ETV Bharat / bharat

ಡ್ರೋನ್​ ನೋಡ್ತಿವೆ... ಮನೆಯಿಂದ ಹೊರಬಂದ್ರೆ ಹುಷಾರ್​! - ಚೆನ್ನೈ

ಲಾಕ್​​ಡೌನ್​ ಧಿಕ್ಕರಿಸಿ ಮನಸೋ ಇಚ್ಛೆ ಸುತ್ತಾಡುವವರ ಮೇಲೆ ಹದ್ದಿನ ಕಣ್ಣಿಡಲು ಡ್ರೋನ್​ ಬಳಸಲು ಮುಂದಾಗಿದ್ದಾರೆ ತಮಿಳುನಾಡು ಪೊಲೀಸರು. ತಮಿಳುನಾಡು ಪೊಲೀಸರ ಈ ಕ್ರಮ ಇತರ ರಾಜ್ಯಗಳಿಗೂ ಮಾದರಿಯಾದರೂ ಆಶ್ಚರ್ಯವಿಲ್ಲ.

police-deploy-drones, ಡ್ರೋನ್​ ಕ್ಯಾಮೆರಾ
police-deploy-drones
author img

By

Published : Mar 28, 2020, 3:53 PM IST

ಚೆನ್ನೈ: ಲಾಕ್​ಡೌನ್​ ಇದ್ದರೂ ಸುಮ್ಮನೆ ಬೀದಿ ಸುತ್ತುವವರ ಮೇಲೆ ಕಣ್ಣಿಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಬೃಹತ್ ಮಹಾನಗರಗಳಲ್ಲಿ ಎಲ್ಲ ಪ್ರದೇಶಗಳಲ್ಲೂ ಪೊಲೀಸ್ ಕಾವಲು ಹಾಕುವುದು ಕಷ್ಟವೇ ಸರಿ. ಹೀಗಾಗಿ ತಮಿಳುನಾಡು ಪೊಲೀಸರು ಲಾಕ್​ಡೌನ್​ ಮಧ್ಯೆ ಸುತ್ತಾಡುವವರ ಮೇಲೆ ಕಣ್ಣಿಡಲು ಡ್ರೋನ್ ಬಳಸಲು ಮುಂದಾಗಿದ್ದಾರೆ. ಚೆನ್ನೈ, ಕನ್ಯಾಕುಮಾರಿ ಹಾಗೂ ಈರೋಡ್ ಜಿಲ್ಲೆಗಳಲ್ಲಿನ ಪೊಲೀಸರು ಡ್ರೋನ್​ ಕ್ಯಾಮೆರಾ ಮೂಲಕ ಎಲ್ಲೆಡೆ ಹದ್ದಿನ ಕಣ್ಣಿಡಲಿದ್ದಾರೆ.

ನಗರಗಳ ಪ್ರಮುಖ ಬೀದಿಗಳು, ಸ್ಥಳಗಳು ಹಾಗೂ ಅಂತಾರಾಜ್ಯ ಚೆಕ್​ಪೋಸ್ಟ್​ ಇರುವ ಸ್ಥಳಗಳ ಮೇಲೆ ಇನ್ನು ಡ್ರೋನ್ ಹಾರಾಡಲಿವೆ. ಅದರಲ್ಲೂ ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕ, ಕೇರಳ ಹಾಗೂ ಆಂಧ್ರ ಪ್ರದೇಶಗಳ ಗಡಿ ರೇಖೆಯಲ್ಲಿ ಡ್ರೋನ್ ಹೆಚ್ಚಾಗಿ ಕೆಲಸ ಮಾಡಲಿವೆ. ಈ ಮೂಲಕ ತಮಿಳುನಾಡಿನಿಂದ ಹೊರ ಹೋಗುವವರು ಹಾಗೂ ಬೇರೆ ರಾಜ್ಯಗಳಿಂದ ಒಳ ನುಸುಳುವವರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದಾರೆ.

'ಡ್ರೋನ್​ ಕ್ಯಾಮೆರಾಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಜನ ಹೊರಗೆ ಸುತ್ತಾಡಲು ಹಿಂಜರಿಯುತ್ತಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಮಾ.24 ರಿಂದ ಕಲಂ 144 ಜಾರಿಯಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವುದು ಖಚಿತ.' ಎಂದು ಕನ್ಯಾಕುಮಾರಿ ಎಸ್​ಪಿ ಹೇಳಿದ್ದಾರೆ.

ಚೆನ್ನೈ ಮುನಿಸಿಪಲ್ ಕಮೀಷನರ್ ಸಹ ಈಗಾಗಲೇ ಡ್ರೋನ್ ಮೂಲಕ ನಗರದ ಮೇಲೆ ಕಣ್ಗಾವಲು ಇಟ್ಟಿರುವ ಬಗ್ಗೆ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.