ETV Bharat / bharat

ಇಸ್ರೇಲ್- ಯುಎಇ ಒಪ್ಪಂದ: ಭಾರತಕ್ಕೆ ಪಶ್ಚಿಮ ಏಷ್ಯಾದಲ್ಲಿ ಸಿಗಲಿದೆಯಾ ಮಹತ್ವದ ಸ್ಥಾನ? - India to have a significant presence in West Asia

ಅರಬ್ ಇಸ್ರೇಲಿ ಸಂಬಂಧಗಳಲ್ಲಿನ ಇತ್ತೀಚಿನ ಪ್ರಗತಿಯು ಇಸ್ರೇಲ್ ಮತ್ತು ಯುಎಇ ಎರಡರ ನಿಕಟ ಪಾಲುದಾರ ದೇಶವಾದ ಭಾರತಕ್ಕೆ ಪಶ್ಚಿಮ ಏಷ್ಯಾದಲ್ಲಿ ಮಹತ್ವದ ಸ್ಥಾನ ಪಡೆಯಲು ಅವಕಾಶ ಒದಗಿಸುತ್ತದೆ.

The Israel-UAE agreement
ಇಸ್ರೇಲ್- ಯುಎಇ ಒಪ್ಪಂದ
author img

By

Published : Aug 27, 2020, 8:59 AM IST

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇಸ್ರೇಲ್ ನಡುವೆ 2020 ರ ಆಗಸ್ಟ್ 13 ರಂದು ಸಹಿ ಹಾಕಿದ ಅಬ್ರಹಾಂ ಒಪ್ಪಂದವು ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು "ಸಾಮಾನ್ಯೀಕರಿಸಲು", ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಭಿನ್ನ ಪರಿಸ್ಥಿತಿಯನ್ನು ಸರಿ ಮಾಡುವ ನಿಟ್ಟಿನಲ್ಲಿ ಸಹಸ್ರಮಾನದ ಮೊದಲ ಮಹತ್ವದ ತಿರುವಾಗಿದೆ.

ಅರಬ್ ಇಸ್ರೇಲಿ ಸಂಬಂಧಗಳಲ್ಲಿನ ಇತ್ತೀಚಿನ ಪ್ರಗತಿಯು ಇಸ್ರೇಲ್ ಮತ್ತು ಯುಎಇ ಎರಡರ ನಿಕಟ ಪಾಲುದಾರ ದೇಶವಾದ ಭಾರತಕ್ಕೆ ಪಶ್ಚಿಮ ಏಷ್ಯಾದಲ್ಲಿ ಮಹತ್ವದ ಸ್ಥಾನ ಪಡೆಯಲು ಅವಕಾಶ ಒದಗಿಸುತ್ತದೆ, ಬಹುಶಃ ಏಳು ದಶಕಗಳಿಂದ ನಡೆಯುತ್ತಿರುವ ಅರಬ್-ಇಸ್ರೇಲಿ ಸಂಬಂಧಗಳ ತಿಕ್ಕಾಟಕ್ಕೆ ಶಾಂತಿಯುತ ನಿರ್ಣಯದ ಮಾರ್ಗ ಕಂಡುಕೊಳ್ಳುವ ಬಗ್ಗೆ ಪ್ರಭಾವ ಬೀರಬಹುದು.

ಯುಎಇ ಯುವರಾಜ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಆಗಿರುವ ಒಪ್ಪಂದವು ಈ ಪ್ರದೇಶದ ಸಂಘರ್ಷದ ರಾಜಕೀಯವನ್ನು ನಿಜವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವಾಗಿ ನೋಡಿದರೆ ಹೆಚ್ಚು ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಗುರುತಿಸುತ್ತವೆ, ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರಾಧಿಕಾರಗಳ ನಡುವಿನ ಮಾತುಕತೆಯ ಪ್ರಯತ್ನಗಳನ್ನು ಈ ಒಪ್ಪಂದ ಪುನಃಸ್ಥಾಪಿಸುತ್ತದೆ, ಆದರೂ, ಪ್ಯಾಲೇಸ್ಟಿನಿಯನ್ ರಾಷ್ಟ್ರದ ಸಾಧ್ಯತೆಗಳನ್ನು ದೂರವಾಗಿಸುತ್ತದೆ. ಯುಎಇಯ ಪ್ರಮುಖ ಪ್ರಾದೇಶಿಕ ಮಿತ್ರ ಸೌದಿ ಅರೇಬಿಯಾ, ಪ್ಯಾಲೆಸ್ಟೈನ್ ರಾ ವಿರಿಗಣಿಸಲಾಗಿದೆಯಾ ಎಂಬ ಬಗ್ಗೆ ಸ್ವಲ್ಪ ಅನುಮಾನವಿದೆ.

ಈ ಒಪ್ಪಂದವು ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ (ಪಿಎ) ಕುಹಕಕ್ಕೆ ಸಮನಾಗಿ ಮತ್ತು ಹೆಚ್ಚಿನದನ್ನು ಮಾಡುತ್ತದೆ, ಈಜಿಪ್ಟ್ ಮತ್ತು ಜೋರ್ಡಾನ್ ನಂತರ ಮತ್ತೊಂದು ಪ್ರಮುಖ ಅರಬ್ ರಾಷ್ಟ್ರದ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ಸಮಸ್ಯೆಯಿಂದ ಇಸ್ರೇಲ್ ಅನ್ನು ಮತ್ತಷ್ಟು ಡಿಹೈಫನೇಟ್ ಮಾಡುವುದು, ಹೀಗಾಗಿ, ಈ ಒಪ್ಪಂದಗಳಿಗೆ ದಶಕಗಳ ಹಿಂದೆಯೇ ಸಹಿ ಹಾಕಲಾಯಿತು.

2017 ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ದೇಶಕ್ಕೆ ಭೇಟಿ ನೀಡಿದಾಗ ಭಾರತವು ಆ ಡಿ-ಹೈಫನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು, ಆ ದೇಶಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ಭೇಟಿ ನೀಡಿದ್ದು ಅದೇ ಮೊದಲಿನ ಬಾರಿಯಾಗಿದ್ದು, ಆಗ ಅವರು ಪ್ಯಾಲೆಸ್ಟೈನ್ ದೇಶಕ್ಕೆ ಭೇಟಿ ನೀಡಲಿಲ್ಲ, ಹೀಗಾಗಿ, ಎರಡೂ ರಾಜ್ಯಗಳ ಬಗೆಗಿನ ಭಾರತೀಯ ನೀತಿಯನ್ನು ಸ್ಪಷ್ಟವಾಗಿ ಹೈಫನ್ ಮಾಡುವುದು ಮತ್ತು 1992 ರಲ್ಲಿ ಉಭಯ ದೇಶಗಳು ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದಾಗಿನಿಂದ ಇಸ್ರೇಲ್ ಜೊತೆಗಿನ ಸಂಬಂಧಗಳ ಭಾರತದ ಅನ್ವೇಷಣೆಯನ್ನು ನಿರೂಪಿಸುವ ಅಸ್ಪಷ್ಟತೆಯನ್ನು ತಿಳಿಸುತ್ತದೆ. ಈ ನಿಕಟ ದ್ವಿಪಕ್ಷೀಯ ಸಂಬಂಧಗಳು ಹೆಚ್ಚು ಮಹತ್ವದ್ದಾಗಿವೆ, ಇದರ ಒಳನೋಟ ಮತ್ತು ಕಾರ್ಯತಂತ್ರದಲ್ಲಿ ಪ್ಯಾಲೆಸ್ಟೀನಿಯಾದವರೊಂದಿಗೆ ಒಗ್ಗಟ್ಟಿನ ಮೂಲಕ "ಸಮತೋಲನಗೊಳಿಸುವ" ಚಿಕ್ಕ ಪ್ರಯತ್ನವೂ ಇದೆ.

ಈ ಅಬ್ರಹಾಂ ಒಪ್ಪಂದದ ಮೂಲಕ ಪಾಲಸ್ಟೈನ್‌ ದೇಶವು ತಮ್ಮ ಹಳೆಯ ಮಿತ್ರ ರಾಷ್ಟ್ರಗಳಿಂದ ಕ್ರಮೇಣ ದೂರ ಸರಿಯುವ ಅಂಚಿನಲ್ಲಿರುವುದು ಕಾಣುತ್ತದೆ.ಹೀಗಾಗಿ, ಈ ಒಪ್ಪಂದದ ಬಗ್ಗೆ ಪಯಾಲಸ್ಟೈನ್‌ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಬೇಕಾಗಿದೆ, ಆದರೆ, "ಕಳೆದ 26 ವರ್ಷಗಳಲ್ಲಿ ಇಸ್ರೇಲ್ ಮತ್ತು ಅರಬ್ ಪ್ರಪಂಚದ ನಡುವೆ ಶಾಂತಿಯನ್ನು ಪುನಃಸ್ಥಾಪಿಸುವ ದೊಡ್ಡ ಪ್ರಗತಿ" ಎಂದು ಇಸ್ರೇಲ್ ಪ್ರಧಾನ ಮಂತ್ರಿ ನೆತನ್ಯಾಹು ಹೊಗಳಿದ್ದ ಯುಎಸ್-ಬ್ರೋಕರ್ಡ್‌ ಒಪ್ಪಂದವನ್ನು ಪ್ಯಾಲಸ್ಟೈನ್‌ ಅಥಾರಿಟಿ ತಿರಸ್ಕರಿಸಿದೆ.

ಸಕಾರಾತ್ಮಕ ದೃಷ್ಟಿಯಿಂದ, ಇಸ್ರೇಲ್ ಈಗ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮತ್ತಷ್ಟು ಸ್ವಾಧೀನಪಡಿಸಿಕೊಳ್ಳುವ ಮತ್ತು ವಸಾಹತುಗಳನ್ನು ನಿರ್ಮಿಸುವ ಯೋಜನೆಯನ್ನು ಸ್ಥಗಿತಗೊಳಿಸಬೇಕಾಗಿದೆ, ಈ ಪ್ರದೇಶದಲ್ಲಿ ಪ್ಯಾಲಸ್ಟೈನ್‌ ಗಲಭೆಯಿಂದಾಗಿ ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವುದರಿಂದ ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್‌ ಈ ಪ್ರಕ್ರಿಯೆಗಳ ಸ್ಥಗಿತ ಹೆಚ್ಚಾಗಿದೆ.

ಇತ್ತೀಚೆಗೆ ರೂಪಿಸಿದ ಈ ಒಪ್ಪಂದವು ಗಲ್ಫ್ ಪ್ರದೇಶದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಲು ಭಾರತಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. ಭಾರತವು ಇಸ್ರೇಲ್‌ನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ, ಆದರೆ ಕೊಲ್ಲಿ ರಾಜಪ್ರಭುತ್ವಗಳೊಂದಿಗೆ, ವಿಶೇಷವಾಗಿ ಯುಎಇ ಮತ್ತು ಸೌದಿ ಅರೇಬಿಯಾದೊಂದಿಗೆ ಹೆಚ್ಚುತ್ತಿರುವ ಕಾರ್ಯತಂತ್ರದ ಸ್ವಭಾವವನ್ನು ಹೊಂದಿದೆ.

ಕೊಲ್ಲಿ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಶೀಘ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯತಂತ್ರದ ಭಾಗವಾಗಿ ಈ ದೇಶಗಳನ್ನು ತನ್ನ ನೆರೆಹೊರೆ ಎಂದು ಭಾರತ ಪರಿಗಣಿಸಿರುವುದು ಮೋದಿ ಸರ್ಕಾರಕ್ಕೆ ಯಶಸ್ವಿ ಕಥೆಯಾಗಿದೆ, ಈ ಬೆಳವಣಿಗೆ, ಅತ್ಯಂತ ಪ್ರಮುಖ ಭದ್ರತೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾರತಕ್ಕೆ ಅತ್ಯಧಿಕ ಲಾಭಾಂಶವನ್ನು ತಂದು ಕೊಡುತ್ತದೆ.

ಗಲ್ಫ್‌ ರಾಷ್ಟ್ರಗಳ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿರ್ದಿಷ್ಟವಾಗಿ ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತದ ಆಳವಾದ ಸಂಬಂಧಗಳನ್ನು ಪ್ರಸ್ತಾಪಿಸಿದ್ದಾರೆ ಮತ್ತು ಭಾರತದ ಇಂಧನ ಮತ್ತು ಇತರ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಅವು ನಿರ್ಣಾಯಕವಾಗಿವೆ ಎಂದು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುತ್ತಿರುವ ಸಮಯದಲ್ಲಿ ಭಾರತೀಯರು ಆ ದೇಶಗಳಲ್ಲಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್‌ನಂತಹ ದೇಶಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರತ್ಯೇಕ ಹೇಳಿಕೆಯಲ್ಲಿ, ಭಾರತವು ತನ್ನ ಇಬ್ಬರು ಕಾರ್ಯತಂತ್ರದ ಪಾಲುದಾರರ ನಡುವಿನ ಒಪ್ಪಂದವನ್ನು ನಿಸ್ಸಂದಿಗ್ಧವಾಗಿ ಸ್ವಾಗತಿಸಿತು ಮತ್ತು ಇದು ಈ ಪ್ರದೇಶದಲ್ಲಿ ಶಾಂತಿಗೆ ಕಾರಣವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಪ್ಯಾಲೇಸ್ಟಿನಿಯನ್ ಉದ್ದೇಶಕ್ಕಾಗಿ ತನ್ನ ಸಾಂಪ್ರದಾಯಿಕ ಬೆಂಬಲವನ್ನು ನವದೆಹಲಿ ಪುನರುಚ್ಚರಿಸಿತು ಮತ್ತು ಸ್ವೀಕಾರಾರ್ಹ ಎರಡು ರಾಜ್ಯ ಪರಿಹಾರಕ್ಕಾಗಿ ಆರಂಭಿಕ ನೇರ ಮಾತುಕತೆಗಳನ್ನು ನಿರೀಕ್ಷಿಸುತ್ತಿರುವುದಾಗಿ ಪ್ರಕಟಿಸಿತು.

