ನವದೆಹಲಿ: ಹಿಂದೂ ಮಹಾಸಾಗರದ ಮೇಲೆ ಸಾರ್ವಭೌಮತ್ವ ಪಡೆಯಲು ಚೀನಾ ಹವಣಿಸುತ್ತಲೇ ಇದೆ. ಈಗಾಗಲೇ ಪೆಸಿಪಿಕ್ ಮಹಾಸಾಗರದ ಮೇಲೆ ಹಿಡಿತಕ್ಕೆ ಜಪಾನ್- ವಿಯಟ್ನಾಯಂಗಳ ಜತೆ ಜಗಳಕ್ಕೆ ನಿಂತಿರುವ ಚೀನಾ, ಹಿಂದೂ ಮಹಾ ಸಾಗರದ ಮೇಲೂ ಹಿಡಿತಕ್ಕೆ ಮುಂದಾಗಿದೆ.
ಚೀನಾ ಯುದ್ಧನೌಕೆ ಹಿಂದೂ ಮಹಾಸಾಗರದ ಆಳದಲ್ಲಿ ಸಂಚರಿಸುತ್ತಿರುವ ಎಕ್ಸ್ಕ್ಲೂಸಿವ್ ಚಿತ್ರಗಳನ್ನ ಭಾರತೀಯ ನೌಕಾ ಪಡೆ ಸೆರೆ ಹಿಡಿದಿದೆ. ಚೀನಾದ ಯುದ್ಧನೌಕೆ ಕ್ಷಿಯಾನ್ ಮತ್ತು ಮಿಸೈಲ್ ಹಿಂದೂ ಮಹಾಸಾಗರದ ಭಾರತದ ಜಲ ಗಡಿಯ ತೀರಾ ಸಮೀಪದಲ್ಲಿ ಗಸ್ತು ಹಾಕುತ್ತಿರುವುದನ್ನ ಭಾರತೀಯ ಪಡೆಗಳು ಪತ್ತೆ ಹಚ್ಚಿವೆ.
ಚೀನಾದ ಈ ಅಣು ಯುದ್ಧನೌಕೆಯ ಚಿತ್ರವನ್ನ ಪಿ- 18 ಕಾವಲು ಪಡೆಯ ಏರ್ಕ್ರಾಫ್ಟ್ ಪತ್ತೆ ಹಚ್ಚಿದೆ. ಶ್ರೀಲಂಕಾದ ಜಲಗಡಿ ಪ್ರವೇಶಿಸುವ ಮುನ್ನ ಈ ಚಿತ್ರವನ್ನ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಈ ಯುದ್ಧನೌಕೆಯನ್ನ ಪತ್ತೆ ಹಚ್ಚಿದೆ.