ETV Bharat / bharat

ವಿಶೇಷ ಅಂಕಣ: ದೇಶದಲ್ಲಿ ಸೈಬರ್​ ಕ್ರೈಮ್​​​ನಿಂದ ಹೆಚ್ಚುತಿದೆ ಭೀತಿ! - National Cyber Crime Reporting Portal

ರಾಷ್ಟ್ರದ ಹಣಕಾಸು ಮತ್ತು ರಕ್ಷಣಾ ಜಾಲಗಳನ್ನು ರಕ್ಷಿಸಲು 2020 ರ ವೇಳೆಗೆ 10 ಲಕ್ಷ ಸೈಬರ್‌ ಸೆಕ್ಯುರಿಟಿ ವೃತ್ತಿಪರರು ಬೇಕಾಗುತ್ತಾರೆ ಎಂದು ಸಾಫ್ಟ್‌ವೇರ್ ಮತ್ತು ಸೇವೆಗಳ ಕಂಪನಿಗಳ ರಾಷ್ಟ್ರೀಯ ಸಂಘ (ನಾಸ್ಕಾಮ್) ಊಹಿಸಿದೆ.

cyber-crimes-
cyber-crimes-
author img

By

Published : Jan 29, 2020, 6:25 PM IST

ಸೈಬರ್-ಭಯೋತ್ಪಾದನೆ: ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆ ಮಾರ್ಗಗಳು ಹೆಚ್ಚುತ್ತಿರುವುದು ಸುಳ್ಳಲ್ಲ. ಪ್ರಪಂಚದಾದ್ಯಂತದ ಹಲವು ರಾಷ್ಟ್ರಗಳು ಸುಪ್ತವಾಗಿ ಅಡಗಿ ಕುಳಿತ ಶತ್ರುಗಳಿಂದ ದೀರ್ಘಕಾಲಿಕ ಬೆದರಿಕೆಗಳನ್ನು ಎದುರಿಸುತ್ತಿವೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮತ್ತು ಡಿಜಿಟಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಭಾರತದಲ್ಲಿಯೂ ಗಂಭೀರ ಅಪರಾಧಗಳನ್ನು ಎಸೆಗುತ್ತಿದ್ದಾರೆ. ಈ ಸೈಬರ್ ದಾಳಿಯಿಂದ ದೊಡ್ಡ ಪ್ರಮಾಣದ ಹಣವನ್ನು ಕಳೆದುಕೊಂಡ ಬಲಿಪಶುಗಳ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್‌ ಖಾತೆಗಳಿಂದ ದೊಡ್ಡ ಜಾಲವೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರಿಗೆ ಪಾವತಿ ಸುಲಭವಾಗಿಸಲು ಅನೇಕ ಆ್ಯಪ್‌ಗಳು ಬಂದಿವೆ. ಆದರೆ ಯಾವ ಆ್ಯಪ್‌ ಕೂಡ ಸುರಕ್ಷಿತವಲ್ಲ. ಹ್ಯಾಕರ್‌ಗಳು ಆ್ಯಪ್‌ಗಳನ್ನು ಬಳಸಿಕೊಂಡು ಬ್ಯಾಂಕ್‌ ಖಾತೆಗಳಿಗೆ ಖನ್ನ ಹಾಕುತ್ತಿದ್ದಾರೆ ಎಂಬ ಇತ್ತೀಚಿನ ವರದಿಗಳು ಬಳಕೆದಾರರಲ್ಲಿ ಭಯ ಮೂಡಿಸಿದೆ.

ಹೈದರಾಬಾದ್​ನಲ್ಲಿ ಗಂಟೆಗೆ ಕನಿಷ್ಠ ಒಂದು ಸೈಬರ್ ಅಪರಾಧ ದಾಖಲಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ತಡೆ ನಿಟ್ಟಿನಲ್ಲಿ ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆ, ರಾಷ್ಟ್ರೀಯ ಪೊಲೀಸ್ ಅಕಾಡೆಮಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ, ಸೈಬರ್ ಅಪರಾಧಿಗಳ ಕಾರ್ಯಾಚರಣೆ ವಿಧಾನ ಮತ್ತು ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಎನ್‌ಪಿಎ ಪೊಲೀಸ್ ಅಧಿಕಾರಿಗಳಿಗೆ ಎಸ್‌ಐನಿಂದ ಡಿಎಸ್‌ಪಿ ಹಂತದವರೆಗೆ ತರಬೇತಿ ನೀಡಲಿದೆ. ಕಳೆದ ವರ್ಷ ತೆಲಂಗಾಣದಲ್ಲಿ 14,000 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಅವುಗಳಲ್ಲಿ ಬೆರಳೆಣಿಕೆಯಷ್ಟಕ್ಕೆ ಮಾತ್ರ ಪರಿಹಾರ ಲಭಿಸಿದೆ. ಮಿಕ್ಕ ಪ್ರಕರಣಗಳಲ್ಲಿ ಅಪರಾಧಿಗಳ ಸುಳಿವೂ ಸಿಕ್ಕಿಲ್ಲ. ಹೀಗಾಗಿ ಈ ತರಬೇತಿಯು ಸೈಬರ್ ಅಪರಾಧಗಳನ್ನು ಉತ್ತಮವಾಗಿ ನಿರ್ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸೈಬರ್‌ ಅಪರಾಧ ನಿಯಂತ್ರಣದಲ್ಲಿ ಕರ್ನಾಟಕ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಸೈಬರ್, ಹಣಕಾಸು ಮತ್ತು ಮಾದಕವಸ್ತು ಕಳ್ಳಸಾಗಣೆ ಅಪರಾಧ ಪ್ರಕರಣಗಳಿಗೆ ವಿಶೇಷ ಪೊಲೀಸ್ ಠಾಣೆಗಳನ್ನು ನೇಮಿಸಿದ ಕರ್ನಾಟಕ ಸರ್ಕಾರ, ಈ ವಿಭಾಗದಲ್ಲಿ ತರಬೇತಿ ಪಡೆದ ಸಿಬ್ಬಂದಿಗಳ ಕೊರತೆ ಇದೆ ಎಂದು ಇತ್ತೀಚೆಗೆ ಬಹಿರಂಗಪಡಿಸಿದೆ. ಸೂಕ್ಷ್ಮ ಡೇಟಾವನ್ನು ಕದಿಯುವ ಹ್ಯಾಕರ್‌ಗಳನ್ನು ತಡೆಯಲು ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿಕೊಂಡಿವೆ ಎಂಬುದು ತಿಳಿದಿರುವ ಸತ್ಯ. ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಸೈಬರ್‌ ಖದೀಮರ ಬೇರುಗಳನ್ನು ಪೊಲೀಸರು ಪರಿಣಾಮಕಾರಿಯಾಗಿ ಪತ್ತೆಹಚ್ಚುತ್ತಿದ್ದರೂ, ಹೆಚ್ಚುತ್ತಿರುವ ಇ-ಕಾಮರ್ಸ್ ಹಗರಣಗಳು ಮತ್ತು ಬ್ಯಾಂಕ್ ಖಾತೆ ಹ್ಯಾಕಿಂಗ್‌ಗಳನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆರ್‌ಬಿಐನ ಮಾಜಿ ಉಪ ಗವರ್ನರ್ ಎಸ್‌ಪಿ ತಲ್ವಾರ್ ಸೂಚಿಸಿದಂತೆ, ಸರ್ಕಾರಗಳು ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಬಳಸಿಕೊಳ್ಳುವತ್ತ ಗಮನ ಹರಿಸಬೇಕು.

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ಸೈಬರ್ ಅಪರಾಧಗಳು ಅತಿ ಹೆಚ್ಚು ಸಂಭವಿಸಿದ 6 ರಾಜ್ಯಗಳಲ್ಲಿ ಸೇರಿವೆ. 2016 ಮತ್ತು 2018 ರ ನಡುವೆ ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ 33,000 ಸೈಬರ್ ಅಪರಾಧ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಅದೇ ಅವಧಿಯಲ್ಲಿ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕನಿಷ್ಠ ಎರಡು ಪಟ್ಟು ಹೆಚ್ಚು ಸೈಬರ್‌ ಕ್ರೈಂಗಳು ಸಂಭವಿಸಿವೆ.

