ETV Bharat / bharat

ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳಿಗೆ ವಿಶೇಷ ಗಿಫ್ಟ್‌: ಗಮನ ಸೆಳೆದ ಕೇರಳದ ಶಿಕ್ಷಕ - painting teacher in kerala

ಕೇರಳದ ಕಣ್ಣೂರಿನ ಶಿಕ್ಷಕ ಅನೂರ್​ ಎಂಬುವವರು ವಿದ್ಯಾರ್ಥಿಗಳ ಡಾಟ್​ ಪೇಂಟಿಂಗ್​ ಬಿಡಿಸಿ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

teacher-makes-dot-portraits-of-35-students-plans-on-gifting-them
ಕೇರಳದ ಮಾದರಿ ಶಿಕ್ಷಕ ಅನೂರ್​ ಅವರ ಡಾಟ್​ ಪೇಟಿಂಗ್
author img

By

Published : Aug 22, 2020, 8:24 PM IST

ಕಣ್ಣೂರು (ಕೇರಳ): ಸಾಮಾನ್ಯವಾಗಿ ಶಿಕ್ಷಕರ ದಿನಾಚರಣೆಗೆ ವಿದ್ಯಾರ್ಥಿಗಳು ಅವರನ್ನು ಮನರಂಜಿಸುವ ಅಥವಾ ಇಷ್ಟದ ಉಡುಗೊರೆ ನೀಡುವುದು ರೂಢಿ. ಆದರೆ, ಇಲ್ಲೊಬ್ಬ ಚಿತ್ರಕಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಉಡುಗೊರೆ ಕೊಡಲು ನಿರ್ಧರಿಸಿದ್ದಾರೆ.

ಕೇರಳದ ಮಾದರಿ ಶಿಕ್ಷಕ ಅನೂರ್​

ಕೇರಳ ರಾಜ್ಯದ ಕಣ್ಣೂರಿನ ಪಯಣ್ಣೂರ್ ಕಂದಂಗಳಿ ಶೆನಾಯ್ಸ್ ಮೆಮೋರಿಯಲ್​ ಶಾಲೆಯ ಚಿತ್ರಕಲಾ ಶಿಕ್ಷಕ ಅನೂರ್​ ವಿದ್ಯಾರ್ಥಿಗಳಿಗಾಗಿ ಡಾಟ್​ ಪೋರ್ಟ್​ರೇಟ್​​ (ಚುಕ್ಕಿ ಚಿತ್ರಕಲೆ) ಅನ್ನು ಬಿಡಿಸುತ್ತಿದ್ದಾರೆ.

teacher-makes-dot-portraits-of-35-students-plans-on-gifting-them
ಕೇರಳದ ಮಾದರಿ ಶಿಕ್ಷಕ ಅನೂರ್​

ಅನೂರ್​ ತಮ್ಮ ಚಿತ್ರಕಲಾ ವಿಭಾಗದ 35 ವಿದ್ಯಾರ್ಥಿಗಳ ಡಾಟ್​ ಪೇಂಟಿಂಗ್​ ಮಾಡುತ್ತಿದ್ದು, ಶಾಲೆ ಮತ್ತೆ ಆರಂಭವಾಗುತ್ತಿದ್ದಂತೆ ಅವರನ್ನು ವಿಶೇಷ ರೀತಿಯಲ್ಲಿ ಖುಷಿಗೊಳಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

'10ನೇ ತರಗತಿಗೆ ತೇರ್ಗಡೆ ಹೊಂದಿದ ಎಲ್ಲ ವಿದ್ಯಾರ್ಥಿಗಳಿಗೂ ಶಾಲೆಯ ಮೊದಲ ದಿನ ಈ ಉಡುಗೊರೆಯನ್ನು ನೀಡಲು ನಿರ್ಧರಿಸಿದ್ದೇನೆ. ಜೀವನದಲ್ಲಿ ಈ ಚಿತ್ರ ನೆನಪಿನ ಕ್ಷಣವಾಗಿರಲಿ. ಅದಕ್ಕಾಗಿಯೇ ನನ್ನ ಬಿಡುವಿನ ಸಮಯದಲ್ಲಿ ಈ ಪೇಂಟಿಂಗ್​ ಮಾಡುತ್ತಿದ್ದೇನೆ' ಎನ್ನುತ್ತಾರೆ ಅನೂರ್.

'ಒಂದು ಡಾಟ್​ ಪೇಂಟಿಂಗ್​ಗೆ ಒಂದು ದಿನ ಸಮಯ ತೆಗೆದುಕೊಳ್ಳುತ್ತದೆ. ನಂತರ ಲ್ಯಾಮಿನೇಶನ್ ಹಾಗೂ ಫ್ರೇಮ್​ ಮಾಡಿಸಲಾಗುತ್ತಿದೆ' ಎಂದರು.

ಹಿನ್ನೆಲೆ ಗಾಯಕ ಸುಕುಮಾರ್ ಅಜೀಕೊಂಡ್​, ಯೇಸುದಾಸ್, ಕೆ.ಎಸ್.ಚೈತ್ರಾ ಅವರ ಭಾವಚಿತ್ರಗಳನ್ನು ಡಾಟ್‌ ಪೇಂಟಿಂಗ್‌ ಮೂಲಕ ಇವರು ಬಿಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.