ಬಕ್ಸಾ (ಅಸ್ಸಾಂ): ಕೊರೊನಾ ವೈರಸ್ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನ ಹಲವಾರು ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೆ ಅಸ್ಸಾಂನ ಈ ರೈತ ವಿಶಿಷ್ಟ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತ ಎಲ್ಲರ ಗಮನ ಸೆಳೆದಿದ್ದಾರೆ.
ಅಸ್ಸಾಂನ ಬಕ್ಸಾ ಜಿಲ್ಲೆಯ ಬಿಜಯ್ ಬ್ರಹ್ಮ ಎಂಬ ರೈತ ಕಳೆದ 12 ವರ್ಷಗಳಿಂದ ತನ್ನ ಹೊಲದ ಬಳಿಯಿರುವ ಮರದ ಮೇಲೆ ಮನೆ ಮಾಡಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.
“ವೈರಸ್ ಹರಡುತ್ತಿದ್ದರೂ, ನನಗದು ಪರಿಣಾಮ ಬೀರುವುದಿಲ್ಲ. ನಾನು ಹೇಗಿದ್ದರೂ ಮರದ ಮೇಲೆ ವಾಸಿಸುತ್ತಿದ್ದೇನೆ. ನನ್ನ ಕೃಷಿಭೂಮಿ ಇಲ್ಲಿಯೇ ಇದ್ದು, ಹಾಗಾಗಿ ನಾನು ಇಲ್ಲಿ ವಾಸಿಸುತ್ತಿದ್ದೇನೆ” ಎಂದು ಮರದ ಮನೆಯಲ್ಲಿ ವಾಸ ಮಾಡುತ್ತಿರುವ ಬಿಜಯ್ ಬ್ರಹ್ಮ ಈಟಿವಿ ಭಾರತ್‌ಗೆ ತಿಳಿಸಿದರು.
ಮರದ ಮೇಲೆ ಬಿದಿರಿನ ಸಹಾಯದಿಂದ ಮನೆ ನಿರ್ಮಿಸಿರುವ ರೈತ, ಹೆಚ್ಚಿನ ಸಮಯವನ್ನು ತಮ್ಮ "ಟ್ರೀ ಹೌಸ್"ನಲ್ಲಿ ಕಳೆಯುತ್ತಾರೆ. ಕೃಷಿಭೂಮಿಯಲ್ಲಿ ಬೆಳೆಸಿದ ಭತ್ತ ಮತ್ತು ತರಕಾರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ.