ETV Bharat / bharat

ಕಾರ್ಗಿಲ್ ಕದನದ ಪರಮವೀರ ಚಕ್ರ ಕಲಿಗಳಿವರು...

ಮಶ್ಕೋ ವ್ಯಾಲಿಯ ಪಾಯಿಂಟ್​ 4875 ವಶಪಡಿಸಿಕೊಳ್ಳುವಲ್ಲಿ ರೈಫಲ್ ಮ್ಯಾನ್ ಸಂಜಯ ಕುಮಾರ ಅವರ ಪಾತ್ರ ಬಹು ಪ್ರಮುಖವಾಗಿತ್ತು. ಜುಲೈ 4, 1999 ರಂದು ಮಶ್ಕೋ ವ್ಯಾಲಿ ವಶಪಡಿಸಿಕೊಳ್ಳಲು ನಡೆದ ಹೋರಾಟದ ನಾಯಕತ್ವ ವಹಿಸಿದ್ದರು. ಆದರೆ ಶತ್ರು ಪಾಳಯದಿಂದ ಒಂದೇ ಸಮನೆ ತೂರಿ ಬರುತ್ತಿದ್ದ ಗುಂಡುಗಳು ಮುಂದೆ ಸಾಗಲು ಅಡ್ಡಿಯಾಗಿದ್ದವು. ಈ ಸಮಯದಲ್ಲಿ ತನ್ನ ಜೀವದ ಸುರಕ್ಷತೆಯನ್ನೂ ಲೆಕ್ಕಿಸದೇ ಸಂಜಯ ಕುಮಾರ ರೈಫಲ್ ಹಿಡಿದು ಗುಂಡಿನ ಸುರಿಮಳೆಗೈಯುತ್ತ ಶತ್ರುವಿನ ಮೇಲೆ ಮುಗಿಬಿದ್ದರು.

THE PARAMVEERS OF KARGIL WAR
THE PARAMVEERS OF KARGIL WAR
author img

By

Published : Jul 26, 2020, 1:57 PM IST

ಕಾರ್ಗಿಲ್ ಕದನದಲ್ಲಿ ನಮ್ಮ ಯುವ ಯೋಧರು ಹಾಗೂ ಅಧಿಕಾರಿಗಳು ತೋರಿದ ಶೌರ್ಯ ಹಾಗೂ ಸಾಹಗಳಿಂದಾಗಿಯೇ ನಾವು ಪಾಕಿಸ್ತಾನವನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಆದರೆ ಈ ಭೀಕರ ಸಂಘರ್ಷದಲ್ಲಿ ದೇಶದ ಅದೆಷ್ಟೋ ಸುಪುತ್ರರು ವೀರಗತಿಯನ್ನಪ್ಪಿದರು.

ಕಾರ್ಗಿಲ್ ಯುದ್ಧದ ರಣರಂಗದಲ್ಲಿ ಅಪ್ರತಿಮ ಶೌರ್ಯ ತೋರಿದ ನಾಲ್ವರು ಯುವ ಯೋಧರು, ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು ಸೈನಿಕರಿಗೆ ಭಾರತದ ಪರಮೋಚ್ಛ ಯುದ್ಧ ಸನ್ಮಾನವಾದ ಪರಮವೀರ್ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪರಮವೀರ ಚಕ್ರ ಪಡೆದ ಪ್ರಮುಖ ಕಾರ್ಗಿಲ್ ಯೋಧರ ಮಾಹಿತಿ ಇಲ್ಲಿದೆ.

ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್

ಟೈಗರ್ ಹಿಲ್ ವಶಪಡಿಸಿಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಯೋಗೇಂದ್ರ ಸಿಂಗ್ ಯಾದವ್. ಘಾತಕ್ ಕಮಾಂಡೊ ಪ್ಲಟೂನ್​ ಮುನ್ನಡೆಸುತ್ತಿದ್ದ ಯಾದವ್​ ಅವರಿಗೆ ಟೈಗರ್​ ಹಿಲ್ ವಶಪಡಿಸಿಕೊಳ್ಳುವಂತೆ 1999ರ ಜುಲೈ 3/4 ಮಧ್ಯೆ ಸೂಚಿಸಲಾಗಿತ್ತು. 16500 ಮೀ ಎತ್ತರದ ನೇರವಾದ ಕಲ್ಲು ಬಂಡೆಗಳಿಂದಾವೃತ ಟೈಗರ್ ಹಿಲ್ ಹತ್ತುವುದು ಸುಲಭದ ಮಾತಾಗಿರಲಿಲ್ಲ. ಆದರೆ ಗುಡ್ಡ ಹತ್ತುವ ಸಾಹಸಕ್ಕೆ ಕೈಹಾಕಿದ ಯಾದವ್ ಪ್ರತಿಬಾರಿಯೂ ತಾವೇ ಮುಂಚೂಣಿಯಲ್ಲಿ ಗುಡ್ಡ ಹತ್ತಿ ಇತರರನ್ನು ಹಗ್ಗದ ಮೂಲಕ ಮೇಲಕ್ಕೆ ಕರೆದುಕೊಂಡರು.

ಘಾತಕ್ ಪ್ಲಟೂನ್ ಯೋಧರನ್ನು ನೋಡುತ್ತಲೇ ಗಾಬರಿಗೊಳಗಾದ ಪಾಕ್ ಸೈನಿಕರು ಮಶೀನ್​ ಗನ್​ಗಳಿಂದ ಗುಂಡುಗಳ ಸುರಿಮಳೆಗೈಯಲಾರಂಭಿಸಿ, ಗ್ರೆನೇಡ್​ಗಳನ್ನು ಎಸೆದರು. ಈ ದಾಳಿಯಲ್ಲಿ ಯಾದವ್​ ಅವರ ತಂಡದ ಕಮಾಂಡರ್ ಒಬ್ಬರು ಹಾಗೂ ಇನ್ನಿಬ್ಬರು ಸೈನಿಕರು ಹುತಾತ್ಮರಾದರು. ಈ ಹಂತದಲ್ಲಿ ಶತ್ರುವಿನ ನೆಲೆಯತ್ತ ಮುನ್ನುಗ್ಗುವುದು ಕಷ್ಟಕರವಾಗಿತ್ತು. ಆದರೂ ಶತ್ರುಗಳ ಶಿಬಿರದತ್ತ ತೆವಳಿಕೊಂಡು ಸಾಗಿದ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಕೆಲ ಗುಂಡುಗಳು ತಾಕಿದವು. ಗಾಯಾಳು ಸ್ಥಿತಿಯಲ್ಲೇ ಶತ್ರುವಿನ ಸ್ಥಳ ಮುಟ್ಟಿದ ಯಾದವ್, ಅವರ ಮೇಲೆ ಸತತವಾಗಿ ಗ್ರೆನೇಡ್ ದಾಳಿ ನಡೆಸಿದರು. ಈ ಸಮಯದಲ್ಲಿ ನಾಲ್ವರು ಪಾಕ್ ಸೈನಿಕರನ್ನು ಸಾಯಿಸಿದ ಯಾದವ್ ಅಟೊಮ್ಯಾಟಿಕ್​ ಗನ್​​ ಅನ್ನು ಧ್ವಂಸಗೊಳಿಸಿದರು.

ಇಲ್ಲಿಂದ ಮುಂದಕ್ಕೆ ಸಾಗಿದ ಯಾದವ್​ ಪಾಕಿಗಳ ಮತ್ತೊಂದು ನೆಲೆಯನ್ನು ಸಹ ಧ್ವಂಸಗೊಳಿಸಿದರು. ಇವರ ಸಾಹಸದಿಂದ ಪ್ರೇರಿತರಾದ ಇತರ ಯೋಧರು ಶತ್ರುವಿನ ಮೇಲೆ ಮುಗಿಬಿದ್ದು, ಅಲ್ಲಿದ್ದ ಎಲ್ಲ ಪಾಕ್ ಸೈನಿಕರನ್ನು ಹತಗೊಳಿಸಿದರು. ಹೀಗೆ ಟೈಗರ್​ ಹಿಲ್ ಭಾರತದ ಕೈವಶವಾಗಿತ್ತು.

