ಮುಂಬೈ: ಇಲ್ಲಿನ ಮೂವರು ಪತ್ರಕರ್ತರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ.
ಈ ಮೂರು ಪತ್ರಕರ್ತರನ್ನು ಪೊವೈನ ಐಸೊಲೇಷನ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಮೂವರು ಪತ್ರಕರ್ತರು ಇತರ ಪತ್ರಕರ್ತರೊಂದಿಗೆ ಬಾಂದ್ರಾದ ಹೋಟೆಲ್‌ವೊಂದರಲ್ಲಿ ಉಳಿದು ದಕ್ಷಿಣ ಮುಂಬೈಯಲ್ಲಿ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು.
ಅವರ 37 ಸಹೋದ್ಯೋಗಿಗಳ ವರದಿ ನೆಗೆಟಿವ್ ಬಂದಿದ್ದು, 14 ದಿನ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಈವರೆಗೆ 2334 ಕೋವಿಡ್-19 ಪ್ರಕರಣಗಳು ದಾಖಲಾಗಿದೆ. 160 ಜನ ಮೃತಪಟ್ಟಿದ್ದು, 229 ಜನ ಗುಣಮುಖರಾಗಿದ್ದಾರೆ.