ETV Bharat / bharat

ವೇದಿಕೆಯ ಮೇಲೆಯೇ ಚಿಕನ್​​ ತಿಂದ್ರು: ಇದು ಯಾತಕ್ಕಾಗಿ ಗೊತ್ತೇ?

author img

By

Published : Feb 29, 2020, 7:10 PM IST

ಚಿಕನ್​ ತಿನ್ನುವುದರಿಂದಾಗಿ ಕೊರೊನಾ ವೈರಸ್​​ ಬರುವ ಸಾಧ್ಯತೆ ಇದೆ ಎಂದು ಎಲ್ಲೆಡೆ ವೈರಲ್​ ಆಗಿದ್ದು, ಚಿಕನ್​ ತಿನ್ನುವುದರಿಂದ ಕೊರೊನಾ ವೈರಸ್​​ ಬರಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ತೆಲಂಗಾಣ ಸಚಿವರು ವೇದಿಕೆಯ ಮೇಲೆಯೆ ಚಿಕನ್​​ ತಿಂದಿದ್ದಾರೆ.

Telangana ministers eat chicken on public stage
ವೇದಿಕೆಯ ಮೇಲೆ ಚಿಕನ್​​ ತಿಂದ ಸಚಿವರು

ಹೈದರಾಬಾದ್​​(ತೆಲಂಗಾಣ): ಚಿಕನ್​ ತಿನ್ನುವುದರಿಂದಾಗಿ ಕೊರೊನಾ ವೈರಸ್​​ ಬರಲಿದೆ ಎಂಬ ಭಯವನ್ನು ಜನರ ಮನಸ್ಸಿನಿಂದ ಹೋಗಲಾಡಿಸುವ ಉದ್ದೇಶದಿಂದ ತೆಲಂಗಾಣ ಸಚಿವರುಗಳಾದ ಕೆ.ಟಿ.ರಾಮರಾವ್​​, ಎಟೆಲಾ ರಾಜೇಂದ್ರ, ತಲಸನಿ ಶ್ರೀನಿವಾಸ್​ ಹಾಗೂ ಮತ್ತಿತರು ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಚಿಕನ್​ ಪೀಸ್​​ಗಳನ್ನು ತಿನ್ನುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಹೈದರಾಬಾದ್​​ನ ಟ್ಯಾಂಕ್​ ಬಂಡ್​​ ಪ್ರದೇಶದಲ್ಲಿ ವೆಂಕಾಬ್​​ ಚಿಕನ್​ ಬಾಯ್ಲರ್​ ಕಂಪನಿಯಿಂದ ಕೊರೊನಾ ವೈರಸ್​​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಿಕನ್​​ ಮತ್ತು ಎಗ್​​ ಮೇಳ ಎಂಬ ಕಾರ್ಯಕ್ರಮದಲ್ಲಿ ಸಚಿವರುಗಳು ಭಾಗಿಯಾಗಿದ್ದು, ಈ ವೇಳೆ, ವೇದಿಕೆಯ ಮೇಲೆಯೇ ಸಾರ್ವಜನಿಕರ ಎದುರು ಚಿಕನ್​​ ಸವಿಯುವ ಮೂಲಕ, ಚಿಕನ್​ನಿಂದಾಗಿ ಕೊರೊನಾ ವೈರಸ್​​ ಬರಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವೇದಿಕೆಯ ಮೇಲೆ ಚಿಕನ್​​ ತಿಂದ ಸಚಿವರು

ಕೊರೊನಾ ವೈರಸ್​​ ಎಂಬ ಮಹಾಮಾರಿ ಚೀನಾದ ಉಹಾನ್​ ಸಿಟಿಗೆ ಆವರಿಸಿಕೊಂಡು 2800ಕ್ಕೂ ಹೆಚ್ಚು ಜನರನ್ನ ಬಲಿಪಡೆದುಕೊಂಡಿದೆ. ಅದಲ್ಲದೇ ಈ ರೋಗ ವಿಶ್ವವ್ಯಾಪಿಯಾಗಿ ಹಬ್ಬಿದ್ದು, ಸಾಕಷ್ಟು ಜೀವ ಹಾನಿಯನ್ನು ಉಂಟು ಮಾಡಿದೆ. ಚಿಕನ್​​ ತಿನ್ನುವುದರಿಂದಾಗಿ ಕೊರೊನಾ ವೈರಸ್​ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಬಗ್ಗೆ ಚಿಕನ್​ ಪ್ರಿಯರು ತೀವ್ರ ಭಯ ಭೀತರಾಗಿ ಚಿಕನ್​ ತಿನ್ನುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು.

ಸಾಕಷ್ಟು ಸಂಸ್ಥೆಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು ಸಹ, ಮಾಂಸ​ ಪ್ರಿಯರು ಮಾತ್ರ ಚಿಕನ್ ತಿನ್ನುವುದಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ, ಸಚಿವರುಗಳು ವೇದಿಕೆಯ ಮೇಲೆಯೇ ಚಿಕನ್​ ಖಾದ್ಯವನ್ನು ಸವಿಯುವ ಮೂಲಕ ಸಾರ್ವಜನಿಕರಲ್ಲಿ ಮೂಡಿರುವ ಭಯ ಹೋಗಲಾಡಿಸುವ ಯತ್ನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.