ಪಾಟ್ನಾ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಪಾಟ್ನಾದ ಎಕೋ ಪಾರ್ಕ್ ಬಳಿ ಅವರು ಸಾಗುತ್ತಿದ್ದ ಕಾರು ಹಾಗೂ ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ತೇಜ್ , ಮಾರುತಿ ಕಾರಿನಲ್ಲಿ ಇಬ್ಬರು ಆಪ್ತರೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ಎರಡೂ ಕಾರುಗಳಿಗೆ ಹಾನಿಯಾಗಿದೆ. ತೇಜ್ ಕಾಲಿಗೆ ಪೆಟ್ಟಾಗಿದ್ದು, ಇಬ್ಬರು ಸಹಚರರ ತಲೆಗೆ ಗಾಯವಾಗಿದೆ. ಮತ್ತೊಂದು ಕಾರಿನಲ್ಲಿದ್ದ ಡ್ರೈವರ್ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತತ್ಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ತೇಜ್ ಈ ಹಿಂದೆ ಸಾಂಸಾರಿಕ ಸಮಸ್ಯೆಯಿಂದ ಸನ್ಯಾಸಿಯಂತೆ ಓಡಾಡುತ್ತಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರ ಆರ್ಜೆಡಿ ಪಕ್ಷ ನಿರೀಕ್ಷಿತ ಯಶಸ್ಸು ಗಳಿಸಿದ ಕಾರಣ ಮತ್ತೆ ಬೇಸರಗೊಂಡಿದ್ದರು. ಇದರ ಬೆನಲ್ಲೇ ಇಂದು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
_