ETV Bharat / bharat

ಸಂಕಷ್ಟದ ಕಾಲದಲ್ಲಿ ಪೊರೆಯುವ ಕೈಗಳು: ಸರಕಾರಗಳಿಗೂ ನೆರವಿನ ಹಸ್ತ ಚಾಚಿದ ಎನ್‌ಜಿಒಗಳು! - ಸರಕಾರಗಳಿಗೂ ನೆರವಿನ ಹಸ್ತ ಚಾಚಿದ ಎನ್‌ಜಿಒಗಳು,

ಸಮಾಜ ಇವತ್ತು ಎದುರಿಸುತ್ತಿರುವ ಗಂಭೀರ ವಿಪತ್ತು ನಿಭಾಯಿಸಲು ಜನರಿಗೆ ನೆರವಾಗುವ ಮಹತ್ವದ ಕೆಲಸವನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ. ಸರಕಾರೇತರ ಸಂಸ್ಥೆಗಳ ಈ ಮಹತ್ವದ ಕೊಡುಗೆಯನ್ನು ಕೊರೊನಾ ಸಾಂಕ್ರಾಮಿಕ ರೋಗ ಮತ್ತೊಮ್ಮೆ ಸಾಬೀತು ಪಡಿಸಿದೆ.

Hand that Aids in Times of Disaster,  Hand that Aids in Times of Disaster news, Times of Disaster, ನೆರವಿನ ಹಸ್ತ ಚಾಚಿದ ಎನ್‌ಜಿಒಗಳು,  ಸರಕಾರಗಳಿಗೂ ನೆರವಿನ ಹಸ್ತ ಚಾಚಿದ ಎನ್‌ಜಿಒಗಳು,  ಸರಕಾರಗಳಿಗೂ ನೆರವಿನ ಹಸ್ತ ಚಾಚಿದ ಎನ್‌ಜಿಒಗಳು ಸುದ್ದಿ,
ಸರಕಾರಗಳಿಗೂ ನೆರವಿನ ಹಸ್ತ ಚಾಚಿದ ಎನ್‌ಜಿಒಗಳು
author img

By

Published : Jun 1, 2020, 1:48 PM IST

ಇಬ್ಬರು ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್‌ನಲ್ಲಿ ಇತ್ತೀಚೆಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಗೆ ಸಂಬಂಧಿಸಿದಂತೆ ಕೊರೊನಾ ಸಂಕಷ್ಟದ ಸಮಯದಲ್ಲಿ ತಾನು ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಕುರಿತು ಕೇಂದ್ರ ಸರಕಾರ ವಿವರಣೆ ನೀಡಿದೆ. ದಿಗ್ಬಂಧನ ಸಮಯದಲ್ಲಿ ವಿವಿಧ ರಾಜ್ಯ ಸರಕಾರಗಳು ದೇಶದ ವಿವಿಧೆಡೆ ಒಟ್ಟು 578 ಜಿಲ್ಲೆಗಳಲ್ಲಿ 22,547 ಪರಿಹಾರ ಕೇಂದ್ರಗಳನ್ನು ತೆರೆದಿವೆ. ಈ ಪೈಕಿ 4,000 ಕೇಂದ್ರಗಳನ್ನು ದತ್ತಿ ಸಂಸ್ಥೆಗಳು ನಿರ್ವಹಿಸುತ್ತಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಸರಕಾರ ಹೇಳಿದೆ.

ಅಂದರೆ, ದಿಗ್ಬಂಧನದ ಸಮಯದಲ್ಲಿ ಒಂದು ವೇಳೆ ಸರಕಾರ 54 ಲಕ್ಷ ವಲಸೆ ಕಾರ್ಮಿಕರಿಗೆ ಆಹಾರ ನೀಡಿದ್ದರೆ, ಅಂದಾಜು 30 ಲಕ್ಷ ವಲಸಿಗರ ಆಹಾರ ವ್ಯವಸ್ಥೆಯನ್ನು ದತ್ತಿ ಸಂಸ್ಥೆಗಳು ಮಾಡಿವೆ. ಈ ರೀತಿ ಲಕ್ಷಾಂತರ ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದಿದೆ ವರದಿ. ದೇಶಾದ್ಯಂತ 13 ರಾಜ್ಯಗಳಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಮಹತ್ವದ ಕೆಲಸವನ್ನು ಈ ದತ್ತಿ ಸಂಸ್ಥೆಗಳು ಸಕ್ರಿಯವಾಗಿ ಮಾಡುತ್ತಿದ್ದು, ಗುಜರಾತ್‌, ಮಿಜೋರಾಂ, ಕೇರಳ ಮತ್ತು ತೆಲುಗು ರಾಜ್ಯಗಳಲ್ಲಿ ಈ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿವೆ ಎಂದು ವರದಿ ಹೇಳಿದೆ. ಚಂಡಮಾರುತ, ಭೂಕಂಪ, ಬರ, ಸುನಾಮಿ, ಪ್ರವಾಹ, ಬೆಂಕಿ ಆಕಸ್ಮಿಕ ಮತ್ತು ಸಾಂಕ್ರಾಮಿಕ ರೋಗಗಳಂತಹ ನೈಸರ್ಗಿಕ ಪ್ರಕೋಪಗಳನ್ನು ದೇಶ ಎದುರಿಸಿದ ಸಂದರ್ಭದಲ್ಲಿ ಬಾಧಿತ ಜನರಿಗೆ ನೆರವಾಗುವಲ್ಲಿ ಸರಕಾರದ ಜೊತೆ ಕೈ ಜೋಡಿಸಿರುವ ಈ ದತ್ತಿ ಹಾಗೂ ಸರಕಾರೇತರ ಸೇವಾ ಸಂಸ್ಥೆಗಳು ಮಹತ್ವದ ಪಾತ್ರವನ್ನು ನಿರ್ವಹಿಸಿವೆ ಎಂಬುದು ಇಲ್ಲಿ ಗಮನಾರ್ಹ.

ಸೇವೆಗೆ ಪೂರಕವಾದ ಉದ್ಯೋಗ

‌ನವದೆಹಲಿಯಲ್ಲಿರುವ ಕೇಂದ್ರ ಸಾಂಖ್ಯಿಕ ಕಚೇರಿಯ (ಸಿಎಸ್‌ಒ – ಸೆಂಟ್ರಲ್‌ ಸ್ಟ್ಯಾಟಿಸ್ಟಿಕ್ಸ್‌ ಆಫೀಸ್) ಪ್ರಕಾರ ದೇಶದಲ್ಲಿ ಅಂದಾಜು 30 ಲಕ್ಷ ಸರಕಾರೇತರ ಸಂಸ್ಥೆಗಳಿವೆ. ನಗರ ಪ್ರದೇಶದಲ್ಲಿ ಪ್ರತಿ ಸಾವಿರ ಜನರಿಗೆ ನಾಲ್ಕು ಸರಕಾರೇತರ ಸೇವಾ ಸಂಸ್ಥೆಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಸಂಖ್ಯೆ ಎರಡು. ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ಹೊಂದಿರುವ ಸರಕಾರೇತರ ಸಂಸ್ಥೆಗಳು ವೈವಿಧ್ಯಮಯ ಸೇವೆಗಳನ್ನು ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿವೆ. ಬದಲಾದ ಕಾಲಕ್ಕೆ ತಕ್ಕಂತೆ ಅನುಸರಿಸಬೇಕಾದ ಕ್ರಮಗಳು ಹಾಗೂ ಅಳವಡಿಸಿಕೊಳ್ಳಬಹುದಾದ ವಿಧಾನಗಳನ್ನು ಜಾರಿಗೊಳಿಸಬೇಕಾದ ಅವಶ್ಯಕತೆ ಕುರಿತು ಈ ಸರಕಾರೇತರ ಸಂಸ್ಥೆಗಳು ಸರಕಾರಗಳಿಗೆ ಸಲಹೆಗಳನ್ನು ನೀಡುತ್ತವೆ.

ಪ್ರಶ್ನಿಸುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು, ಶಾಸನಸಭೆಗಳಿಗೆ ಮಾಹಿತಿಯನ್ನು ಒದಗಿಸುವುದು ಹಾಗೂ ಆಡಳಿತದಲ್ಲಿಯ ದೋಷಗಳನ್ನು ಎತ್ತಿ ತೋರಿಸುವುದು ಈ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯ ಗುರಿ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತೊಡೆದು ಹಾಕುವ “ವಿಶಾಖ ಮಾರ್ಗದರ್ಶಿ ಸೂತ್ರಗಳು”, ಪರಿಸರ ಮತ್ತು ಜೀವಿ ಪರಿಸರದ ರಕ್ಷಣೆಗೆ “ಸಮತಾ ನ್ಯಾಯನಿರ್ಣಯ”, ತೃತೀಯ ಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿರುವ ಭಾರತೀಯ ದಂಡ ಸಂಹಿತೆಯ 377ನೇ ವಿಧಿಯನ್ನು ರದ್ದುಪಡಿಸುವುದು, ಮಾಹಿತಿ ಹಕ್ಕು ಕಾಯಿದೆ ಮತ್ತು ಲೋಕಪಾಲ ಮಸೂದೆ ಮಂಡನೆ ಈ ಸ್ವಯಂ ಸೇವಾ ಸಂಸ್ಥೆಗಳ ಕೆಲವು ಉಲ್ಲೇಖಾರ್ಹ ಸೇವೆಗಳು. ಈ ಪ್ರಕ್ರಿಯೆಯಲ್ಲಿ ಹಲವಾರು ನಾಗರಿಕರಿಗೆ ಉದ್ಯೋಗ ನೀಡುವುದರ ಜೊತೆಜೊತೆಗೆ ಸಾಮಾಜಿಕ ಅಭಿವೃದ್ಧಿಯಲ್ಲಿ ಈ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಕೊಂಡಿರುವುದನ್ನು ನಾವು ಗಮನಿಸಬೇಕು.

1990ರ ದಶಕದಲ್ಲಿ ಆರ್ಥಿಕ ಉದಾರೀಕರಣದ ಅವಶ್ಯಕತೆಗೆ ಅನುಸಾರವಾಗಿ ಖಾಸಗೀಕರಣದತ್ತ ಸಂಪೂರ್ಣ ಗಮನ ಹರಿಸಿದ್ದರಿಂದ ಜನರ ಯೋಗಕ್ಷೇಮ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಭಿವೃದ್ಧಿ ಸಾಕಾರವಾಗುವುದು ಕೇವಲ ನಾಗರಿಕರ ಸಾಮಾಜಿಕ ಸಹಭಾಗಿತ್ವದಿಂದ ಮಾತ್ರ ಸಾಧ್ಯ ಎಂಬ ಪರಿಕಲ್ಪನೆಗೆ ಒತ್ತು ನೀಡಲಾಯಿತು. ದೇಶದೊಳಗೆ ವಿದೇಶಿ ಹೂಡಿಕೆಗೆ ಆಹ್ವಾನ ನೀಡಿದ್ದೇ ದತ್ತಿ ಸಂಸ್ಥೆಗಳು ಉದ್ಭವವಾಗಲು ಕಾರಣ ಎನ್ನಲಾಗುತ್ತಿದೆ.

ರಾಷ್ಟ್ರದ ಪ್ರಗತಿಯಲ್ಲಿ ಸರಕಾರೇತರ ಸಂಸ್ಥೆಗಳ ಪಾತ್ರದ ಅವಶ್ಯಕತೆಯನ್ನು ಗುರುತಿಸಿದ ಸರಕಾರ, 2007ರಲ್ಲಿ ಇದಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ಅಂಗೀಕರಿಸಿತು. ಈ ಉದ್ದೇಶ ಸಾಧನೆಗಾಗಿ ಗುರುತಿಸಲಾದ ಮಹತ್ವದ ಬೆಳವಣಿಗೆ ಎಂದರೆ ಸರಕಾರ ಮತ್ತು ಖಾಸಗಿ ಸಹಭಾಗಿತ್ವದ ಪರಿಕಲ್ಪನೆ. ಕಂಪನಿ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌ - ಕಂಪನಿ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ) ಮೂಲಕ ಗ್ರಾಮೀಣ ಅಭಿವೃದ್ಧಿಯ ಕೆಲಸಗಳನ್ನು ಕಂಪನಿಗಳು ಕೈಗೆತ್ತಿಕೊಳ್ಳಬೇಕು ಎಂದು 2013ರ ಕಂಪನಿ ಕಾಯಿದೆ ವಿಧಿಸುತ್ತದೆ. ಇದರ ಜೊತೆಗೆ ಸರಕಾರೇತರ ಸಂಸ್ಥೆಗಳೊಂದಿಗೆ ಪಾಲುದಾರರಾಗಲು ಸರಕಾರಗಳು ಮುಂದಾಗಿದ್ದು, ವಿಕಾಸಪಥಕ್ಕೆ ವೇದಿಕೆಯಾಯಿತು.

ಸುಸ್ಥಿರ ಅಭಿವೃದ್ಧಿಯಲ್ಲಿ ಪಾಲುದಾರಿಕೆ...