ರಾಜಸ್ಥಾನದ ಭರತ್‌ಪುರ ಒಎಲ್‌ಎಕ್ಸ್ ವಾಹನ ಖರೀದಿ ಹಗರಣಗಳಿಗೆ ಕುಖ್ಯಾತವಾಗಿದ್ದರೆ, ಜಾರ್ಖಂಡ್‌ನ ಜಮ್ತಾರಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಗರಣಗಳಿಗೆ ಕುಖ್ಯಾತವಾಗಿದೆ. ಈ ವಂಚಕ ಗ್ಯಾಂಗ್‌ಗಳು ದಕ್ಷಿಣ ರಾಜ್ಯಗಳನ್ನು ಗುರಿಯಾಗಿಸಿವೆ ಎಂದು ಇತ್ತೀಚಿನ ವಂಚನೆಗಳು ಸಾಬೀತುಪಡಿಸುತ್ತವೆ. ನಕಲಿ ಪ್ಯಾನ್ ಕಾರ್ಡ್ ರಚಿಸುವ ಮೂಲಕ ಮೋಸಗಾರರು ಲಕ್ಷಾಂತರ ರೂಪಾಯಿಗಳನ್ನು ದೋಚುತ್ತಿವೆ. ಇದರಿಂದ ವಂಚನೆಗೊಳಗಾದವರ ಪಟ್ಟಿ ದೊಡದಿದ್ದು, ಇತ್ತೀಚಿನ ಆನ್‌ಲೈನ್ ಹಗರಣವು ಈ ದಾಳಿಯ ವ್ಯಾಪ್ತಿಯನ್ನು ತೋರಿಸುತ್ತದೆ. ಜನಪ್ರಿಯ ಬ್ರ್ಯಾಂಡ್‌ಗಳ ಮೇಲೆ ಭಾರಿ ರಿಯಾಯಿತಿ ಎಂಬ ಮೋಸದ ಜಾಹೀರಾತುಗಳಿಂದ ವಂಚಿಸುವ ಜಾಲವೊಂದು ಪತ್ತೆಯಾಗಿದೆ. ಇದನ್ನು ನಂಬುವ ಮೂಲಕ ಜನರು ತಮ್ಮ ಜೇಬಿನಲ್ಲಿ ಆಳವಾದ ರಂಧ್ರ ತೊಡಿಕೊಂಡು ಹಣ ಕಳೆದುಕೊಂಡಿರುವ ವರದಿಗಳು ಮಾಮೂಲಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಜನರು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸುವುದರಿಂದ ಹಿಡಿದು ಆನ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ಖರೀದಿಸುವವರೆಗೆ ಪ್ರತಿಯೊಂದು ವಹಿವಾಟು ಮಾಡಲು ಬಯಸುತ್ತಾರೆ; ಇದನ್ನೇ ಲಾಭವಾಗಿಸಿಕೊಳ್ಳುತ್ತಿರುವ ಈ ಸೈಬರ್ ಅಪರಾಧಿಗಳು ಅಲ್ಪಸ್ವಲ್ಪ ಅವಕಾಶದೊಂದಿಗೆ ಹಣ ದೋಚುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಲು ಸಂತ್ರಸ್ತರಿಗೆ ಅನುಕೂಲವಾಗುವಂತೆ ಭಾರತ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಉಪಕ್ರಮವನ್ನು ಯಶಸ್ವಿಗೊಳಿಸಲು, ಡಿಜಿಟಲ್ ಅಪರಾಧಗಳನ್ನು ನಿರ್ಬಂಧಿಸುವಲ್ಲಿ ಮೋದಿ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಪ್ರತ್ಯೇಕವಾಗಿ ಸಮನ್ವಯ ಸಾಧಿಸಬೇಕು. ದಿನಿನಿತ್ಯ ಇಂಟರ್ನೆಟ್‌ ಬ್ಯಾಂಕಿಂಗ್‌, ಕಾರ್ಡ್‌ಗಳನ್ನು ನಕಲಾಗಿಸಿ ಹಣ ದೋಚುತ್ತಿರುವ ಸೈಬರ್ ಅಪರಾಧಗಳು ಕೇವಲ ವೈಯಕ್ತಿಕ ಹಣಕಾಸನ್ನು ತಲೆಕೆಳಗಾಗಿಸುವುದು ಮಾತ್ರವಲ್ಲ. ದೇಶದ ಆರ್ಥಿಕತೆಯನ್ನು ನಡುಗುವಂತೆ ಮಾಡುತ್ತಿವೆ. ಕುಡಂಕುಲಂ ಪರಮಾಣು ವಿದ್ಯುತ್ ಸ್ಥಾವರ ಜಾಲದಲ್ಲಿ ಸೈಬರ್ ದಾಳಿಯ ವರದಿಗಳು ಖಚಿತವಾದ ನಂತರ ಸಾಮಾಜಿಕ ಮಾಧ್ಯಮದ ಅನೇಕರು ಬೆವರಿದರು. ಆಂಧ್ರ ಮತ್ತು ತೆಲಂಗಾಣದ ವಿದ್ಯುತ್ ಉಪಯುಕ್ತ ತಾಣಗಳ ಮೇಲೆ ಇತ್ತೀಚೆಗೆ ನಡೆದ ರ್ಯಾನ್‌ಸೋಮ್‌ವೇರ್‌ ದಾಳಿಯು ರಾಷ್ಟ್ರವು ನಿಜವಾಗಿಯೂ ಗಂಭೀರ ಸೈಬರ್ ಅಪರಾಧ ಬೆದರಿಕೆಗಳನ್ನು ಎದುರಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿತು.

