ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಪೋಯಸ್ ಗಾರ್ಡನ್ನಲ್ಲಿರುವ ಭವ್ಯ ಬಂಗಲೆ, ವೇದ ನಿಲಯಂ ನಿವಾಸವನ್ನ ಇದೀಗ ತಮಿಳುನಾಡು ಸರ್ಕಾರ ಬರೋಬ್ಬರಿ 68 ಕೋಟಿ ರೂ. ನೀಡಿ ಖರೀದಿ ಮಾಡಿದೆ.
24.322 ಚದರ ಅಡಿ ಆಸ್ತಿಗಾಗಿ ತಮಿಳುನಾಡು ಸರ್ಕಾರ ಇಷ್ಟೊಂದು ಕೋಟಿ ಕೋಟಿ ರೂ. ನೀಡಿದೆ. ಭೂ ಸ್ವಾಧೀನ ಕಾಯ್ದೆಯಡಿ ಆಸ್ತಿಗಾಗಿ ರಾಜ್ಯ ಸರ್ಕಾರ ಪ್ರತಿ ಚದರ ಅಡಿಗೆ 12,060 ರೂ. ನೀಡಿದೆ.

ಪೊಯರ್ಸ್ ಗಾರ್ಡನ್ನಲ್ಲಿರುವ ಜಯಲಲಿತಾ ಅವರ ವೇಧ ನಿಲಯಂಅನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯಪಾಲ ಬನ್ವರಿ ಲಾಲ್ ಪುರೋಹಿತ್ ಈ ಹಿಂದೆ ಸುಗ್ರೀವಾಜ್ಞೆ ಹೊರಡಿಸಿದ್ದರು. ಇದೀಗ ನಿವಾಸವನ್ನ ಸ್ಮಾರಕವಾಗಿಸಲು ತಾತ್ಕಾಲಿಕವಾಗಿ ಸ್ವಾಧೀನಕ್ಕೆ ಪಡೆಯಲಾಗಿದೆ.
ಜಯಲಲಿತಾ ವಾಸಿಸುತ್ತಿದ್ದ ಮನೆ ವೇದ ನಿಲಯಂಅನ್ನು ಸ್ಮಾರಕ ಎಂದು ಘೋಷಿಸಿ, 2019ರ ಜೂನ್ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.