ಸರಕಾರ ಎಷ್ಟೇ ಉಪಕ್ರಮಗಳನ್ನು ಕೈಗೊಳ್ಳಲಿ, ಅಭಿವೃದ್ಧಿಯ ಫಲವನ್ನು ಪಡೆದುಕೊಳ್ಳುವಲ್ಲಿ, ಕೆಲವು ಸಮುದಾಯಗಳು ಸದಾ ದೂರವೇ ಉಳಿಯುತ್ತವೆ. ಗಿರಿಜನರು ಮತ್ತು ದಲಿತರು ಕನಿಷ್ಠ ಹಕ್ಕುಗಳು ಕೂಡಾ ಇಲ್ಲದೇ ಕಷ್ಟಪಡುತ್ತಾರೆ. ಹಳ್ಳಿಗಳು ಮತ್ತು ನಗರದ ಕೊಳೆಗೇರಿಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಗಳು ಕಾಣಿಸುವುದು ಅಪರೂಪ. ದೊಡ್ಡ ಪ್ರಮಾಣದ ಜನಸಂಖ್ಯೆ ಹಾಗೂ ಅಷ್ಟೇ ದೊಡ್ಡ ವ್ಯಾಪ್ತಿಯ ಸಮಸ್ಯೆಗಳನ್ನು ಹೊಂದಿರುವ ದೇಶದಲ್ಲಿ, ಸಾರ್ವಜನಿಕ ಸಹಭಾಗಿತ್ವವಿಲ್ಲದೇ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ವಿಶಾಲ ಸಾಮಾಜಿಕ ದೃಷ್ಟಿಕೋನವನ್ನು ಹೊಂದಬೇಕಾದ ಅವಶ್ಯಕತೆಯಿದೆ. ಏನೇ ಸಂದರ್ಭ ಇರಲಿ, ಕಲ್ಯಾಣದ ಬದ್ಧತೆಯನ್ನು ಹೊಂದಿರುವ ಸರಕಾರೇತರ ಸಂಸ್ಥೆಗಳನ್ನು ಸರಕಾರ ಪೋಷಿಸಬೇಕಾಗುತ್ತದೆ. ಇಂತಹ ಸರಕಾರೇತರ ಸಂಸ್ಥೆಗಳಿಗೆ ಸೇರಿರುವ ಸ್ವಯಂ ಸೇವಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ವಿವಿಧ ವಿಷಯಗಳು ಪ್ರಗತಿ ಹೊಂದಲು ಸಾಧ್ಯ.

ಆದರೆ, ಅನುದಾನದ ಕೊರತೆಯು ಸರಕಾರೇತರ ಸಂಸ್ಥೆಗಳನ್ನು ಕಾಡುವ ಪ್ರಮುಖ ಸಮಸ್ಯೆಯಾಗಿದೆ. ಕೆಲವು ಪ್ರಕರಣಗಳಲ್ಲಿ, ನಾನಾ ಕಾರಣಗಳಿಗಾಗಿ ಅನುದಾನದ ದುರ್ಬಳಕೆಯೂ ಇಂತಹ ಸಂಸ್ಥೆಗಳಲ್ಲಿ ಆಗುವುದುಂಟು. ಈ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಪ್ರಯತ್ನಿಸಬೇಕಾದ ಅವಶ್ಯಕತೆಯಿದೆ. ಇಂತಹ ಸ್ವಯಂ ಸೇವಾ ಸಂಸ್ಥೆಗಳಿಗೆ ಸರಕಾರ ಕಿರುಕುಳ ನೀಡಬಾರದು ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಸಲಹೆಯನ್ನು ಯಾವುದೇ ಸಮಜಾಯಿಷಿ ನೀಡದೇ ನಮ್ಮ ಸರಕಾರಗಳು ಅನ್ವಯಿಸಿಕೊಳ್ಳಬೇಕಿದೆ.

ಕೊರೊನಾದ ಇತ್ತೀಚಿನ ವಿಸ್ಫೋಟನೆಯ ನಂತರ, ಕೋವಿಡ್-‌19ನ್ನು ನಿಯಂತ್ರಿಸುವಲ್ಲಿ ಸರಕಾರಿ ಯಂತ್ರದೊಂದಿಗೆ ಸರಕಾರೇತರ ಸಂಸ್ಥೆಗಳ ಶಕ್ತಿಯು ಸಮಾನವಾಗಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ. ಅಷ್ಟೇ ಅಲ್ಲ, ಸಮಸ್ಯೆಗಳ ಪರಿಹಾರಕ ಹಾಗೂ ನಿತ್ಯದ ಚಟುವಟಿಕೆಗಳನ್ನು ನಿಭಾಯಿಸುವಲ್ಲಿ ನಾಗರಿಕರಿಗೆ ಅವು ನೆರವಾಗಬಲ್ಲವು ಎಂಬುದೂ ಮತ್ತೆ ಸಾಬೀತಾಗಿದೆ. ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿದಾಗ ಹಾಗೂ ರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಾತ್ರ ಸಮಾಜ ಬಲಶಾಲಿಯಾಗಬಲ್ಲುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.