ತಿರುವನಂತಪುರಂ(ಕೇರಳ): ಖ್ಯಾತ ಟಿವಿ ನಿರೂಪಕಿ ಹಾಗೂ ಸೆಲಬ್ರಿಟಿಯಾಗಿ ಗುರುತಿಸಿಕೊಂಡಿದ್ದ ಜಾಗೀ ಜಾನ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತಿರುವನಂತಪುರಂನ ಕೊರವನಕೋಣಂನಲ್ಲಿ ವಾಸವಾಗಿದ್ದ ಅವರು ಇದೀಗ ಶವವಾಗಿ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ತಾಯಿ ಜತೆ ವಾಸವಾಗಿದ್ದ ಇವರ ಸಾವಿಗೆ ಕಾರಣ ಏನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲವಾಗಿರುವುದರಿಂದ ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ 4 ಗಂಟೆಗೆ ಮನೆಯ ಕಿಚನ್ನಲ್ಲಿ ಈಕೆಯ ಮೃತದೇಹ ಪತ್ತೆಯಾಗಿದೆ. 38 ವರ್ಷದ ಜಾಗೀ ಫ್ಯಾಷನ್,ಮ್ಯೂಸಿಕ್, ಟಿವಿ ಕಾರ್ಯಕ್ರಮ ಸೇರಿದಂತೆ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಮೃತ ಜಾಗೀ ದೇಹದ ಮೇಲೆ ಯಾವುದೇ ಗುರುತುಗಳು ಕಂಡು ಬಂದಿಲ್ಲ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಇನ್ನು ಈಕೆಯ ತಾಯಿ ತಿಳಿಸಿರುವ ಪ್ರಕಾರ ಆಕೆ ಮೆಮರಿ ಲಾಸ್ನಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ.