ETV Bharat / bharat

ಆಕ್ಸಿಜನ್‌ ಸಿಲಿಂಡರ್‌ ಸಹಾಯದಿಂದ ಪರೀಕ್ಷೆ ಬರೆದಿದ್ದ ಯುಪಿ ವಿದ್ಯಾರ್ಥಿನಿಯರು ಫಸ್ಟ್​ ಕ್ಲಾಸ್​​ನಲ್ಲಿ ಪಾಸ್​​‌! - ಆಕ್ಸಿಜನ್‌ ಸಿಲಿಂಡರ್‌ ಹಾಕಿ ಪರೀಕ್ಷೆ

ಸಾವು-ಬದುಕಿನ ನಡುವೆ ಹೋರಾಟ ನಡೆಸಿರುವ ಇಬ್ಬರು ವಿದ್ಯಾರ್ಥಿನಿಯರು ಆಕ್ಸಿಜನ್​ ಸಿಲಿಂಡರ್​ ಹಾಕಿಕೊಂಡು ಈ ಹಿಂದೆ ಯುಪಿ ಬೋರ್ಡ್​ ಪರೀಕ್ಷೆ ಎದುರಿಸಿದ್ದರು. ಇದೀಗ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆಗಿದ್ದಾರೆ.

Sonam
Sonam
author img

By

Published : Jun 29, 2020, 3:47 PM IST

Updated : Jun 29, 2020, 3:55 PM IST

ಬರೇಲಿ(ಉತ್ತರಪ್ರದೇಶ): ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯರಿಬ್ಬರು ಆಕ್ಸಿಜನ್​ ಸಿಲಿಂಡರ್​ ಹಾಕಿಕೊಂಡು ಯುಪಿ ಬೋರ್ಡ್​​​ ಪರೀಕ್ಷೆ ಬರೆದಿದ್ದು, ಇದೀಗ ಫಸ್ಟ್​ ಕ್ಲಾಸ್​ನಲ್ಲಿ ಪಾಸ್‌ ಆಗಿದ್ದಾರೆ.

ಸಾಫಿಯಾ ಜಾವೇದ್​(17) ಹಾಗೂ ಸೋನಂ(17) ತಾವು ಬರೆದಿರುವ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಫಿಯಾ ಕಳೆದ ಐದು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ರಾಜ್ಯದಲ್ಲಿ ನಡೆದ 10ನೇ ತರಗತಿ ಪರೀಕ್ಷೆಯನ್ನ ಆಮ್ಲಜನಕದ ಸಿಲಿಂಡರ್​ ಧರಿಸಿಯೇ ಎದುರಿಸಿದ್ದರು. ಈ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫಿಯಾ ತಂದೆ ರಜೆ ತೆಗೆದುಕೊಂಡು ಮಗಳು ಪರೀಕ್ಷೆಗೆ ಹಾಜರಾಗುವಂತೆ ಸಹಾಯ ಮಾಡಿದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಾಫಿಯಾ ಜಾವೇದ್ ಆಕ್ಸಿಜನ್​​ ಸಿಲಿಂಡರ್​ನೊಂದಿಗೆ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಳು. ಕಳೆದ ಶನಿವಾರ ಫಲಿತಾಂಶ ಹೊರ ಬಿದ್ದಿದ್ದು, ಶೇ. 69ರಷ್ಟು ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಪಾಸ್​ ಆಗಿದ್ದಾಳೆ.

Safia Javed
ಸಾಫಿಯಾ ಜಾವೇದ್​ ಪಡೆದ ಅಂಕ

ಅದೇ ರೀತಿ 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸೋನಂ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಆಕ್ಸಿಜನ್​ ಸಿಲಿಂಡರ್​ ಸಹಾಯದಿಂದ ಪರೀಕ್ಷೆ ಬರೆದಿದ್ದಳು. ಇದೀಗ ಶೇ. 78ರಷ್ಟು ಅಂಕ ಪಡೆದುಕೊಂಡಿದ್ದಾಳೆ. 2012ರಿಂದಲೂ ಬ್ರೈನ್​​ ಟ್ಯೂಮರ್​ನಿಂದ ಬಳಲುತ್ತಿದ್ದು, ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ನಾನು ಮಾಡಿರುವ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

Last Updated : Jun 29, 2020, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.