ETV Bharat / bharat

ನಟ ಸುಶಾಂತ್​ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ: ಸುಬ್ರಮಣಿಯನ್​ ಸ್ವಾಮಿ - ಬಾಲಿವುಡ್​​ ನಟ ಸುಶಾಂತ್ ಸಿಂಗ್​

ಬಾಲಿವುಡ್​​ ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಈ ಮಧ್ಯೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ, ಸುಶಾಂತ್​​ರದ್ದು ಆತ್ಮಹತ್ಯೆ ಅಲ್ಲ, ಅದು ಪೂರ್ವನಿಯೋಜಿತವಾಗಿ ಮಾಡಿರುವ ಕೊಲೆ ಎಂದು ಪ್ರತಿಪಾದಿಸಿದ್ದಾರೆ.

Subramanian Swamy
ಸುಬ್ರಮಣಿಯನ್​ ಸ್ವಾಮಿ
author img

By

Published : Jul 30, 2020, 8:10 PM IST

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸ್ವಾಮಿ, ನಟನನ್ನು ಕೊಲೆ ಮಾಡಲಾಗಿದೆ ಎಂಬುದನ್ನು ಬಿಂಬಿಸುವ 26 ಅಂಶಗಳ ದಾಖಲೆಯ ಚಿತ್ರವೊಂದನ್ನು ಟ್ವಿಟರ್​ ಖಾತೆಯಲ್ಲಿ ಲಗತ್ತಿಸಿದ್ದಾರೆ.

ಈ ದಾಖಲೆಯ ಪ್ರಕಾರ, ಸುಶಾಂತ್ ಅವರ ಕತ್ತಿನಲ್ಲಿದ್ದ ಗುರುತು ಆತ್ಮಹತ್ಯೆಯನ್ನು ಸೂಚಿಸುವುದಿಲ್ಲ, ಬದಲಾಗಿ ಇದೊಂದು ಕೊಲೆ ಎಂದು ಸುಳಿವು ನೀಡುತ್ತಿದೆ. ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದ ಸುಶಾಂತ್​ ಕಾಲ ಕೆಳಗೆ ಒಂದು ಚೇರ್ ಇತ್ತು. ಸುಶಾಂತ್​​ ಅವರನ್ನು ಬೇರೆ ಯಾರೋ ನೇಣಿಗೇರಿಸಿ ನಂತರ ಆ ಟೇಬಲ್ ಅನ್ನು ಆತನ ಕಾಲಿನ ಕೆಳಗಿಟ್ಟು ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಸುಬ್ರಮಣಿಯನ್​ ಸ್ವಾಮಿ ಹೇಳಿದ್ದಾರೆ.

ಅವರ​ ದೇಹದ ಮೇಲೆ ಥಳಿಸಿರುವ ಗುರುತುಗಳಿವೆ, ಅದು ಆತ್ಮಹತ್ಯೆಯಾಗಿದ್ದರೆ ಮೈಮೇಲೆ ಥಳಿಸಿರುವ ಮಾರ್ಕ್​ಗಳು ಹೇಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿರುವ ಸ್ವಾಮಿ, ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.