ರೈಫಲ್ ಮ್ಯಾನ್ ಸಂಜಯ ಕುಮಾರ

ಮಶ್ಕೋ ವ್ಯಾಲಿಯ ಪಾಯಿಂಟ್​ 4875 ವಶಪಡಿಸಿಕೊಳ್ಳುವಲ್ಲಿ ರೈಫಲ್ ಮ್ಯಾನ್ ಸಂಜಯ ಕುಮಾರ ಅವರ ಪಾತ್ರ ಬಹು ಪ್ರಮುಖವಾಗಿತ್ತು. ಜುಲೈ 4, 1999 ರಂದು ಮಶ್ಕೋ ವ್ಯಾಲಿ ವಶಪಡಿಸಿಕೊಳ್ಳಲು ನಡೆದ ಹೋರಾಟದ ನಾಯಕತ್ವ ವಹಿಸಿದ್ದರು. ಆದರೆ ಶತ್ರು ಪಾಳಯದಿಂದ ಒಂದೇ ಸಮನೆ ತೂರಿ ಬರುತ್ತಿದ್ದ ಗುಂಡುಗಳು ಮುಂದೆ ಸಾಗಲು ಅಡ್ಡಿಯಾಗಿದ್ದವು. ಈ ಸಮಯದಲ್ಲಿ ತನ್ನ ಜೀವದ ಸುರಕ್ಷತೆಯನ್ನೂ ಲೆಕ್ಕಿಸದೇ ಸಂಜಯ ಕುಮಾರ ರೈಫಲ್ ಹಿಡಿದು ಗುಂಡಿನ ಸುರಿಮಳೆಗೈಯುತ್ತ ಶತ್ರುವಿನ ಮೇಲೆ ಮುಗಿಬಿದ್ದರು. ಎದುರಾಬದುರು ನಡೆದ ಹೋರಾಟದಲ್ಲಿ ಮೂವರು ಪಾಕಿಗಳನ್ನು ಕೊಂದ ಸಂಜಯ ಕುಮಾರ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಶತ್ರುಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲು ರೈಫಲ್ ಮ್ಯಾನ್ ಸಂಜಯಕುಮಾರ ಯಶಸ್ವಿಯಾಗಿದ್ದರು.

ಕ್ಯಾಪ್ಟನ್ ವಿಕ್ರಮ್ ಬಾತ್ರಾ

1999 ರ ಜುಲೈ 7 ರಂದು, ಪಾಯಿಂಟ್​ 4875 ಉತ್ತರ ಭಾಗದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ನಡೆದ ಹೋರಾಟದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ನಾಯಕತ್ವ ವಹಿಸಿದ್ದರು. ಶತ್ರು ಕಣ್ಣಿಗೆ ಕಾಣುವಷ್ಟು ಹತ್ತಿರ ಹೋಗಿದ್ದ ಬಾತ್ರಾ ನೇರಾನೇರ ಸಂಘರ್ಷ ನಡೆಸಿದ್ದರು. ಈ ಹಂತದಲ್ಲಿ ಮೈಯೆಲ್ಲ ಗಂಭೀರ ಗಾಯಗಳಾದರೂ ಒಂದಿನಿತೂ ಅಳುಕದ ವಿಕ್ರಮ್, ಹೋರಾಟವನ್ನು ಮುಂದುವರೆಸಿದರು. ಬಹುತೇಕ ಅಸಾಧ್ಯವೆಂದೇ ಹೇಳಲಾಗಿದ್ದ ಕಾರ್ಯವನ್ನು ಬಾತ್ರಾ ಮಾಡಿ ತೋರಿಸಿದ್ದರು.

