ಚೆನ್ನೈ ( ತಮಿಳುನಾಡು): ನೀರಿನೊಳಗೆ ಕುಳಿತು ದೀರ್ಘ ಉಸಿರು ಬಿಗಿ ಹಿಡಿದು ರೂಬಿಕ್ ಕ್ಯೂಬ್ ಆಟವನ್ನ ಆಡುವ ಮೂಲಕ ಯುವಕನೊಬ್ಬ ಈ ಹಿಂದಿನ ಗಿನ್ನೆಸ್ ವಿಶ್ವದಾಖಲೆಯನ್ನ ಪುಡಿಗಟ್ಟಿದ್ದಾನೆ.
ಚೆನ್ನೈನ 25 ವರ್ಷದ ಯುವಕ ಇಲ್ಯಾರಾಮ್ ಸೇಕರ್ ಈ ದಾಖಲೆ ಮುರಿದು ಹೊಸ ದಾಖಲೆ ಬರೆದವನಾಗಿದ್ದಾನೆ. 2014 ರಲ್ಲಿ ನೀರಿನೊಳಗೆ ಮುಳುಗಿ 5 ರೂಬಿಕ್ಸ್ ಕ್ಯೂಬ್ ಸಮಸ್ಯೆ ಬಗೆ ಹರಿಸಿ ದಾಖಲೆ ಬರೆಯಲಾಗಿತ್ತು. ಆದರೆ ಸೇಕರ್ ಸುಮಾರು 2.17 ನಿಮಿಷಗಳಲ್ಲಿ 6 ರೂಬಿಕ್ ಕ್ಯೂಬ್ಗಳನ್ನ ಯಶಸ್ವಿಯಾಗಿ ಪರಿಹರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸೇಕರ್ "ನಾನು ಅಂತಿಮವಾಗಿ ಆರು ವರ್ಷಗಳ ನಂತರ ದಾಖಲೆಯನ್ನು ಮುರಿದಿದ್ದೇನೆ. ಏಷ್ಯಾದಲ್ಲಿ ಈ ದಾಖಲೆಯನ್ನು ಮಾಡಿದ ಮೊದಲ ವ್ಯಕ್ತಿ ನಾನು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.