ಈ ಪ್ರದೇಶದಲ್ಲಿ ತನ್ನ ಆರ್ಥಿಕತೆಯನ್ನು ದೊಡ್ಡ ಮಟ್ಟದಲ್ಲಿ ತೆರೆಯುವುದರ ಹೊರತಾಗಿ, ಇದು ಭಾರತದ ಆರ್ಥಿಕತೆಯ ಸ್ವಂತ ಪುನರುಜ್ಜೀವನ ಪ್ರಯತ್ನಗಳನ್ನು ಹೆಚ್ಚಿಸುತ್ತದೆ, ಕೊಲ್ಲಿ ರಾಷ್ಟ್ರಗಳೊಂದಿಗೆ ಭದ್ರತಾ ಸಂಬಂಧಗಳಿಗೆ ವೇಗ ನೀಡುತ್ತದೆ. ಶಸ್ತ್ರಾಸ್ತ್ರಗಳ ಮಾರಾಟ, ರಕ್ಷಣಾ ಕಸರತ್ತುಗಳು, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಇತರೆಡೆ ಭಯೋತ್ಪಾದನಾ-ವಿರೋಧಿ ಚಟುವಟಿಕೆಗೆ ನೆರವಾಗುತ್ತದೆ.

ಭಾರತೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. ಇಂಧನ ಸುರಕ್ಷತೆಯು ಸಹಕಾರದ ಪ್ರಮುಖ ಕ್ಷೇತ್ರವಾಗಿದೆ, ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನದವರೆಗೆ, ಆಹಾರ ಸುರಕ್ಷತೆಯು ಮತ್ತೊಂದು ಸಹಕಾರದ ಭಾಗವಾಗಿದೆ. ಭಾರತೀಯ ಮಾರುಕಟ್ಟೆಯ ಗಾತ್ರ ಮತ್ತು ಇಲ್ಲಿ ತಯಾರಿಸಿದ ಉತ್ಪನ್ನಗಳ ವೈವಿಧ್ಯತೆಯು ಕೊಲ್ಲಿ ರಾಷ್ಟ್ರಗಳಿಗೆ ಮತ್ತು ಇಸ್ರೇಲ್‌ಗೆ ಮತ್ತೊಂದು ಆಕರ್ಷಕ ಪ್ರತಿಪಾದನೆಯಾಗಿದೆ.

ಆರ್ಗನೈಜೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್‌ನಂತಹ ವೇದಿಕೆಗಳಲ್ಲಿ ಪ್ರಮುಖವಾಗಿರುವ ಯುಎಇ ಮತ್ತು ಸೌದಿ ಅರೇಬಿಯಾದಂತಹ ಅರಬ್ ರಾಷ್ಟ್ರಗಳು ಪಾಕಿಸ್ತಾನವನ್ನು ದೂರವಿಟ್ಟಿರುವ ರೀತಿ ಭಾರತಕ್ಕೆ ಮತ್ತೊಂದು ಪ್ರಮುಖ ಲಾಭವಾಗಿದೆ. ಅರಬ್ ರಾಷ್ಟ್ರಗಳು ಮತ್ತು ಇರಾನ್‌ನೊಂದಿಗಿನ ಭಾರತದ ಉತ್ತಮ ಸಂಬಂಧ ಎರಡೂ ಸಹ ಇಸ್ಲಾಮಿಕ್ ಜಗತ್ತಿನಲ್ಲಿ ಪ್ರಾಮುಖ್ಯತೆಗಾಗಿ ಸ್ಪರ್ಧಿಸುವ ಆ ದೇಶಗಳಿಗೆ ಸಹಕಾರಿಯಾಗಲು ಮತ್ತು ಕಾರ್ಯಸಾಧ್ಯವಾದ ಸಂಬಂಧವನ್ನು ತಲುಪಲು ನವದೆಹಲಿಗೆ ಅವಕಾಶ ನೀಡುತ್ತದೆ.

ಭಾರತಕ್ಕೆ, ಈ ಒಪ್ಪಂದವು ಕಠಿಣ ಸಮಯದಲ್ಲಿ ವರದಾನವಾಗಿ ಬಂದಿದ್ದು, ಭೌಗೋಳಿಕ-ಆರ್ಥಿಕ ಮತ್ತು ಭೌಗೋಳಿಕ-ಕಾರ್ಯತಂತ್ರದ ಭರವಸೆಯನ್ನು ಹೊತ್ತು ತಂದಿದೆ.
- ನಿಲೋವಾ ರಾಯ್ ಚೌಧರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.