ಹೈದರಾಬಾದ್: ಗೂಗಲ್ನಲ್ಲಿ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ ಮಹಿಳೆಯೋರ್ವರ ಹೆಸರನ್ನು ಅಳಿಸದ ಆರೋಪದಲ್ಲಿ ಮೌನ ತಾಳಿರುವ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ನೀಡಿರುವ ತೆಲಂಗಾಣ ಹೈಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ನಗರ ಪ್ರದೇಶದ ವೃತ್ತಿನಿರತ ಮಹಿಳೆಯೋರ್ವರು ತನ್ನ ಹೆಸರನ್ನ ಗೋಗಲ್ನಲ್ಲಿ ಸರ್ಚ್ ಕೊಟ್ಟಾಗ, ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಆಕೆಯ ಹೆಸರು ಹಾಗೂ ಸರ್ ನೇಮ್ ಕಾಣಿಸಿಕೊಳ್ಳುತ್ತಿದೆ. ಇದರಿಂದ ನನ್ನ ಹೆಸರಿಗೆ ಧಕ್ಕೆಯಾಗುವ ಕೆಲಸವಾಗುತ್ತಿದೆ. ಅಲ್ಲದೇ ನಾನು ಕೆಲಸ ಮಾಡುವ ಕಚೇರಿಯಲ್ಲಿ ನನ್ನ ಸಹುದ್ಯೋಗಿಗಳು ಟೀಕಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ನ್ಯಾಯಾಧೀಶ ಎ.ರಾಜಶೇಖರ್ ರೆಡ್ಡಿ, ಇದೀಗ ಈ ವಿಚಾರದಲ್ಲಿ ಮೌನ ತಾಳಿರುವ ಗೂಗಲ್ಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.
2017 ರಲ್ಲಿ ಮೊದಲ ಬಾರಿ ತನ್ನ ಸ್ನೇಹಿತರು ಈ ವಿಷಯವನ್ನು ಗಮನಕ್ಕೆ ತಂದಾಗ, ಸೈಬರ್ ಕ್ರೈಮ್ ಪೊಲೀಸ್ ಇಲಾಖೆಗೆ ನೊಂದ ಮಹಿಳೆ ದೂರು ನೀಡಿದ್ದರು. 2018 ರಲ್ಲಿ ಅಮೇರಿಕಾದ ವೆಬ್ಸೈಟ್ ಪ್ರೊಟೆಕ್ಷನ್ ಪೋರ್ಟಲ್ ಪೇಜ್ ಡಿಎಮ್ಸಿಎ ಗೆ ಅಶ್ಲೀಲ ವೆಬ್‌ಸೈಟ್‌ಗಳಲ್ಲಿರುವ ತನ್ನ ಹೆಸರನ್ನು ತೆಗೆದು ಹಾಕುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಡಿಎಮ್ಸಿಎ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ವಿಚಾರಣೆ ವೇಳೆ, ಈ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ಸೈಬರ್ ಕ್ರೈಮ್ ಪೊಲೀಸರು ಕೋರ್ಟ್ಗೆ ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಅಂತ್ಯದೊಳಗಾಗಿ ಪ್ರತಿಕ್ರಯಿಸುವಂತೆ ಗೂಗಲ್ಗೆ ಕೋರ್ಟ್ ನಿರ್ದೇಶಿಸಿದೆ.