ನವದೆಹಲಿ: ಇತಿಹಾಸದಲ್ಲೇ ಇದೊಂದು ದೀರ್ಘವಾದ ಬಜೆಟ್ ಭಾಷಣವಾಗಿದೆ. ಆದರೆ ಇದರಲ್ಲಿ ಏನೂ ಇಲ್ಲ, ಎಲ್ಲಾ ಖಾಲಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
-
Congress leader Rahul Gandhi: Maybe this was the longest #Budget speech in history but it had nothing, it was hollow. https://t.co/1j2Gf1mM5I pic.twitter.com/lPpap3PaTJ
— ANI (@ANI) February 1, 2020 " class="align-text-top noRightClick twitterSection" data="
">Congress leader Rahul Gandhi: Maybe this was the longest #Budget speech in history but it had nothing, it was hollow. https://t.co/1j2Gf1mM5I pic.twitter.com/lPpap3PaTJ
— ANI (@ANI) February 1, 2020Congress leader Rahul Gandhi: Maybe this was the longest #Budget speech in history but it had nothing, it was hollow. https://t.co/1j2Gf1mM5I pic.twitter.com/lPpap3PaTJ
— ANI (@ANI) February 1, 2020
ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ್ಮ ದೇಶ ಮುಖ್ಯವಾಗಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಯಾವೊಂದು ಕಾರ್ಯತಂತ್ರದ ಯೋಜನೆ ಈ ಬಜೆಟ್ನಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ತಂತ್ರಗಾರಿಕೆ ಇದೆಯೇ ಹೊರತು, ಪ್ರಧಾನ ಉದ್ದೇಶವಿಲ್ಲ. ಈ ಬಜೆಟ್ ಕೇಂದ್ರ ಸರ್ಕಾರ, ಅದರ ಮನಸ್ಥಿತಿ, ಪುನರಾವರ್ತನೆಗಳನ್ನ ಬಹಳ ಚೆನ್ನಾಗಿ ವಿವರಿಸುತ್ತದೆ ಎಂದಿದ್ದಾರೆ.