ಪಾಟ್ನಾ (ಬಿಹಾರ): ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನ್ಯಾಯ ಸಿಗಬೇಕೆಂಬ ಬೇಡಿಕೆ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗುತ್ತಿದೆ. ಪರಿಣಾಮ ಇದು ಬಿಹಾರದಲ್ಲೂ ಸಾಕಷ್ಟು ಪ್ರತಿಭಟನೆಗಳಿಗೆ ಕಾರಣವಾಗಿದೆ.
ಪಾಟ್ನಾದ ಕಾರ್ಗಿಲ್ ಚೌಕ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರ ಪೋಸ್ಟರ್ಗಳನ್ನು ಜನ ಅಧಿಕಾರ್ ವಿದ್ಯಾರ್ಥಿ ಪರಿಷತ್ತಿನ ನಾಯಕರು ಸುಟ್ಟುಹಾಕಿದರು.
ಕಳೆದ ಆರು ತಿಂಗಳಲ್ಲಿ ಏಳು ಚಲನಚಿತ್ರಗಳನ್ನು ಸುಶಾಂತ್ ಅವರಿಂದ ಕಸಿದುಕೊಂಡಿದ್ದಾರೆ ಮತ್ತು ಬಾಲಿವುಡ್‌ನ ಪ್ರಭಾವಿ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅವರ ಜೀವನವನ್ನು ಕಠಿಣಗೊಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
"ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಹಿಂದೆ ಬಾಲಿವುಡ್‌ನ ದೊಡ್ಡವರು ಇದ್ದಾರೆ. ಸುಶಾಂತ್ ಒಬ್ಬ ಚಲನಚಿತ್ರ ತಾರಾ ಮೆರಗಿರುವವರ ಮಗನಲ್ಲ ಎಂದು ತಾರತಮ್ಯ ಮಾಡಲಾಗಿದೆ. ಸುಶಾಂತ್ಗೆ ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಜನ ಅಧಿಕಾರ್ ವಿದ್ಯಾರ್ಥಿ ಪರಿಷತ್ತಿನ ನಾಯಕರು ಒತ್ತಾಯಿಸಿದ್ದಾರೆ.
ಸುಶಾಂತ್ ಸಾವಿನ ರಹಸ್ಯ ಬಗೆಹರಿಸಲು ಸಿಬಿಐ ಈ ಪ್ರಕರಣದ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.