ETV Bharat / bharat

ಮಹಾರಾಷ್ಟ್ರದಲ್ಲಿ ತೃತೀಯ ಲಿಂಗಿಗಳಿಂದ 1 ಕೋಟಿ ರೂ ಮನೆ ಖರೀದಿ!

author img

By

Published : Jan 29, 2020, 3:02 PM IST

ಜಲ್ನಾ ಜಿಲ್ಲೆಯ ತೃತೀಯ ಲಿಂಗಗಳೆಲ್ಲಾ ಸೇರಿ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಲೆ ಕೊಂಡುಕೊಂಡಿದ್ದು, ಇದರ ಗೃಹ ಪ್ರವೇಶ ಕಾರ್ಯಕ್ರಮವು ಜ.30 ನಡೆಯಲಿದೆ.

mh_jal_02_3 party_part2_7204378
ಮಹಾರಾಷ್ಟ್ರದಲ್ಲಿ ತೃತೀಯ ಲಿಂಗಿಗಳಿಂದ 1 ಕೋಟಿ ಮನೆ ಖರೀದಿ, ಜ.30 ರಂದು ಗೃಹ ಪ್ರವೇಶ

ಜಾಲ್ನ(ಮಹಾರಾಷ್ಟ್ರ) : ಜಲ್ನಾ ಜಿಲ್ಲೆಯ ತೃತೀಯ ಲಿಂಗಗಳೆಲ್ಲಾ ಸೇರಿ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಲೆ ಕೊಂಡುಕೊಂಡಿದ್ದು, ಇದರ ಗೃಹ ಪ್ರವೇಶ ಕಾರ್ಯಕ್ರಮ ಜ.30 ನಡೆಯಲಿದೆ.

ನಮ್ಮಲ್ಲಿ ಹೆಚ್ಚಿನವರು ಬಾಲ್ಯದಿಂದಲೇ ತಮ್ಮ ತಮ್ಮ ಕುಟುಂಬಗಳಿಂದ ಹೊರಗುಳಿದಿದ್ದಾರೆ. ಏಕೆಂದರೆ ಅವರು ನಮ್ಮ ಬಗ್ಗೆ ಅಸಹ್ಯ ಮತ್ತು ನಾಚಿಕೆಪಡುತ್ತಿದ್ದರು. ಆದರೆ ಈಗ ಇದು ನಮ್ಮ ಕುಟುಂಬ, ನಮ್ಮ ಜನರೊಂದಿಗೆ ನಾವು ಸುರಕ್ಷಿತವಾಗಿರುತ್ತೇವೆ. ಕೆಲವು ನಕಲಿ ತೃತೀಯ ಲಿಂಗಿಗಳು ನಮ್ಮ ಹೆಸರಿಗೆ ಕಳಂಕ ತರುತ್ತಿದ್ದಾರೆಂದು ತೃತೀಯ ಲಿಂಗಿ ಕಾಜೋಲ್ ಕಳವಳ ವ್ಯಕ್ತಪಡಿಸಿದರು.

ನೀವು ಅವರನ್ನು ಅಂಗಡಿಗಳಲ್ಲಿ, ರೈಲುಗಳಲ್ಲಿ ಮತ್ತು ಬೀದಿಗಳಲ್ಲಿ ನೋಡಬಹುದು. ಆದರೆ, ನಮ್ಮಲ್ಲಿ ಹೆಚ್ಚಿನವರು ಈ ರೀತಿಯಲ್ಲ. ಅವರ ಹೊಟ್ಟೆ ಪಾಡನ್ನು ಗೌರವದಿಂದ ಸಂಪಾದಿಸುತ್ತಾರೆ ಎಂದರು.

ಅದಕ್ಕಾಗಿಯೇ ನಮ್ಮಂತಹ ಜನರಿಗೆ ಆಶ್ರಯ ನೀಡಲು ನಾವು ಈ ಸುಂದರ ಮನೆ ನಿರ್ಮಿಸಿದ್ದೇವೆ. ಇಲ್ಲಿ ನಾವು ಒಟ್ಟಿಗೆ ವಾಸಿಸುತ್ತೇವೆ. ಜಾತಿ ಧರ್ಮದ ಲವಲೇಷವೂ ನಮ್ಮಲ್ಲಿಲ್ಲ. ನಮ್ಮ ಯೋಗಕ್ಷೇಮವನ್ನು ನಾವೇ ಪರಸ್ಪರ ನೋಡಿಕೊಳ್ಳುತ್ತೇವೆ. ಈಗ ನಮ್ಮಂತಹ ತೃತೀಯ ಲಿಂಗದ ಜನರು ಸರ್ಕಾರಿ ಸೇವೆಗಳು ಮತ್ತು ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಇದ್ದಾರೆ. ನಮ್ಮಲ್ಲಿ ಹೆಚ್ಚಿನವರು ವಿಶೇಷವಾಗಿ ಹೊಸ ಪೀಳಿಗೆಯವರು ಶಿಕ್ಷಣವನ್ನು ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಕಾಜೋಲ್ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.