ಸೈಬರ್ ದಾಳಿಯಿಂದ ದೇಶದಲ್ಲಿ ವಹಿವಾಟು ನಡೆಸುತ್ತಿರುವ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಕಳೆದ 5 ವರ್ಷಗಳಲ್ಲಿ 370 ಲಕ್ಷ ಕೋಟಿ ರೂ. ಕಳೆದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಸೈಬರ್‌ ಸೆಕ್ಯುರಿಟಿ ಎಂಟರ್‌ಪ್ರೈಸ್ ಸಿಮ್ಯಾಂಟೆಕ್, ಪೋಲೆಂಡ್, ವಿಯೆಟ್ನಾಂ, ಬಾಂಗ್ಲಾದೇಶ ಮತ್ತು ಈಕ್ವೆಡಾರ್‌ನಲ್ಲಿ ಭಾರಿ ಖಾತೆ ಹ್ಯಾಕಿಂಗ್‌ಗಳನ್ನು ದೃಢಪಡಿಸಿದೆ; ಸೈಬರ್ ಸುರಕ್ಷತೆಯಲ್ಲಿ ಭಾರತದ ಭೀಕರ ಸ್ಥಿತಿಯ ಬಗ್ಗೆ ಎಚ್ಚರಿಸಲಾಗಿದೆ. ಚೀನಾ ವಿಶಿಷ್ಟ ಸೈಬರ್‌ ಸುರಕ್ಷತೆ ಮತ್ತು ದತ್ತಾಂಶ ಸಂರಕ್ಷಣಾ ಆಡಳಿತವನ್ನು ಅಭಿವೃದ್ಧಿಪಡಿಸುತ್ತಿದೆ.

ಮೋದಿ ಸರ್ಕಾರ ಪ್ರತಿಷ್ಠಿತ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಮತ್ತು ವಿಶೇಷ ಸೈಬರ್‌ ಸೆಕ್ಯುರಿಟಿ ಪೋರ್ಟಲ್ ಅನ್ನು ಪ್ರಾರಂಭಿಸಿದ್ದರೂ, ನಿರಂತರವಾಗಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ತೋರಿಸುತ್ತವೆ. ವಿಶೇಷವಾಗಿ ಬ್ಯಾಂಕ್‌ ಖಾತೆಗಳಿಂದ ಹಣ ಲೂಟಿ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇಂಟರ್‌ನೆಟ್‌ನಲ್ಲಿ, ಇ-ಕಾಮರ್ಸ್‌ ಪೋರ್ಟಲ್‌ಗಳಲ್ಲಿ ನಕಲಿ ಮಾರಾಟ ಜಾಲಗಳು ದೊಡ್ಡದಾಗುತ್ತಿವೆ. ಕುಳಿತ ಜಾಗದಿಂದಲೇ ಹಣ ಯಾಮಾರಿಸುವ ಲೂಟಿಕೋರರಿಂದ ಹಣ ಸಂರಕ್ಷಣೆ ಇಂದು ದೊಡ್ಡ ಸವಾಲಾಗುತ್ತಿದೆ. ರಾಷ್ಟ್ರದ ಹಣಕಾಸು ಮತ್ತು ರಕ್ಷಣಾ ಜಾಲಗಳನ್ನು ರಕ್ಷಿಸಲು 2020 ರ ವೇಳೆಗೆ 10 ಲಕ್ಷ ಸೈಬರ್‌ ಸೆಕ್ಯುರಿಟಿ ವೃತ್ತಿಪರರು ಬೇಕಾಗುತ್ತಾರೆ ಎಂದು ಸಾಫ್ಟ್‌ವೇರ್ ಮತ್ತು ಸೇವೆಗಳ ಕಂಪನಿಗಳ ರಾಷ್ಟ್ರೀಯ ಸಂಘ (ನಾಸ್ಕಾಮ್) ಊಹಿಸಿದೆ. ಸೈಬರ್‌ ಸೆಕ್ಯುರಿಟಿ ತಜ್ಞರಿಗೆ ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ, ಪೂರೈಕೆ ಇನ್ನೂ ವಿರಳವಾಗಿದೆ. ಗಗನಕ್ಕೇರುವ ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಕಠಿಣ ಸವಾಲು ಸರ್ಕಾರದ ಮುಂದಿದೆ. ಆ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸುವತ್ತ ಸರ್ಕಾರ ಗಮನ ಹರಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.