಟ್ಟಡ ಕುಸಿದ ಸ್ಥಳದಲ್ಲಿ ಎನ್​ಡಿಆರ್​​ಎಫ್ ಕಾರ್ಯಾಚರಣೆ

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಜಿಲಾನಿ ಹೆಸರಿನ ಅಪಾರ್ಟ್​ಮೆಂಟ್​​ 1984ರಲ್ಲಿ ನಿರ್ಮಾಣವಾಗಿತ್ತು. ಬೆಳಗಿನ ಜಾವ 3:20ರ ಸುಮಾರಿಗೆ ಈ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು, ಭಯಭೀತರಾಗಿದ್ದ ಜನರ ಕೂಗಾಟ ಕೇಳಿ ನಾವು ಓಡೋಡಿ ಬಂದೆವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜನರು ನಿದ್ದೆಯಲ್ಲಿದ್ದಾಗ ತಡರಾತ್ರಿ 21 ಫ್ಲ್ಯಾಟ್​​ಗಳನ್ನು ಹೊಂದಿರುವ ಈ ಅಪಾರ್ಟ್​ಮೆಂಟ್​​ ಅರ್ಧದಷ್ಟು ಕುಸಿದು ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗುವೊಂದನ್ನು ಎನ್​ಡಿಆರ್​ಎಫ್​​ ತಂಡದವರು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ.

Last Updated : Sep 21, 2020, 8:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.