ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಅನ್ಸರ್ ಘಜ್ವಾ ಉಲ್ ಹಿಂದ್ ಉಘ್ರ ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಎನ್‌ಕೌಂಟರ್ ಮೂಲಕ ಭಾರತೀಯ ಸೇನೆ ಹೊಡೆದುರುಳಿಸಿದೆ.
![Representative Image](https://etvbharatimages.akamaized.net/etvbharat/prod-images/6122963_vicky.jpg)
![Representative Image](https://etvbharatimages.akamaized.net/etvbharat/prod-images/6122963_vi.jpg)
ಇಂದು ಮುಂಜಾನೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಜಂಗೀರ್ ರಫೀಕ್ ವಾನಿ, ರಾಜಾ ಉಮರ್ ಮಕ್ಬೂಲ್ ಭಟ್ ಮತ್ತು ಉಜೈರ್ ಅಮೀನ್ ಭಟ್ ಎಂಬ ಮೂವರನ್ನು ಟ್ರಾಲ್ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.