ಜೂನ್ 20, 1999 ರಂದು ದ್ರಾಸ್​ ಸೆಕ್ಟರ್​ನಲ್ಲಿ ನಡೆದ ಮತ್ತೊಂದು ಹೋರಾಟದಲ್ಲಿಯೂ ಬಾತ್ರಾ ಅಪ್ರತಿಮ ಶೌರ್ಯ ಮೆರೆದಿದ್ದರು. ಪಾಯಿಂಟ್​ 5140 ವಶಪಡಿಸಿಕೊಳ್ಳುವಲ್ಲಿ ಇವರು ತೋರಿದ ಅಪ್ರತಿಮ ಶೌರ್ಯದ ಕಾರಣದಿಂದ ಇವರಿಗೆ ಕ್ಯಾಪ್ಟನ್​ ರ್ಯಾಂಕ್ ಬಡ್ತಿ ನೀಡಲಾಗಿತ್ತು.

ಲೆಫ್ಟಿನೆಂಟ್ ಮನೋಜ ಕುಮಾರ ಪಾಂಡೆ

ಗೋರ್ಖಾ ರೈಫಲ್ಸ್​​ ರೆಜಿಮೆಂಟಿನ ಶೂರ ಯೋಧ ಲೆಫ್ಟಿನೆಂಟ್​ ಮನೋಜ ಕುಮಾರ ಪಾಂಡೆ. ಖಾಲುಬಾರ್ ಪ್ರದೇಶವನ್ನು ವಶಪಡಿಸಿಕೊಳ್ಳುವಲ್ಲಿ ಇವರು ತೋರಿದ ಶೌರ್ಯ, ಸಾಹಸ ಅಪ್ರತಿಮವಾಗಿದ್ದವು. 2-3, ಜುಲೈ 1999 ರಂದು ಇವರ ಪ್ಲಟೂನ್ ಅತಿ ಕಡಿದಾದ ಗುಡ್ಡವೊಂದನ್ನು ಹತ್ತಿಬಿಟ್ಟಿತ್ತು. ಆದರೆ ಶತ್ರುವಿನ ಗುಂಡಿನ ದಾಳಿಯ ಕಾರಣದಿಂದ ಮುಂದೆ ಹೋಗಲಾಗುತ್ತಿರಲಿಲ್ಲ. ಆದರೆ ಈ ಸಮಯದಲ್ಲಿ ಅದ್ಭುತ ಯುದ್ಧ ತಂತ್ರಗಾರಿಕೆಯನ್ನು ತೋರಿದ ಮನೋಜ ಕುಮಾರ ಪಾಂಡೆ, ಸೂಕ್ತವಾದ ಸ್ಥಳಗಳಲ್ಲಿ ಯೋಧರನ್ನು ನಿಯೋಜಿಸಿ ನೈಪುಣ್ಯತೆಯಿಂದ ಶತ್ರುವಿನ ಮೇಲೆ ಎಲ್ಲ ದಿಕ್ಕುಗಳಿಂದಲೂ ಮುಗಿ ಬಿದ್ದರು. ಈ ದಾಳಿಯನ್ನು ತಡೆಯಲಾಗದೆ ಶತ್ರು ಪಾಳಯ ದಿಕ್ಕಾಪಾಲಾಯಿತು. ಹೀಗೆ ಒಂದೊಂದೇ ಶಿಬಿರಗಳನ್ನು ನಾಶಪಡಿಸುತ್ತ, ಶತ್ರು ಸೈನಿಕರನ್ನು ಸಾಯಿಸುತ್ತ ಮುನ್ನುಗ್ಗಿದ ಯೋಧರು ಖಾಲುಬಾರ್ ಪ್ರದೇಶದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿತ್ತು.

ಲೆಫ್ಟಿನೆಂಟ್ ಮನೋಜ ಕುಮಾರ ಪಾಂಡೆಯವರ ಈ ಅಪ್ರತಿಮ ಶೌರ್ಯಕ್ಕಾಗಿ ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.