ETV Bharat / bharat

ನನ್ನ ಜೀವನದಲ್ಲಿ ಇಂತಹ ದಿನಕ್ಕಾಗಿ ಕಾಯುತ್ತಿದ್ದೆ.. ಪ್ರಧಾನಿ ಮೋದಿಗೆ ಲಾಸ್ಟ್​ ಟ್ವೀಟ್​ ಮಾಡಿರುವ ಸುಷ್ಮಾ! - sushma swaraj

ಇಂದು ಮಧ್ಯಾಹ್ನ ಆರ್ಟಿಕಲ್​ 370 ರದ್ದತಿಗೆ ಲೋಕಸಭೆಯಿಂದ ಬಿಲ್​ ಪಾಸಾಗಿದ್ದು, ಇದಕ್ಕೆ ಮೋದಿಯವರಿಗೆ ಸುಷ್ಮಾ ಶುಭ ಕೋರಿದ್ದರು. ಮೂರು ಗಂಟೆಗಳ ಹಿಂದೆ ಬಿಲ್​ ಪಾಸ್​ ಆಗಿದ್ದಕ್ಕೆ ಟ್ವೀಟ್​ ಮೂಲಕ ಶುಭ ಕೋರಿದ್ದ ಅವರು, ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಥ್ಯಾಂಕ್​ ಯೂ ವೆರಿ ಮಚ್​’ ಅಂತಾ ಟ್ವೀಟ್​ ಮಾಡಿದ್ದರು.

ಸುಷ್ಮಾ ಕೊನೆಯ ಟ್ವೀಟ್​​
author img

By

Published : Aug 6, 2019, 11:55 PM IST

ನವದೆಹಲಿ : ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಏಮ್ಸ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್​​ 370 ರದ್ದುಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್​ ಮೂಲಕ ಶುಭ ಕೋರಿದ್ದರು. ಅದೇ ಅವರ ಕೊನೆಯ ಟ್ವೀಟಾಗಿರುವುದು ವಿಶೇಷ.

  • प्रधान मंत्री जी - आपका हार्दिक अभिनन्दन. मैं अपने जीवन में इस दिन को देखने की प्रतीक्षा कर रही थी. @narendramodi ji - Thank you Prime Minister. Thank you very much. I was waiting to see this day in my lifetime.

    — Sushma Swaraj (@SushmaSwaraj) August 6, 2019 " class="align-text-top noRightClick twitterSection" data=" ">

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್​ 370 ಬಿಲ್ ರದ್ದತಿ​ ಪ್ರಸ್ತಾವ ಅಂಗೀಕಾರಗೊಳ್ಳುತ್ತಿದ್ದಂತೆ ಮೋದಿಗೆ ವಿಶ್​ ಮಾಡಿದ್ದ ಸುಷ್ಮಾ ಸ್ವರಾಜ್‌, ಪ್ರಧಾನಮಂತ್ರಿ ಜೀ, ನಿಮಗೆ​​ ಅಭಿನಂದನೆಗಳು, ನಾನು ನನ್ನ ಜೀವನದಲ್ಲಿ ಈ ದಿನ ನೋಡಲು ಕಾಯುತ್ತಿದ್ದೆ ಎಂದು ಬರೆದುಕೊಂಡಿದ್ದರು. ಆದರೆ, ಇದೀಗ ಅವರು ಏಮ್ಸ್​ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಷ್ಮಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಂಬನಿ ಮಿಡಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.